

India vs England: ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆದ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲಂಡ್ ವಿರುದ್ಧ ಭಾರತ 6 ರನ್‌ಗಳಿಂದ ಅದ್ಭುತ ಗೆಲುವು ಸಾಧಿಸಿದೆ. ಈ ಮೂಲಕ ಬರೋಬ್ಬರಿ 77 ವರ್ಷಗಳ ಬಳಿಕ ವಿದೇಶಿ ನೆಲದಲ್ಲಿ ಐದು ಪಂದ್ಯಗಳ ಸರಣಿಯ ಅಂತಿಮ ಪಂದ್ಯವನ್ನು ಭಾರತ ಗೆದ್ದಿರುವುದು ಇದೇ ಮೊದಲನೆಯದಾಗಿದೆ.
ಕೊನೆಯ ಟೆಸ್ಟ್ ಪಂದ್ಯದಲ್ಲಿ, ಗಾಯಗೊಂಡ ಕ್ರಿಸ್ ವೋಕ್ಸ್ ಒಂದು ಕೈಯಲ್ಲಿ ಬ್ಯಾಟ್ ಹಿಡಿದು ಮೈದಾನಕ್ಕೆ ಬಂದಾಗ, ಈ ಚಿತ್ರ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಉಳಿಯಿತು. ಅಲ್ಲದೆ, ಗೆಲುವಿನ ನಂತರ ಮೊಹಮ್ಮದ್ ಸಿರಾಜ್ ಬ್ಯಾಟರ್ ಕ್ರಿಸ್ ವೋಕ್ಸ್ ಅವರನ್ನು ತಬ್ಬಿಕೊಂಡು ಕ್ರೀಡಾ ಮನೋಭಾವ ವ್ಯಕ್ತಪಡಿಸಿದರು ಮತ್ತು ಆ ನಂತರ ಈ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಇಂಗ್ಲೆಂಡ್ ಬ್ಯಾಟರ್ ಹ್ಯಾರಿ ಬ್ರೂಕ್ ಸಿರಾಜ್ ಆಟವನ್ನು ಶ್ಲಾಘಿಸಿದರು.
ಪ್ರಸಿದ್ಧ್ ಕೃಷ್ಣ ಕೂಡ ಉತ್ತಮ ಬೌಲಿಂಗ್(126 ರನ್ಗಳಿಗೆ 4 ವಿಕೆಟ್) ಮಾಡುವ ಮೂಲಕ ಪಂದ್ಯಕ್ಕೆ ಉತ್ತಮ ಬೆಂಬಲ ನೀಡಿದರು. ಅಂತಿಮವಾಗಿ ಇಂಗ್ಲೆಂಡ್ ತಂಡವು 374 ರನ್‌ಗಳ ಗುರಿಯನ್ನು ತಲುಪುವಲ್ಲಿ ವಿಫಲವಾಯಿತು ಮತ್ತು ಭಾರತ ಐದು ಪಂದ್ಯಗಳ ಸರಣಿಯನ್ನು 2-2 ರಲ್ಲಿ ಸಮಬಲಗೊಳಿಸಿತು.(ಏಜೆನ್ಸೀಸ್)