He's Lost...ಅವನಿಂದ ಸಚಿನ್​ ದಾಖಲೆ ಮುರಿಯಲು ಸಾಧ್ಯವಿಲ್ಲ; ಮಾಜಿ ಸ್ಟಾರ್​ ನೀಡಿದ ಕಾರಣ ವೈರಲ್​

Virat Kohli
Published on

ನವದೆಹಲಿ: ಟೀಮ್​ ಇಂಡಿಯಾದ ಮಾಜಿ ನಾಯಕ, ರನ್​ ಮೆಷಿನ್​ ಎಂದೇ ಹೆಸರುವಾಸಿಯಾಗಿರುವ ವಿರಾಟ್​ ಕೊಹ್ಲಿ (Virat Kohli) ಏಕದಿನ ವಿಶ್ವಕಪ್​, ಐಪಿಎಲ್​ ಹಾಗೂ ಟಿ20 ವಿಶ್ವಕಪ್​ನಲ್ಲಿ ಭರ್ಜರಿ ರನ್​ ಗಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇದಾದ ಬಳಿಕ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ರನ್​ ಗಳಿಸಲು ಪರದಾಡಿದ್ದ ವಿರಾಟ್​ ತಮ್ಮ ಕಳಪೆ ಫಾರ್ಮ್​ಅನ್ನು ಬಾಂಗ್ಲಾದ ಎದುರು ಮುಂದುವರೆಸಿದ್ದು, ರನ್​ ಗಳಿಸದೆ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದಾರೆ.

ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಅವರ ದಾಖಲೆಯನ್ನು ಮುರಿಯುವ ಅವಕಾಶ ಹೊಂದಿದ್ದ ವಿರಾಟ್​ ಯಾಕೋ ಅದನ್ನು ಸಾಧ್ಯವಾಗಿಸುವುದು ಡೌಟ್​ ಎಂದು ಹೇಳಲಾಗುತ್ತಿದ್ದು, ಇದು ಅಸಾಧ್ಯ ಎಂದು ಮಾಜಿ ಕ್ರಿಕೆಟಿಗರೊಬ್ಬರು ಅಭಿಪ್ರಾಯಪಟ್ಟಿದ್ದು, ಇವರ ಹೇಳಿಕೆ ಕ್ರೀಡಾ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.

Brad Hogg

ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಪೋಸ್ಟ್​ ಮಾಡಿರುವ ವಿಡಿಯೋದಲ್ಲಿ ಈ ಕುರಿತು ಮಾತನಾಡಿರುವ ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಲೆಜೆಂಡರಿ ಆಟಗಾರ ಬ್ರಾಡ್​ ಹಾಗ್​, ವಿರಾಟ್, ಸ್ಮಿತ್ ಮತ್ತು ರೂಟ್ ಟೆಸ್ಟ್​ ಕ್ರಿಕೆಟ್​ನ ಶ್ರೇಷ್ಠ ಆಟಗಾರರು ಎಂದು ಪರಿಗಣಿಸಲಾಗಿದೆ. ತೆಂಡೂಲ್ಕರ್​ ಹೆಸರಿನಲ್ಲಿರುವ ದಾಖಲೆಗಳನ್ನು ಈ ಮೂವರು ಆಟಗಾರರಿಂದ ಮುರಿಯಲು ಸಾಧ್ಯ ಎಂದರೆ ತಪ್ಪಾಗಲಾರದು. ಆದರೆ, ನನ್ನ ಪ್ರಕಾರ ವಿರಾಟ್​ ಕೊಹ್ಲಿ ತೆಂಡೂಲ್ಕರ್​ ಹೆಸರಿನಲ್ಲಿರುವ ದಾಖಲೆಯನ್ನು ಮುರಿಯುತ್ತಾನೆ ಎಂಬುದು ಅನುಮಾನವಾಗಿದೆ. ‘

ಏಕೆಂದರೆ ಇತ್ತೀಚಿನ ದಿನಗಳಲ್ಲಿ ವಿರಾಟ್​ನನ್ನು ನೋಡಿದರೆ ಆತ ತನ್ನ ಆವೇಗವನ್ನು ಕಳೆದುಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಈಗಿನ ಬಗ್ಗೆ ನಾನು ಮಾತನಾಡುತ್ತಿಲ್ಲ. ಸುಮಾರು ಪಂದ್ಯಗಳಲ್ಲಿ ಆತನ ಪ್ರದರ್ಶನ ನೋಡಿ ನಾನು ಈ ಮಾತನ್ನು ಹೇಳುತ್ತಿದ್ದೇನೆ. ಮುಂದಿನ 10 ಟೆಸ್ಟ್​ ಪಂದ್ಯಗಳಲ್ಲಿ ಆತ ಫಾರ್ಮ್​ಗೆ ಮರಳದಿದ್ದರೆ ತಂಡದಿಂದ ಕೈಬಿಡುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಆತ ಯೋಚಿಸುವುದು ಸೂಕ್ತ ಎಂದು ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಲೆಜೆಂಡರಿ ಆಟಗಾರ ಬ್ರಾಡ್​ ಹಾಗ್ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net