ಕುಂಭಮೇಳದ ಸಮಯದಲ್ಲಿ ಜನಪ್ರಿಯತೆ ಗಳಿಸಿದ IIT ಬಾಬಾ ಎಂದು ಕರೆಯಲ್ಪಡುವ ಅಭಯ್ ಸಿಂಗ್ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.
ನೊಯ್ಡಾದ ಖಾಸಜಗಿ ಚಾನಲ್ನಲ್ಲಿ ನಡೆದ ಸುದ್ದಿ ಚರ್ಚೆ(ಡಿಬೇಟ್) ವೇಳೆ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಸ್ವತ ಐಐಟಿ ಬಾಬಾ ದೂರು ನೀಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ:ಟ್ರಂಪ್- ವೊಲೊಡಿಮಿರ್ ಝೆಲೆನ್ಸ್ಕಿ ನಡುವೆ ಜಟಾಪಟಿ; ಸಭೆ ಮಧ್ಯೆ ಹೊರ ನಡೆದ ಯುಕ್ರೇನ್ ಅಧ್ಯಕ್ಷ | US President
”ಚರ್ಚೆ ವೇಳೆ ಏಕಾಏಕಿ ಸುದ್ದಿ ಸಂಸ್ಥೆಗೆ ನುಗ್ಗಿದ ಕೇಸರಿ ಬಟ್ಟೆ ಧರಿಸಿದ ಕೆಲವರ ಗುಂಪೊಂದು ಅನುಚಿತವಾಗಿ ವರ್ತಿಸಿ, ಕೋಲುಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಅಭಯ್ ಸಿಂಗ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ”.
ಘಟನೆ ಬಳಿಕ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮಾಡಿದ್ದಾರೆ. ಅಧಿಕಾರಿಗಳ ಮನವೊಲಿಕೆ ಬಳಿಕ ಪ್ರತಿಭಟನೆ ಹಿಂಪಡೆದಿದ್ದಾರೆ.
ಇದನ್ನೂ ಓದಿ:ಇದೊಂದು… ತಂಡದಲ್ಲಿನ ಇಂಜುರಿ ಸಮಸ್ಯೆ ಕುರಿತು ಶಾಕಿಂಗ್ ಹೇಳಿಕೆ ನೀಡಿದ Team India ಕೋಚ್
इसमें iit babaने चाय फेंक दिया है,हां सहित फेंका यह पाखंडी पंडितyoutupeपर एक मिनट में करोड पति बनवाए वाली कि भाषा और यह पाताल नाथ अपने आपको भगवा पहन रखा है बोलने का तरिका देखो।हम iit baba. के साथ है।जो स्टेज बाबा थे सब ढोगी थे। @NewsNationTV @_Tiwari__ @shivanya33 @Bambalal_BJP pic.twitter.com/kYaGjdcVns
— 🚩सनातन धर्म 🚩सनतान हिन्दू राष्ट्र 🚩मनिष चौधरी (@githala_manish) March 1, 2025
ಇನ್ನು ಈ ಕುರಿತು ಸಾಮಾಜಿಕ ಮಾಧ್ಯಮಲ್ಲಿ ವಿಡಿಯೋಂದು ಹರಿದಾಡುತ್ತಿದ್ದು, ” ಸ್ಟೂಡಿಯೋಗೆ ನುಗ್ಗಿ ಕಾವಿ ಗುಂಪೊಂದು ಐಐಟಿ ಬಾಬಾ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಬಾಬಾ ಹೊರ ಬರಲು ಹರಸಾಹಸ ಪಡಬೇಕಾಗಿತು ಎಂದು ವೈರಲ್ ಆಗಿರುವ ವಿಡಿಯೋದಲ್ಲಿ ಹೇಳಲಾಗಿದೆ. ಆದರೆ, ವಾಗ್ವಾದಕ್ಕೆ ಮತ್ತು ಹಲ್ಲೆಗೆ ಕಾರಣವೇನು ಎಂಬುದು ನಿಖರವಾಗಿ ತಿಳಿದಿಲ್ಲ”.(ಏಜೆನ್ಸೀಸ್)
ಹೋಳಿ ಹಬ್ಬಕ್ಕೆ LPG ಮತ್ತೆ ದುಬಾರಿ; ನಿಮ್ಮ ನಗರದಲ್ಲಿನ ಹೊಸ ಸಿಲಿಂಡರ್ನ ಬೆಲೆ ತಿಳಿಯಿರಿ
ಟ್ರಂಪ್- ವೊಲೊಡಿಮಿರ್ ಝೆಲೆನ್ಸ್ಕಿ ನಡುವೆ ಜಟಾಪಟಿ; ಸಭೆ ಮಧ್ಯೆ ಹೊರ ನಡೆದ ಯುಕ್ರೇನ್ ಅಧ್ಯಕ್ಷ | US President