IND vs NZ Final | ಫೈನಲ್​ ಪಂದ್ಯದಲ್ಲಿ ಈತನದ್ದೇ ಕಮಾಲ್​! ಸ್ಟಾರ್​ ಆಟಗಾರನ ಮೇಲೆ ಕೈಫ್​ ಅಪಾರ ಭರವಸೆ

ವಿಜಯವಾಣಿ - 2025-03-08T163448.964
Published on

IND vs NZ Final: ನಾಳೆ (ಮಾ.09) ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್​ ತಂಡಗಳು ಚಾಂಪಿಯನ್ಸ್ ಟ್ರೋಫಿ ಫೈನಲ್ ಕದನದಲ್ಲಿ ಗೆಲುವಿಗಾಗಿ ಸೆಣಸಲಿದೆ. ಎರಡು ಬಲಿಷ್ಠ ತಂಡಗಳ ನಡುವೆ ಭಾರೀ ಪೈಪೋಟಿ ಇರಲಿದ್ದು, ಯಾರ ಮುಡಿಗೆ 2025ರ ಚಾಂಪಿಯನ್ಸ್ ಪಟ್ಟ ದೊರೆಯಲಿದೆ ಎಂಬ ಪ್ರಶ್ನೆ, ಕುತೂಹಲ ಸದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಬೆಂಬಿಡದಂತೆ ಕಾಡಿದೆ.

ಇನ್ನು ಸೆಮಿಫೈನಲ್ ಪಂದ್ಯದಲ್ಲಿ ಆಸೀಸ್​ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ರೋಹಿತ್ ಶರ್ಮ ಪಡೆ, 4 ವಿಕೆಟ್​ಗಳ ಅಂತರದಲ್ಲಿ ಪಂದ್ಯವನ್ನು ಗೆದ್ದು ಬೀಗಿತು. ಈ ಮೂಲಕ ನೇರವಾಗಿ ಫೈನಲ್​ಗೆ ಲಗ್ಗೆಯಿಟ್ಟ ಟೀಮ್ ಇಂಡಿಯಾ, ಸದ್ಯ ಕಿವೀಸ್​ ಪಡೆಯನ್ನು ಅಂತಿಮ ಹಣಾಹಣಿಯಲ್ಲಿ ಬಗ್ಗುಬಡಿಯಲು ಎದುರುನೋಡುತ್ತಿದೆ. ಇನ್ನು ಸೆಮಿಫೈನಲ್ ಕಾಳಗದಲ್ಲಿ ತಂಡದ ಪರ ಅದ್ಭುತ ಪ್ರದರ್ಶನ ತೋರಿದ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಕುರಿತು ಟೀಮ್ ಇಂಡಿಯಾ ಮಾಜಿ ಆಟಗಾರ ಮೊಹಮ್ಮದ್​ ಕೈಫ್​ ಮೆಚ್ಚಿ ಮಾತನಾಡಿದ್ದಾರೆ.

"ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್​​ ಮೂಲಕ ತಂಡಕ್ಕೆ ಅದ್ಭುತ ಕೊಡುಗೆ ನೀಡುವ ಉತ್ತಮ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ. ಟೀಮ್ ಇಂಡಿಯಾಗೆ ಅವರೊಂದು ರೀತಿ ಎಂವಿಪಿ ಇದ್ದಂತೆ. ಒಬ್ಬ ಅಸಲಿ ಇಂಪ್ಯಾಕ್ಟ್​ ಆಟಗಾರ. 2023ರ ವಿಶ್ವಕಪ್​ ಫೈನಲ್​ನಲ್ಲಿ ಭಾರತ ಅವರನ್ನು ತುಂಬ ಮಿಸ್​ ಮಾಡಿಕೊಂಡಿದೆ. ಇನ್ನು ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪಾಂಡ್ಯ ಮಿಂಚಲಿದ್ದಾರೆ. ಅತ್ಯುತ್ತಮ ತಂಡ ಗೆಲುವು ಸಾಧಿಸಲಿ" ಎಂದು ಟ್ವೀಟ್​ ಮಾಡಿ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net