ರಜಿನಿಕಾಂತ್ ಸಿನಿಮಾದಲ್ಲಿ ನಟಿಸಲ್ಲ ಎಂದ ಸ್ಟಾರ್​ ಹೀರೋ; ಅಸಲಿ ಕಾರಣವೇನು ಗೊತ್ತಾ?

Rajinikanth
Published on

ಚೆನ್ನೈ: 73ರ ಇಳಿವಯಸ್ಸಿನಲ್ಲೂ ಯುವಕರು ನಾಚಿ ನೀರಾಗುವಂತೆ ನಟನೆ ಮಾಡುವ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಟ ರಜಿನಿಕಾಂತ್​ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸದ್ಯ ಕೂಲಿ ಚಿತ್ರದ ಕೆಲಸಗಳಲ್ಲಿ ಬ್ಯುಸಿಯಿರುವ ನಟ ರಜಿನಿಕಾಂತ್​ ಆ ಬಳಿಕ ಜೈಲರ್​-2 ಸಿನಿಮಾದ ಕೆಲಸಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ.

ಭಾರತ ಮಾತ್ರವಲ್ಲದೇ ವಿದೇಶಿ ನೆಲದಲ್ಲೂ ಹೆಚ್ಚಿನ ಬೇಡಿಕೆ ಹೊಂದಿರುವ ರಜಿನಿಕಾಂತ್​ ಅವರ ಸಿನಿಮಾದಲ್ಲಿ ನಟಿಸಲು ಸೌತ್​ ಸಿನಿ ಇಂಡಸ್ಟ್ರಿಯ ಖ್ಯಾತ ನಟರೊಬ್ಬರು ನಿರಾಕರಿಸಿದ್ದಾರೆ ಎಂಬ ವಿಷಯ ಕೇಳಿ ಬಂದಿದೆ. ಈ ವಿಚಾರ ಟಾಲಿವುಡ್​ ಹಾಗೂ ಕಾಲಿವುಡ್​ನಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದು, ಖ್ಯಾತ ನಟನ ನಡೆ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.

Nagarjuna Rajinikanth

ಲೋಕೇಶ್​ ಕನಗರಾಜ್​ ನಿರ್ದೇಶನದ ಕೂಲಿ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿಯಿರುವ ರಜಿನಿಕಾಂತ್​ ಮ್ಯಾನರಿಸಂಗೆ ಸೂಟ್​ ಆಗುವ ಖಳನಾಯಕನನ್ನು ಹುಡುಕಲಾಗುತ್ತಿದೆ. ಈ ಸಂಬಂಧ ಚಿತ್ರತಂಡವು ಬಾಲಿವುಡ್​ ನಾಯಕನಟರಾದ ಶಾರುಖ್​ ಖಾನ್​ ಹಾಗೂ ರಣವೀರ್​ ಸಿಂಗ್​ ಅವರನ್ನು ಸಂಪರ್ಕಿಸಿತ್ತು. ಆದರೆ, ಈ ಇಬ್ಬರು ನಟರು ರಜಿನಿ ಎದುರು ಖಳನಾಯಕನಾಗಿ ನಟಿಸಲು ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಟಾಲಿವುಡ್​ನ ಹಿರಿಯ ನಟ ನಾಗಾರ್ಜುನ ಅವರು ಕೂಲಿ ಸಿನಿಮಾದಲ್ಲಿ ವಿಲನ್​ ಆಗಿ ನಟಿಸಲು ನಿರಾಕರಿಸಿದ್ದಾರೆ ಎಂದು ಹೇಳಲಾಗಿದ್ದು, ನಾಗಾರ್ಜುನ ಅವರ ನಡೆ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.

ಲೋಕೇಶ್​ ಕನಗರಾಜ್ ನಿರ್ದೇಶನದ ಕೂಲಿ ಚಿತ್ರದಲ್ಲಿ ರಜನಿಕಾಂತ್ ಜತೆಗೆ ಅಮಿತಾಬ್ ಬಚ್ಚನ್, ಭಗತ್ ಬೆಸಿಲ್, ರಿತಿಕಾ ಸಿಂಗ್, ಅಭಿರಾಮಿ ಸೇರಿದಂತೆ ಹಲವು ನಟ-ನಟಿಯರು ಅಭಿನಯಿಸುತ್ತಿದ್ದಾರೆ. ಚಿತ್ರವು 2025ರಲ್ಲಿ ಬಿಡುಗಡೆಯಾಗಲಿದ್ದು, ಈ ಸಿನಿಮಾವು ಜೈಲರ್​ ಚಿತ್ರದ ದಾಖಲೆಗಳನ್ನು ಮುರಿಯಲಿದೆ ಎಂದು ಬಾಕ್ಸ್​​ಆಫೀಸ್​ ಪಂಡಿತರು ಅಂದಾಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net