More

    ರಾಮೇಶ್ವರಂ ಕೆಫೆ ಬ್ಲಾಸ್ಟ್​ ಪ್ರಕರಣದ ಮಾಸ್ಟರ್​​ ಮೈಂಡ್​ ನಿವೃತ್ತ ಯೋಧನ ಮಗ

    ಬೆಂಗಳೂರು: ನಗರದ ಕುಂದಲಹಳ್ಳಿಯಲ್ಲಿ ಇರುವ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್​ ಬ್ಲಾಸ್ಟ್​ಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಪ್ರಕರಣದ ಮಾಸ್ಟರ್​ಮೈಂಡ್​ ಇಬ್ಬರನ್ನು ಕಲ್ಕತ್ತಾದಲ್ಲಿ ಬಂಧಿಸಿದ್ದು, ತನಿಖೆ ವೇಳೆ ಸ್ಫೋಟಕ ಆಂಶ ಒಂದು ಬಯಲಾಗಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಂಗಳೂರು ಕುಕ್ಕರ್​ ಬ್ಲಾಸ್ಟ್​, ತುಂಗಾ ನದಿ ಟ್ರಯಲ್ ಬ್ಲಾಸ್ಟ್​, ರಾಮೇಶ್ವರಂ ಕೆಫೆ ಸ್ಫೋಟದ ಮಾಸ್ಟರ್​ ಮೈಂಡ್​ ಅಬ್ದುಲ್​ ಮತೀನ್​ ತಾಹಾ ನಿವೃತ್ತ ಯೋಧನ ಪುತ್ರ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಬಂಧಿತ ಉಗ್ರ ಅಬ್ದುಲ್​ ಮತೀನ್​ ತಾಹಾ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಸೊಪ್ಪುಗಡ್ಡೆಯ ನಿವಾಸಿಯಾಗಿದ್ದು, ಈತನ ತಂದೆ ಮನ್ಸೂರ್​ 22 ವರ್ಷಕ್ಕೂ ಹೆಚ್ಚು ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತರಾಗಿದ್ದರು. ಮಗ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎಂಬ ವಿಚಾರ ತಿಳಿದು ಆಘಾತಕ್ಕೊಳಗಾಗಿದ್ದ ಮನ್ಸೂರ್​ ಆತನನ್ನು ಗಲ್ಲಿಗೇರಿಸಿ ಎಂದು ಹೇಳಿದ್ದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮನ್ಸೂರ್ ಕಳೆದ ವರ್ಷ ಮೃತಪಟ್ಟಿದ್ದರು. ತಂದೆಯ ಅಂತಿಮ ದರ್ಶನವನ್ನು ಪಡೆಯಲು ತಾಹಾ ಬಂದಿರಲಿಲ್ಲ.

    ಇದನ್ನೂ ಓದಿ: ಲಖನೌ ವಿರುದ್ಧ ಡೆಲ್ಲಿಗೆ ಜಯ; IPL ಪಾಯಿಂಟ್ಸ್​ ಟೇಬಲ್​ನಲ್ಲಿ ಮಹತ್ವದ ಬದಲಾವಣೆ

    ತೀರ್ಥಹಳ್ಳಿ ಮೂಲದವನಾದ ಅಬ್ದುಲ್​ ಮತೀನ್​ ತಾಹಾ ಇಂಜಿನಿಯರಿಂಗ್​ ಪದವಿದರನಾಗಿದ್ದು, ಓದಿನ ಬಳಿಕ ಐಸಿಸ್​ ಸಂಘಟನೆಯೊಂದಿಗೆ ನಂಟು ಬೆಳೆಸಿಕೊಂಡಿದ್ದಾನೆ. ಇದಲ್ಲದೆ ಆತ ತೀರ್ಥಹಳ್ಳಿಯಲ್ಲಿದ್ದ ಸ್ನೇಹಿತರನ್ನು ಉಗ್ರ ಚಟುವಟಿಕೆಗಳಿಗೆ ಬಳಸಿಕೊಂಡಿದ್ದಾನೆ. ತಾಹಾ ಸಹಾಯದೊಂದಿಗೆ ಶಾರೀಖ್, ಮುಸಾವೀರ್ ಹುಸೇನ್ ಸಹಾಯದೊಂದಿಗೆ ‌ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿದ್ದನು. ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ಉಗ್ರ ಚಟುವಟಿಕೆ ಆಪರೇಟ್ ಮಾಡುತ್ತಿದ್ದನು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಇನ್ನು ಅಬ್ದುಲ್ ಮತೀನ್ ತಾಹಾ ಜೊತೆಗೆ ಇನ್ನು ಹಲವರು ಸ್ಲೀಪರ್ ಸೆಲ್ ಆಗಿ ಕೆಲಸ ಮಾಡಿರುವ ಸಂಶಯ ವ್ಯಕ್ತವಾಗಿದೆ. ಹೀಗಾಗಿ ಅಬ್ದುಲ್ ಮತೀನ್ ತಾಹಾ ಹಾಗೂ ಬಾಂಬರ್​ ಮುಸಾವೀರ್ ಹುಸೇನ್​​ನನ್ನು ಎನ್​ಐಎ ತೀರ್ಥಹಳ್ಳಿಗೆ ಕರೆತರುವ ಸಾಧ್ಯತೆ ಇದೆ. ತೀರ್ಥಹಳ್ಳಿಯಲ್ಲಿ ಹಲವರನ್ನು ವಿಚಾರಣೆಗೆ‌ ಒಳಪಡಿಸುವ ಸಂಭವವೂ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts