

Champions Tropy:ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಯಲ್ಲಿ ಟೀಮ್ ಇಂಡಿಯಾದ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡುತ್ತಿರುವುದರಿಂದ ಅವರಿಗೆ ತುಂಬಾ ಅನುಕೂಲಕರವಾಗಿದೆ ಎಂದು ಪಾಕ್ನ ನಾಸರ್ ಹುಸೇನ್ ಮತ್ತು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ಅಥರ್ಟನ್ ಹೇಳಿಕೆ ವಿರುದ್ಧ ಭಾರತದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಖಾರವಾಗಿ ಟೀಕಿಸಿದ್ದಾರೆ.
ಈ ಕುರಿತು ಮಾತನಾಡಿರುವ ಗವಾಸ್ಕರ್, '' ಅವರು(ನಾಸರ್ ಹುಸೇನ್, ಮೈಕಲ್ ) ಯಾವಾಗಲೂ ಕೊರಗುತ್ತಲೇ ಇರುತ್ತಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತದ ಸ್ಥಾನ ಎಲ್ಲಿದೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಗುಣಮಟ್ಟ, ಆದಾಯ, ಪ್ರತಿಭೆ ಮತ್ತು ಮುಖ್ಯವಾಗಿ ಆದಾಯಗಳಿಸುವ ವಿಷಯದಲ್ಲಿ ಟೀಮ್ ಇಂಡಿಯಾ ಟಾಪ್ನಲ್ಲಿದೆ. ಅಲ್ಲದೆ, ದೂರದರ್ಶನ ಹಕ್ಕುಗಳು ಮತ್ತು ಮಾಧ್ಯಮ ಆದಾಯದ ಮೂಲಕ ಜಾಗತಿಕ ಕ್ರಿಕೆಟ್ಗೆ ಭಾರತದ ಕೊಡುಗೆ ದೊಡ್ಡ ಪಾತ್ರವನ್ನು ವಹಿಸುತ್ತದೆ. ಭಾರತವು ಕ್ರಿಕೆಟ್ ಜಗತ್ತಿಗೆ ನೀಡುತ್ತಿರುವ ಕೊಡುಗೆಯಿಂದದಾಗಿಯೇ(ನಾಸರ್ ಹುಸೇನ್, ಮೈಕಲ್) ಅವರ ಸಂಬಳವೂ ಬರುತ್ತದೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು." ಎಂದಿದ್ದಾರೆ.
ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ (Champions Trophy) ಪಂದ್ಯಕ್ಕೂ ಮುನ್ನ ಈ ಬಗ್ಗೆ ಮಾತನಾಡಿದ ಆಕಿಬ್ ಜಾವೇದ್, ಭಾರತ ತಂಡವು ದುಬೈ ಮೈದಾನದಲ್ಲೇ ಎಲ್ಲಾ ಪಂದ್ಯಗಳನ್ನು ಆಡುತ್ತಿರುವುದರಿಂದ ತಂಡಕ್ಕೆ ಹೆಚ್ಚು ಅನುಕೂಲವಾಗುತ್ತಿದೆ. ಭಾರತ ತಂಡವು ಒಂದೇ ಮೈದಾನದಲ್ಲಿ ಆಡುತ್ತಿದೆ, ಒಂದೇ ಹೋಟೆಲ್ನಲ್ಲಿ ಉಳಿದುಕೊಂಡಿದೆ. ಇದೊಂದೇ ಕಾರಣಕ್ಕೆ ಭಾರತ ಎದುರು ಪಾಕಿಸ್ತಾನ ಸೋಲು ಕಂಡಿತು ಎಂದು ಹೇಳಲಾರೆ. ತಂಡದಲ್ಲಿನ ಅನುಭವದ ಕೊರತೆಯಿಂದಾಗಿ ನಾವು ಭಾರತದ ವಿರುದ್ಧ ಸೋಲು ಕಂಡೆವು ಎಂದಿದ್ದರು. ಬಳಿಕ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ಅಥರ್ಟನ್ ಕೂಡ ಇದೇ ಹೇಳಿಕೆ ಉಲ್ಲೇಖಿಸಿ ಮಾತನಾಡಿದ್ದರು.(ಏಜೆನ್ಸೀಸ್)