ಅನುಷ್ಕಾ ಶರ್ಮರ ಕ್ವಾರಂಟೈನ್​​ ಫೋಟೋ ಕ್ಲಿಕ್ಕಿಸಲು ಕೊಹ್ಲಿ ಪಟ್ಟ ಶ್ರಮವನ್ನು ವಿವರಿಸಿದ ಮಹಿಳಾ ಕ್ರಿಕೆಟರ್​!

anu kohli web
Published on

ಲಂಡನ್​: ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನ ಪ್ರಶಸ್ತಿ ಸುತ್ತಿನ ಕಾದಾಟ ಮತ್ತು ಆತಿಥೇಯರ ವಿರುದ್ಧದ ಟೆಸ್ಟ್​ ಸರಣಿಗಾಗಿ ಸುದೀರ್ಘ ರ್ವಾದ ಇಂಗ್ಲೆಂಡ್​ ಪ್ರವಾಸಕ್ಕೆ ತೆರಳಿರುವ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಜತೆಗೆ ಅವರ ಪತ್ನಿ ಹಾಗೂ ಬಾಲಿವುಡ್​ ನಟಿ ಅನುಷ್ಕಾ ಶರ್ಮ ಕೂಡ ತೆರಳಿದ್ದಾರೆ. ಪ್ರವಾಸದ ಆರಂಭದಲ್ಲಿ ಭಾರತ ತಂಡದ ಎಲ್ಲ ಸದಸ್ಯರನ್ನು ಸೌಥಾಂಪ್ಟನ್​ ಕ್ರೀಡಾಂಗಣದ ಆವರಣದಲ್ಲೇ ಇರುವ ಹೋಟೆಲ್​ನಲ್ಲೇ ಕ್ವಾರಂಟೈನ್​ನಲ್ಲಿಡಲಾಗಿದೆ. ಈ ವೇಳೆ ಅನುಷ್ಕಾ ಶರ್ಮ ಕ್ಲಿಕ್ಕಿಸಿಕೊಂಡಿರುವ ಕ್ರೀಡಾಂಗಣದ ಹಿನ್ನೆಲೆಯ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇದೀಗ ಆ ಫೋಟೋವನ್ನು ಕ್ಲಿಕ್ಕಿಸಿರುವ ಅನುಷ್ಕಾರ ಪತಿ ವಿರಾಟ್​ ಕೊಹ್ಲಿ ಅದಕ್ಕಾಗಿ ಪಟ್ಟಿರುವ ಶ್ರಮವನ್ನು ಭಾರತ ಮಹಿಳಾ ತಂಡದ ಆಟಗಾರ್ತಿ ಹರ್ಲೀನ್​ ಡಿಯೋಲ್​ ವಿವರಿಸಿದ್ದಾರೆ.

ಭಾರತದ ಪುರುಷರ ತಂಡದ ಜತೆಯಲ್ಲೇ ಇಂಗ್ಲೆಂಡ್​ ಪ್ರವಾಸಕ್ಕೆ ತೆರಳಿರುವ ಭಾರತ ಮಹಿಳಾ ತಂಡವೂ ಮೊದಲ 3 ದಿನಗಳ ಕಾಲ ಸೌಥಾಂಪ್ಟನ್​ನಲ್ಲೇ ಕ್ವಾರಂಟೈನ್​ ಆಗಿತ್ತು. ಈ ವೇಳೆ ವಿರಾಟ್​ ಕೊಹ್ಲಿ ಪಕ್ಕದ ಕೊಠಡಿಯಲ್ಲೇ ಕ್ವಾರಂಟೈನ್​ ಆಗಿದ್ದ ಹರ್ಲೀನ್​ ಡಿಯೋಲ್​, ಚಿತ್ರವನ್ನು ಕ್ಲಿಕ್ಕಿಸಲು ಕೊಹ್ಲಿ ಪಟ್ಟ ಪರಿಶ್ರಮವನ್ನು ಹಂಚಿಕೊಂಡಿದ್ದಾರೆ.

ಹೋಟೆಲ್​ ಕೊಠಡಿಯ ಬಾಲ್ಕನಿಯಲ್ಲಿ ನಿಂತುಕೊಂಡಿರುವ ಚಿತ್ರವನ್ನು ಪ್ರಕಟಿಸಿದ್ದ ಅನುಷ್ಕಾ ಶರ್ಮ, ಕೆಲಸವನ್ನು ಮನೆಗೆ ತರಬೇಡ ಎಂಬ ಮಾತು ವಿರಾಟ್​ ಕೊಹ್ಲಿಗೆ ಕೆಲವೊಮ್ಮೆ ಅನ್ವಯ ಆಗಲ್ಲ ಎಂದು ಬರೆದುಕೊಂಡಿದ್ದರು. ಜತೆಗೆ ಕ್ವಾರಂಟೈನ್​ ಎಟ್​ ದಿ ಸ್ಟೇಡಿಯಂ ಎಂಬ ಹ್ಯಾಷ್​ಟ್ಯಾಗ್​ ನೀಡಿದ್ದರು.

ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿಗಳ ಗಮನಸೆಳೆದಿರುವ ಬೆನ್ನಲ್ಲೇ, ಈ ಚಿತ್ರವನ್ನು ಕ್ಲಿಕ್ಕಿಸಲು ವಿರಾಟ್​ ಕೊಹ್ಲಿ ಏನೆಲ್ಲ ಕಸರತ್ತು ಮಾಡಿದರು ಎಂಬುದನ್ನು ವಿವರಿಸಿರುವ ಆಲ್ರೌಂಡರ್​ ಹರ್ಲೀನ್​ ಡಿಯೋಲ್​, ಹಹಹ, ಈ ಚಿತ್ರವನ್ನು ಕ್ಲಿಕ್ಕಿಸುವ ಸಲುವಾಗಿ ಛಾಯಾಗ್ರಾಹಕರು ಮೊಣಕಾಲಿನ ಮೇಲೆ ನಿಂತಿದ್ದನ್ನು ನಾನು ನೋಡಿದೆ. ಈ ಚಿತ್ರವನ್ನು ಕ್ಲಿಕ್ಕಿಸಲು ಅವರು ಅತ್ಯಂತ ಬದ್ಧತೆಯಿಂದ ಕಾರ್ಯನಿರ್ವಹಿಸಿದರು ಎಂದು ಅನುಷ್ಕಾ ಶರ್ಮ ಚಿತ್ರಕ್ಕೆ ಕಾಮೆಂಟ್​ ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net