ಐತಿಹಾಸಿಕ ಗೆಲುವು; 'ಮೊಹಮ್ಮದ್ ಸಿರಾಜ್' ಅವರ ಅದ್ಭುತ ಪ್ರದರ್ಶನಕ್ಕೆ 'ವಿರಾಟ್ ಕೊಹ್ಲಿ' ಶ್ಲಾಘನೆ | Ind vs Eng

kohli
Published on

India vs England: ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆದ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲಂಡ್ ವಿರುದ್ಧ ಭಾರತ 6 ರನ್‌ಗಳಿಂದ ಅದ್ಭುತ ಗೆಲುವು ಸಾಧಿಸಿದೆ. ಈ ಮೂಲಕ ಬರೋಬ್ಬರಿ 77 ವರ್ಷಗಳ ಬಳಿಕ ವಿದೇಶಿ ನೆಲದಲ್ಲಿ ಐದು ಪಂದ್ಯಗಳ ಸರಣಿಯ ಅಂತಿಮ ಪಂದ್ಯವನ್ನು ಭಾರತ ಗೆದ್ದಿರುವುದು ಇದೇ ಮೊದಲನೆಯದಾಗಿದೆ.

ಇನ್ನೂ ಟೀಮ್ ಇಂಡಿಯಾದ ಗೆಲುವಿನ ಬಗ್ಗೆ ವಿರಾಟ್​ ಕೊಹ್ಲಿ ಟ್ವೀಟ್​ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಇದು ಟೀಮ್ ಇಂಡಿಯಾದ ಅದ್ಭುತ ಗೆಲುವಾಗಿದೆ. ಸಿರಾಜ್ ಮತ್ತು ಪ್ರಸಿದ್ ಅವರ ಅದ್ಭುತ ಪ್ರದರ್ಶನ ಮತ್ತು ದೃಢಸಂಕಲ್ಪ ನಮಗೆ ಈ ಉತ್ತಮ ಗೆಲುವನ್ನು ತಂದುಕೊಟ್ಟಿದೆ. ತಂಡಕ್ಕಾಗಿ ಎಲ್ಲವನ್ನೂ ಪಣಕ್ಕಿಡುವ ಸಿರಾಜ್ ಅವರಿಗೆ ವಿಶೇಷ ಗೌರವ ಸಲ್ಲಿಸುತ್ತೇನೆ. ಅವರ ಬಗ್ಗೆ ತುಂಬಾ ಸಂತೋಷವಾಗುತ್ತಿದೆ ಎಂದು ಕೊಹ್ಲಿ ಟ್ವೀಟ್ ಮೂಲಕ ಸಂತಸ ಹೊರಹಾಕಿದ್ದಾರೆ.

(ಏಜೆನ್ಸೀಸ್)

ಇಂಗ್ಲೆಂಡ್‌ಗೆ 35 ರನ್‌ಗಳ ಅಗತ್ಯವಿದ್ದರೆ, ಟೀಮ್ ಇಂಡಿಯಾಗೆ 4 ವಿಕೆಟ್‌ಗಳು ಬೇಕಿತ್ತು. ಮೂರು ವಿಕೆಟ್‌ಗಳನ್ನು ಯಶಸ್ವಿಯಾಗಿ ಕಬಳಿಸಿದ ಗಿಲ್ ಪಡೆಗೆ ಅಚ್ಚರಿ ಮೂಡಿಸಿದ್ದು, ಕ್ರಿಸ್ ವೋಕ್ಸ್ ಎಂಟ್ರಿ. ಕಡೆಯ ದಿನದಾಟದಲ್ಲಿ ಇಂಗ್ಲೆಂಡ್‌ನ 4 ವಿಕೆಟ್‌ಗಳನ್ನು ಕಬಳಿಸುವಲ್ಲಿ ಗಿಲ್ ಪಡೆ ಮೇಲುಗೈ ಸಾಧಿಸಿತು. ಪ್ರಸಿದ್ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್ ತಲಾ ಎರಡು ವಿಕೆಟ್ ಪಡೆದರು. ಈ ವೇಳೆ ಕೊನೆಗೆ ಕಣಕ್ಕಿಳಿದ ಇಂಜುರಿಯಿಂದ ಬಳಲುತ್ತಿದ್ದ ಕ್ರಿಸ್ ವೋಕ್ಸ್, ಒಂದೇ ಕೈಯಲ್ಲಿ ತಂಡದ ಪರ ಆಡಿದರು. ಆದರೆ, ಗೆಲುವು ತಂದುಕೊಡುವಲ್ಲಿ ವಿಫಲರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net