ಪತ್ನಿಯನ್ನು ಕಲ್ಲಿನಿಂದ‌ ಜಜ್ಜಿ ಕೊಲೆಗೈದು, ತಾನೂ ಆತ್ಮಹತ್ಯೆ ಮಾಡಿಕೊಂಡ ಗಂಡ

Tadas Murder
Published on

ಹಾವೇರಿ: ಮಲಗಿದ್ದ ಪತ್ನಿಯನ್ನು ಕಲ್ಲಿನಿಂದ‌ ಜಜ್ಜಿ ಕೊಲೆಗೈದು, ಗಂಡ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ಯಾಡಗಿ ತಾಲೂಕಿನ ತಡಸ ಗ್ರಾಮದಲ್ಲಿ ನಡೆದಿದೆ.

ಪವಿತ್ರಾ ರವಿ ಹಡಗಲಿ (29) ಹಾಗೂ ರವಿ ಸಹದೇವಪ್ಪ ಹಡಗಲಿ (38) ಮೃತಪಟ್ಟವರು.

ಪ್ಲಂಬರ್ ಕೆಲಸ ಮಾಡುತ್ತಿದ್ದ ರವಿ 15 ವರ್ಷಗಳ ಹಿಂದೆ ಬ್ಯಾಡಗಿಯ ಪವಿತ್ರಾಳನ್ನು ಮದುವೆಯಾಗಿದ್ದ.

ತನ್ನ ಮಾತು ಕೇಳುವುದಿಲ್ಲ, ಆಗಾಗ ಹೆಂಡತಿ ಮನೆ ಬಿಟ್ಟು ಹೋಗುತ್ತಿದ್ದಳು. ಇದರಿಂದ ಕೋಪಗೊಂಡ ಗಂಡ, ಹೆಂಡತಿ ಮಲಗಿದ್ದಾಗ ಕಲ್ಲಿನಿಂದ ಜಜ್ಜಿ ಕೊಲೆಗೈದಿದ್ದಾ‌ನೆ. ನಂತರ ತಾನೂ ನೇಣಿಗೆ ಶರಣಾಗಿದ್ದಾನೆ.

ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net