ಆರ್​ಸಿಬಿಯಿಂದ ಮ್ಯಾಕ್ಸಿ ಔಟ್?​; ಮೆಗಾ ಹರಾಜಿಗೂ ಮೊದಲು ಫ್ಯಾನ್ಸ್​ಗೆ ಶಾಕ್​ ನೀಡಿದ ಸ್ಟಾರ್ ಆಲ್ರೌಂಡರ್

Glenn Maxwell
Published on

ಬೆಂಗಳೂರು: 2025ರಲ್ಲಿ ನಡೆಯಲಿರುವ ವಿಶ್ವದ ಬಿಲಿಯನ್​ ಡಾಲರ್​ ಟೂರ್ನಿ ಐಪಿಎಲ್​ ಆರಂಭವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ಫ್ರಾಂಚೈಸಿಗಳು ಹಾಗೂ ಆಟಗಾರರ ವಿಚಾರವಾಗಿ ಸದ್ದು ಮಾಡುತ್ತಿದ್ದು, ಟೂರ್ನಿ ಆರಂಭವಾಗುವುದಕ್ಕೂ ಮುನ್ನವೇ ಕ್ರೀಡಾಭಿಮಾನಿಗಳ ಗಮನ ಸೆಳಯುತ್ತಿದೆ. ಇದೀಗ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಸಂಬಂಧಿಸಿದ ಸುದ್ದಿಯೊಂದು ಸಖತ್​ ಸೌಂಡ್​ ಮಾಡುತ್ತಿದ್ದು, ಇದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

2025ರಲ್ಲಿ ನಡೆಯಲಿರುವ ಐಪಿಎಲ್​ ಮೆಗ ಹರಾಜಿಗೂ ಮುನ್ನ ಗ್ಲೆನ್​ ಮ್ಯಾಕ್ಸ್​ವೆಲ್​ ತಂಡದಿಂದ ಹೊರಬೀಳಲಿದ್ದಾರೆ ಎಂದು ಹೇಳಲಾಗಿದ್ದು, ಇದಕ್ಕೆ ಪೂರಕವೆಂಬಂತೆ ಮ್ಯಾಕ್ಸ್​ವೆಲ್​ ಇನ್ಸ್​​ಟಾಗ್ರಾಂನಲ್ಲಿ ಆರ್​ಸಿಬಿ ಪೇಜ್​ಅನ್ನು ಅನ್​ಫಾಲೋ ಮಾಡಿದ್ದಾರೆ. ಈ ಸುದ್ದಿ ವೈರಲ್​ ಆಗಿದ್ದು, ಮ್ಯಾಕ್ಸ್​ವೆಲ್​ರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಫ್ರಾಂಚೈಸಿಗಳು ಸಿದ್ದತೆ ನಡೆಸುತ್ತಿವೆ.

2021ರಲ್ಲಿ ನಡೆದ ಹರಾಜಿನಲ್ಲಿ ಆರ್​ಸಿಬಿ ತಂಡ ಮ್ಯಾಕ್ಸ್​ವೆಲ್​ರನ್ನು 14.25 ಕೋಟಿ ರೂ. ಕೊಟ್ಟು ಖರೀದಿಸಿತ್ತು. 2022ರಲ್ಲಿ ನಡೆದ ಮೆಗಾ ಹರಾಜಿಗೂ ಮುನ್ನ 11 ಕೋಟಿ ರೂ. ಕೊಟ್ಟು ಮ್ಯಾಕ್ಸ್​ವೆಲ್​ರನ್ನು ತಂಡದಲ್ಲೇ ಉಳಿಸಿಕೊಂಡಿತ್ತು, ಆದರೆ, ಈ ಬಾರಿ ಮ್ಯಾಕ್ಸ್​ವೆಲ್​ರನ್ನು ರಿಟೇನ್​ ಮಾಡುವುದು ಡೌಟ್​ ಎಂದು ಹೇಳಲಾಗಿದ್ದು, ಇದರ ನಡುವೆಯೇ ಮ್ಯಾಕ್ಸ್​ವೆಲ್​ ಆರ್​ಸಿಬಿ ಪೇಜ್​ಅನ್ನು ಅನ್​ಫಾಲೋ ಮಾಡಿರುವುದು ತಂಡದಿಂದ ಕೈಬಿಡುವ ವಿಚಾರವನ್ನು ಕನ್ಫರ್ಮ್​ ಮಾಡಿದ್ದಾರೆ.

ಏಕೆಂದರೆ 17ನೇ ಆವೃತ್ತಿಯ ಐಪಿಎಲ್​ನಲ್ಲಿ ಆರ್​ಸಿಬಿ ಪರ ಬ್ಯಾಟ್​​ ಬೀಸಿದ ಮ್ಯಾಕ್ಸ್​ವೆಲ್​ ಗಳಿಸಿದ್ದು ಮಾತ್ರ 52 ರನ್​. ಆಡಿದ 10 ಪಂದ್ಯಗಳಲ್ಲಿ 5.78 ಸರಾಸರಿಯಂತೆ ಕೇವಲ 52 ರನ್ ಮಾತ್ರ ಕಲೆಹಾಕಿರುವ ಮ್ಯಾಕ್ಸಿ ಐದು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಹೀಗಾಗಿಯೇ ಮ್ಯಾಕ್ಸ್​ವೆಲ್​ರನ್ನು ರಿಟೇನ್​ ಮಾಡದಿರಲು ಆರ್​ಸಿಬಿ ನಿರ್ಧರಿಸಿದ್ದು, ತಂಡದಿಂದ ಕೈಬಿಡುವುದು ಕನ್ಫರ್ಮ್​ ಎಂದು ಹೇಳಲಾಗಿದೆ.

ಆರ್​ಸಿಬಿ ಪರ 52 ಪಂದ್ಯಗಳನ್ನಾಡಿರುವ ಗ್ಲೆನ್ ಮ್ಯಾಕ್ಸ್​ವೆಲ್ 12 ಅರ್ಧಶತಕ ಒಳಗೊಂಡಂತೆ 1266 ರನ್ ಕಲೆಹಾಕಿದ್ದಾರೆ. ಬೌಲಿಂಗ್​ನಲ್ಲಿ 398 ಎಸೆತಗಳನ್ನು ಎಸೆದಿರುವ ಮ್ಯಾಕ್ಸಿ ಒಟ್ಟು 18 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಹೀಗಾಗಿಯೇ ಈ ಬಾರಿಯ ಐಪಿಎಲ್​ ಮೆಗಾ ಹರಾಜಿಗೂ ಮುನ್ನ ಮ್ಯಾಕ್ಸ್​ವೆಲ್ ಅವರನ್ನು ಬಿಡುಗಡೆ ಮಾಡಿ, ಬದಲಿ ಆಲ್​ರೌಂಡರ್​ನ ಖರೀದಿಗೆ ಆರ್​ಸಿಬಿ ಫ್ರಾಂಚೈಸಿ ಮುಂದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net