ಟ್ರಾವಿಸ್​ ಹೆಡ್​ ಬ್ಯಾಟಿಂಗ್ ಇವರಿಬ್ಬರ ಮೇಲೂ ಪರಿಣಾಮ ಬೀರಿದೆ: ಇಂಗ್ಲೆಂಡ್​ನ ಮಾಜಿ ಆಟಗಾರ ಹೇಳಿದ್ದಿಷ್ಟು

WhatsApp Image 2024-05-28 at 9.18.37 AM
Published on

ನವದೆಹಲಿ: ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ರನ್ನರ್​ ಅಪ್ ಆಗುವ ಮೂಲಕ ಸೀಸನ್​ ಅಂತ್ಯಗೊಳಿಸಿದ ಸನ್​ರೈಸರ್ಸ್​ ಹೈದರಾಬಾದ್​, ಕ್ರಿಕೆಟ್ ಪ್ರಿಯರಿಗೆ ಉತ್ತಮ ಮನರಂಜನೆ ನೀಡುವಲ್ಲಿ ಹಿಂದೆ ಸರಿಯಲಿಲ್ಲ. 17ನೇ ಸೀಸನ್​ನ ಮೊದಲಾರ್ಧದದಲ್ಲಿ ಕಮೆಂಟೇಟರ್​ ಆಗಿ ಮೈದಾನದಲ್ಲಿ ಕಾಣಿಸಿಕೊಂಡ ಇಂಗ್ಲೆಂಡ್​ನ ಮಾಜಿ ಆಟಗಾರ ಇಯಾನ್ ಮಾರ್ಗನ್​, ನಾನು ಕಂಡ ಅತ್ಯುತ್ತಮ ಪ್ರದರ್ಶನ ಸನ್​ರೈಸರ್ಸ್​ ಪಡೆಯವರಿಂದಲೇ ಆಗಿತ್ತು ಎಂದಿದ್ದಾರೆ.

ಈ ಹಿಂದೆ ಕೆಕೆಆರ್​ ಕ್ಯಾಪ್ಟನ್ ಆಗಿದ್ದಲ್ಲದೇ ತಂಡದ ಪರ ಸ್ಪೋಟಕ ಬ್ಯಾಟಿಂಗ್ ಮಾಡಿ, ಎದುರಾಳಿಗಳ ಬೆವರಿಳಿಸಿದ್ದ ಮಾರ್ಗನ್​, ಈ ಬಾರಿಯ ಐಪಿಎಲ್​ನಲ್ಲಿ ಕಮೆಂಟೇಟರ್​​ ಆಗಿ ಕೆಲಸ ಮಾಡಿದರು. "ಮೊದಲಾರ್ಧದಲ್ಲಿ ನಾನು ಇದ್ದೆ. ಪ್ರತಿಯೊಂದು ಪಂದ್ಯಗಳನ್ನು ಎಂಜಾಯ್ ಮಾಡಿದೆ. ಹಿಂದಿನ ಸೀಸನ್‌ಗಳಿಗೆ ಹೋಲಿಸಿದರೆ ತಂಡಗಳು ರನ್ ಗಳಿಸಿದ ರೀತಿ ಮತ್ತು ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಬಳಕೆ ಮಾಡಿಕೊಂಡ ರೀತಿ ನಿಜಕ್ಕೂ ಚೆನ್ನಾಗಿತ್ತು. ಅದರಲ್ಲೂ ಎಸ್​ಆರ್​ಎಚ್​ ಟ್ರೆಂಡ್​ ಸೆಟ್ಟರ್​ ಆಗಿ ಹೊರಹೊಮ್ಮಿದ್ದು, ಕ್ರಿಕೆಟ್ ಅಭಿಮಾನಿಗಳನ್ನು ಮೋಡಿ ಮಾಡಿತು" ಎಂದರು.

ಎಸ್​ಆರ್​ಎಚ್​ ಪರ ಸ್ಪೋಟಕ ಬ್ಯಾಟಿಂಗ್​ಗೆ ಇಳಿದ ಟ್ರಾವಿಸ್​ ಹೆಡ್​, ಈ ಸೀಸನ್​ನ ಮೊದಲ ಕೆಲವು ಪಂದ್ಯಗಳನ್ನು ಆಡಲಿಲ್ಲ. ತದನಂತರ ಕ್ರೀಸ್​ಗೆ ಕಾಲಿಟ್ಟ ಹೆಡ್​, ಬೆರಳೆಣಿಕೆಯಷ್ಟು ಪಂದ್ಯಗಳನ್ನು ಬಿಟ್ಟರೆ ಉಳಿದೆಲ್ಲಾ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿ, ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. ಇನ್ನು ಈ ಬಗ್ಗೆ ಮಾತನಾಡಿದ ಇಯಾನ್, "ಹೆಡ್ ಅವರ​ ಸ್ಪೋಟಕ ಬ್ಯಾಟಿಂಗ್ ಆರಂಭಿಕ ಬ್ಯಾಟ್ಸ್​ಮನ್​ ಆದ ಅಭಿಷೇಕ್ ಶರ್ಮಾ ಮತ್ತು ಕ್ಲೇಸನ್​ ಬ್ಯಾಟಿಂಗ್ ಮೇಲೂ ಉತ್ತಮ ಪರಿಣಾಮ ಬೀರಿದೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net