More

    ಹಳ್ಳಿ ಮೇಷ್ಟ್ರು ಚಿತ್ರದ ಪರಿಮಳ ಈಗ ಹೇಗಿದ್ದಾರೆ ನೋಡಿ

    ಬೆಂಗಳೂರು: 1992ರಲ್ಲಿ ಬಿಡುಗಡೆಯಾಗಿದ್ದ ಹಳ್ಳಿಮೇಷ್ಟ್ರು ಚಿತ್ರ ಆಗಿನ ಕಾಲದಲ್ಲೇ ಬ್ಲಾಕ್​ಬಸ್ಟರ್​ ಆಗಿತ್ತು. ಈ ಚಿತ್ರದಲ್ಲಿ ನಟಿಸುವ ಮೂಲಕ ಅನೇಕ ಪ್ರತಿಭೆಗಳು ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಚಿತ್ರದಲ್ಲಿ ಎಲ್ಲರ ಗಮನ ಸೆಳೆದಿದ್ದ ಪಾತ್ರ ಎಂದರೆ ಅದು ನಾಯಕಿ ಪರಿಮಳ ಎಂದು ಹೇಳಬಹುದಾಗಿದೆ. ಪರಿಮಳ ಪಾತ್ರವನ್ನು ನಿಭಾಯಿಸಿದ್ದ ನಟಿ ಫರ್ಹೀನ್ ಪ್ರಭಾಕರ್ ಅಲಿಯಾಸ್ ಬಿಂದಿಯಾ ಈಗ ಹೇಗಿದ್ದಾರೆ, ಏನು ಮಾಡುತ್ತಿದ್ದಾರೆ ಎಂದು ತಿಳಿಯೋಣ ಬನ್ನಿ.

    90ರ ದಶಕದಲ್ಲಿ ಚಿತ್ರರಂಗ ಪ್ರವೇಶಿಸಿದ ನಟಿ ಫರ್ಹೀನ್​ ಅನೇಕ ಬಾಲಿವುಡ್​ ಸ್ಟಾರ್​ಗಳೊಂದಿಗೆ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ‘ಜಾನ್ ತೇರೆ ನಾಮ್’ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಫರ್ಹೀನ್​ ಅಕ್ಷಯ್​ ಕುಮಾರ್​ ನಟನೆಯ ಸೈನಿಕ ಚಿತ್ರದಲ್ಲಿ ನಟಿಸುವ ಮೂಲಕ ಹೆಚ್ಚು ಖ್ಯಾತಿ ಪಡೆದರು. ಫರ್ಹೀನ್​ ಹಿಂದಿ ಮಾತ್ರವಲ್ಲದೇ ಕನ್ನಡ, ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿ ನಟಿಸಿ ಪ್ರಖ್ಯಾತಿ ಹೊಂದಿದ್ದಾರೆ.

    ಅನೇಕ ನಟ-ನಟಿಯರು ಚಿತ್ರರಂಗ ಪ್ರವೇಶಿಸಿ ಉತ್ತುಂಗಕ್ಕೆ ಏರಿದ ಬಳಿಕ ದಿಢೀರ್​ ಎಂದು ತೆರೆಯಿಂದ ಹಿಂದೆ ಸರಿಯುತ್ತಾರೆ. ಇದಕ್ಕೆ ಹೋಲಿಸಿದರೆ ನಟಿ ಫರ್ಹೀನ್​ ಕೂಡ ಹೊರತ್ತಾಗಿಲ್ಲ. ಏಕೆಂದರೆ ಅವರು ಬಾಲಿವುಡ್​ ಪ್ರವೇಶಿಸಿದಾಗ ಆಕೆಯನ್ನು ಜೂನಿಯರ್​ ಮಾಧುರಿ ದೀಕ್ಷಿತ್​ ಎಂದು ಕರೆಯಲಾಗುತ್ತಿತ್ತು. 1992 ರಲ್ಲಿ ‘ಜಾನ್ ತೇರೆ ನಾಮ್’ ಬಿಡುಗಡೆಯಾದ ನಂತರ ಫರ್ಹೀನ್ ಜನಪ್ರಿಯ ಹೆಸರಾಯಿತು. ಮಾಧ್ಯಮಗಳು ಫರ್ಹೀನ್​ರನ್ನು ‘ಮಾಧುರಿ ದೀಕ್ಷಿತ್ ನಂ.2’ ಎಂದೇ ಕರೆಯುತ್ತಿದ್ದವು. 

    ಹಳ್ಳಿ ಮೇಷ್ಟ್ರು ಚಿತ್ರದ ಪರಿಮಳ ಈಗ ಹೇಗಿದ್ದಾರೆ ನೋಡಿ

    ಇದನ್ನೂ ಓದಿ: ರಾಜ್ಯದ ವಿವಿಧೆಡೆ ತಂಪೆರೆದ ವರುಣ; ಕೆಲವೆಡೆ ಜನಜೀವನ ಅಸ್ತವ್ಯಸ್ತ

    ಫರ್ಹೀನ್ 90 ರ ದಶಕದಲ್ಲಿ ಜನಪ್ರಿಯ ಹೆಸರಾಗಿತ್ತು ಆದರೆ ಅವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿ ನಟನೆಯನ್ನು ತ್ಯಜಿಸಲು ನಿರ್ಧರಿಸಿದರು ಮತ್ತು ಮದುವೆಯಾಗಲು ನಿರ್ಧರಿಸಿದರು. ನಟಿ ಫರ್ಹೀನ್​ ಅಂದಿನ ಕಾಲದಲ್ಲಿ ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟಿಗ ಮನೋಜ್​ ಪ್ರಭಾಕರ್​ ಅವರನ್ನು ಪ್ರೀತಿಸುತ್ತಿದ್ದರು ಮತ್ತು ಅವರನ್ನು ವಿವಾಹವಾದರು. ಭಾರತೀಯ ಕ್ರಿಕೆಟಿಗರನ್ನು ಮದುವೆಯಾದ ನಂತರ ಶಾಶ್ವತವಾಗಿ ನಟನೆಯನ್ನು ತೊರೆದರು. 

    ಮನೋಜ್ ಪ್ರಭಾಕರ್ ಅವರನ್ನು ಮದುವೆಯಾಗುವ ನಿರ್ಧಾರದ ಹಿಂದಿನ ಕಾರಣವನ್ನು ಫರ್ಹೀನ್ ಒಮ್ಮೆ ಸಂದರ್ಶನದಲ್ಲೂ ಬಹಿರಂಗಪಡಿಸಿದ್ದರು. ಚಿಕ್ಕವಯಸ್ಸಿನಲ್ಲಿ ತಾನು ಹಿಂದೂವನ್ನು ಮದುವೆಯಾಗುತ್ತೇನೆ ಎಂದು ನಿರ್ಧರಿಸಿದ್ದೆ ಏಕೆಂದರೆ ತನಗೆ ಮುಸ್ಲಿಂ ಪುರುಷರಲ್ಲಿ ನಂಬಿಕೆ ಇರಲಿಲ್ಲ ಎಂದಿದ್ದರು. ಫರ್ಹೀನ್ ತಂದೆ ಮೂರು ಮದುವೆಯಾಗಿದ್ದರು. ಇದು ಅವರ ಜೀವನದಲ್ಲಿ ಬಹಳ ಪ್ರಭಾವ ಬೀರಿತ್ತು ಎಂದು ಸಂದರ್ಶನದಲ್ಲಿ ಹೇಳಿದ್ದರು.

    ಇನ್ನು ಕನ್ನಡದಲ್ಲಿ ಕೂಡ ಫರ್ಹೀನ್​ ಅವರು ನಟನೆ ಮಾಡಿದ್ದಾರೆ. ಕನ್ನಡದ ಸೂಪರ್ ಹಿಟ್ ಚಿತ್ರ ಹಳ್ಳಿಮೇಷ್ಟ್ರು ಸಿನಿಮಾದಲ್ಲಿ ರವಿಚಂದ್ರನ್ ಜೊತೆಗೆ ನಟಿಸುವ ಮೂಲಕ ಗಮನ ಸೆಳೆದಿದ್ದ ಫರ್ಹೀನ್​ ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿ ಫರ್ಹೀನ್​ಗೆ ಈಗ 51 ವರ್ಷಗಳಾಗಿದ್ದು, ಮಾಜಿ ಭಾರತೀಯ ಕ್ರಿಕೆಟಿಗ ಮನೋಜ್ ಪ್ರಭಾಕರ್ ಅವರನ್ನು ವಿವಾಹವಾದರು ಮತ್ತು ಅವರ ಇಬ್ಬರು ಮಕ್ಕಳಾದ ರಾಹಿಲ್ ಮತ್ತು ಮನವಂಶ್​ನೊಂದಿಗೆ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts