ಸತತ ಸೋಲಿನ ನಡುವೆಯೇ ಆರ್​ಸಿಬಿಗೆ ಮತ್ತೊಂದು ಶಾಕ್​; ಗಾಯಕ್ಕೆ ತುತ್ತಾದ ಸ್ಟಾರ್​ ಆಟಗಾರ

RCB
Published on

ಬೆಂಗಳೂರು: ಹೊಸ ಅಧ್ಯಾಯವನ್ನು ಸತತ ಸೋಲುಗಳ ಮೂಲಕ ಶುರು ಮಾಡಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು 17ನೇ ಆವೃತ್ತಿಯಲ್ಲಿ ಆಡಿರುವ 6 ಪಂದ್ಯಗಳ ಪೈಕಿ 5ರಲ್ಲಿ ಸೋತು 1ರಲ್ಲಿ ಮಾತ್ರ ಗೆದ್ದಿದೆ. ಈಗಾಗಲೇ ಸತತ ಸೋಲುಗಳಿಂದ ಕಂಗೇಟ್ಟಿರುವ ಆರ್​ಸಿಬಿಗೆ ಇದೀಗ ಮತ್ತೊಂದು ಶಾಕ್​ ಎದುರಾಗಿದ್ದು, ಪ್ರಮುಖ ಆಟಗಾರನೋರ್ವ ಗಾಯಕ್ಕೆ ತುತ್ತಾಗಿದ್ದು, ಮುಂದಿನ ಪಂದ್ಯಗಳಿಗೆ ಇವರ ಲಭ್ಯತೆ ಅನುಮಾನವೆನಿಸಿದೆ.

ಈಗಾಗಲೇ ಸತತ ಸೋಲುಗಳಿಂದ ಕಂಗೆಟ್ಟಿರುವ ಆರ್​ಸಿಬಿ ತಂಡಕ್ಕೆ ಈ ಆಟಗಾರನ ಗಾಯದ ಸಮಸ್ಯೆ ಪ್ರಮುಖ ತಲೆನೋವಾಗಿ ಪರಿಣಮಿಸಿದ್ದು, ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ಈ ಆಟಗಾರ ಗಾತಯಕ್ಕೆ ತುತ್ತಾಗಿದ್ದರು ಎಂದು ವರದಿಯಾಗಿದೆ. ಅದರಂತೆ ಆರ್​ಸಿಬಿ ತಮಡದ ಸ್ಟಾರ್​ ಆಟಗಾರ ಗ್ಲೆನ್​ ಮ್ಯಾಕ್ಸ್​​ವೆಲ್​ ಗಾಯಕ್ಕೆ ತುತ್ತಾಗಿದ್ದು, ಮುಂದಿನ ಪಂದ್ಯಗಳಿಗೆ ಅವರ ಲಭ್ಯತೆ ಅನುಮಾನ ಎಂದು ಹೇಳಲಾಗಿದೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ಮ್ಯಾಕ್ಸ್​ವೆಲ್ ಅವರ ಹೆಬ್ಬೆರಳಿಗೆ ಗಾಯವಾಗಿದ್ದು, ಹೀಗಾಗಿ ಅವರು ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ. ಅದರಂತೆ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕ್ಯಾಮರೋನ್ ಗ್ರೀನ್ ಅಥವಾ ಲಾಕಿ ಫರ್ಗ್ಯೂಸನ್​ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

Glenn Maxwell

ಹಾಲಿ ಆವೃತ್ತಿಯಲ್ಲಿ ಆರ್​ಸಿಬಿ ಪರ ಗ್ಲೆನ್​ ಮ್ಯಾಕ್ಸ್​ವೆಲ್​ ನಿರೀಕ್ಷಿತ ಪ್ರದರ್ಶನ ಕಂಡು ಬಂದಿಲ್ಲ. ಕಳೆದ ಆವೃತ್ತಿಗಳಿಗೆ ಹೋಲಿಸಿದರೆ ಮ್ಯಾಕ್ಸ್​​ವೆಲ್​ ಅವರ ಬ್ಯಾಟ್​ ಈ ಬಾರಿ ಹೆಚ್ಚು ಸದ್ದು ಮಾಡಿಲ್ಲ. ಹಾಲಿ ಟೂರ್ನಿಯಲ್ಲಿ ಆಡಿರುವ 06 ಪಂದ್ಯಗಳಿಂದ ಮ್ಯಾಕ್ಸ್​​ವೆಲ್​ ಅವರ ಬ್ಯಾಟಿನಿಂದ ಹರಿದು ಬಂದಿರುವುದು ಬರಿ 32ರನ್​ಗಳು ಮಾತ್ರ ಈ ಆರು ಇನಿಂಗ್ಸ್​ಗಳಲ್ಲಿ ಅವರು ಕಲೆಹಾಕಿದ ಗರಿಷ್ಠ ಸ್ಕೋರ್ 28 ರನ್​ಗಳು. ಇನ್ನುಳಿದ 5 ಇನಿಂಗ್ಸ್​ಗಳಲ್ಲಿ ಕ್ರಮವಾಗಿ 0,1,0,3,0 ಗೆ ವಿಕೆಟ್ ಒಪ್ಪಿಸಿದ್ದಾರೆ.

ಮುಂಬರುವ ಪಂದ್ಯಗಳಲ್ಲಿ ಮ್ಯಾಕ್ಸ್​ವೆಲ್​ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಭಾವಿಸಲಾಗಿತ್ತಾದರು ಆರ್​ಸಿಬಿಗೆ ಮ್ಯಾಕ್ಸ್​ವೆಲ್ ಅವರ ಗಾಯವು ಹೊಸ ಚಿಂತೆಯನ್ನು ಉಂಟು ಮಾಡಿದೆ. ಆರ್​ಸಿಬಿ ತನ್ನ ಮುಂದಿನ ಪಂದ್ಯವನ್ನು ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ತವರು ನೆಲದಲ್ಲಿ ಆಡಲಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನ ಲಯಕ್ಕೆ ಮರಳಲಿದೆಯಾ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net