

ನವದೆಹಲಿ: ನಿನ್ನೆ (ಏ.30) ಜೂನ್ 01ರಿಂದ ಆರಂಭವಾಗಲಿರುವ ಟಿ-20 ವಿಶ್ವಕಪ್ ಪಂದ್ಯಗಳಿಗೆ ಟೀಂ ಇಂಡಿಯಾದ 15 ಸದಸ್ಯರ ತಂಡವನ್ನು ಬಿಸಿಸಿಐ ಅಧಿಕೃತವಾಗಿ ಪ್ರಕಟಿಸಿತು. ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯಜುವೇಂದ್ರ ಚಹಾಲ್, ಅರ್ಷ್ದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ. ಅದರಂತೆ ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಹಾಗೂ ಅವೇಶ್ ಖಾನ್ ಅವರನ್ನು ಮೀಸಲು ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ.
ಟೀಂ ಇಂಡಿಯಾದ ತಂಡ ಪ್ರಕಟವಾಗುತ್ತಿದ್ದಂತೆ ಅನೇಕ ಅಭಿಪ್ರಾಯಗಳು ಹೊರಬಿದ್ದಿದ್ದು, ಕೆಲವು ಆಟಗಾರರ ಸ್ಥಾನವನ್ನು ಪ್ರಶ್ನೆ ಮಾಡಲಾಯಿತು. ಆದ್ರೆ, ಬಿಸಿಸಿಐ 15 ಸದಸ್ಯರ ತಂಡವನ್ನು ಘೋಷಣೆ ಮಾಡುವ ಮುನ್ನವೇ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಟಾಮ್ ಮೂಡಿ, ಪ್ರಸ್ತುತ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಪರ ಆಡುತ್ತಿರುವ ಆಲ್ರೌಂಡರ್ ರವೀಂದ್ರ ಜಡೇಜಾ ವಿರುದ್ಧ ಧ್ವನಿ ಎತ್ತಿದ್ದರು.
ಟಿ-20 ವಿಶ್ವಕಪ್ಗೆ ಭಾರತ ತಂಡದ ಪರ ಜಡೇಜಾ 7ನೇ ಕ್ರಮಾಂಕದಲ್ಲಿ ಆಡಲಿರುವ ಸ್ಟಾರ್ ಆಲ್ರೌಂಡರ್ ಪ್ಲೇಯರ್. ಇದು ಕ್ರಿಕೆಟ್ ಅಭಿಮಾನಿಗಳಿಗೂ ತಿಳಿದಿರುವ ಸಂಗತಿ. ಇದನ್ನು ಪ್ರಶ್ನಿಸಿದ ಟಾಮ್, ಐಪಿಎಲ್ 17ನೇ ಆವೃತ್ತಿಯ ಆರಂಭದಿಂದ ಇಲ್ಲಿಯವರೆಗೆ ನಡೆದಿರುವ ಪಂದ್ಯಗಳಲ್ಲಿ ರವೀಂದ್ರ ಜಡೇಜಾ ಉತ್ತಮ ಬ್ಯಾಟಿಂಗ್ ಲೈನ್ ಹೊಂದಿಲ್ಲ. ಆಡಿದ ಅಷ್ಟು ಮ್ಯಾಚ್ಗಳಲ್ಲಿ ಜಡೇಜಾ ಹೆಚ್ಚು ರನ್ ಕಲೆಹಾಕುವಲ್ಲಿ ವಿಫಲರಾಗಿದ್ದಾರೆ. ಕೇವಲ ಬೌಲಿಂಗ್ನಲ್ಲಿ ಮಾತ್ರ ಅಬ್ಬರಿಸುತ್ತಿದ್ದಾರೆ ಬಿಟ್ಟರೆ, ಬ್ಯಾಟಿಂಗ್ನಲ್ಲಿ ಸದ್ದು ಮಾಡಿಲ್ಲ ಎಂದು ಅಭಿಪ್ರಾಯಿಸಿದರು.
7ನೇ ಕ್ರಮಾಂಕದಲ್ಲಿ ಬರುವವರು ಪವರ್ ಹಿಟ್ಟಿಂಗ್ ಇರುವವರೇ ಆಗಿರಬೇಕು. ಆ ರೀತಿ ನೋಡುವುದಾದರೆ ಟೀಂ ಇಂಡಿಯಾ ಪರ 7ನೇ ಸ್ಥಾನದಲ್ಲಿ ಜಡೇಜಾರನ್ನು ಆಡಿಸುವುದು ಅಷ್ಟು ಉತ್ತಮವಾಗಿಲ್ಲ. ಅವರು ಬ್ಯಾಟಿಂಗ್ನಲ್ಲಿ ಬೆಸ್ಟ್ ಪರ್ಫಾಮೆನ್ಸ್ ನೀಡಿಲ್ಲ ಎಂದು ವಾದಿಸಿದ್ದಾರೆ. ಪ್ರಸ್ತುತ 9 ಪಂದ್ಯಗಳಲ್ಲಿ ಕೇವಲ 157 ರನ್ ಗಳಿಸಿರುವ ಜಡೇಜಾ, 131.93 ಸ್ಟ್ರೈಕ್ರೇಟ್ ಹೊಂದಿದ್ದಾರೆ,(ಏಜೆನ್ಸೀಸ್).