More

    ರಾಮೇಶ್ವರ ಕೆಫೆ ಸ್ಫೋಟ: ಬಾಂಬ್​ ಇಟ್ಟಿದ್ದ ಮುಸ್ಸಾವೀರ್, ಮಾಸ್ಟರ್​ ಮೈಂಡ್ ಮತೀನ್​ ತಹಾ ಅರೆಸ್ಟ್​​

    ಬೆಂಗಳೂರು: ಇಂದು ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ ಇಬ್ಬರು ಶಂಕಿತರೇ ಬೆಂಗಳೂರಿನ ರಾಮೇಶ್ವರ ಕೆಫೆ ಸ್ಫೋಟ ಪ್ರಕರಣದ ಪ್ರಮುಖ ಸಂಚುಕೋರರು ಎಂಬುದು ಬಯಲಾಗಿದೆ. ಇಬ್ಬರು ಶಂಕಿತರಲ್ಲಿ ಒಬ್ಬ ಕೆಫೆಗೆ ಬಾಂಬ್​ ಇಟ್ಟ ಉ್ರಗನೆಂಬುದು ತಿಳಿದುಬಂದಿದೆ.

    ಇಬ್ಬರನ್ನು ಪಶ್ಚಿಮ ಬಂಗಾಳದ ಪೂರ್ವ ಮಿದ್ನಾಪೂರ್​ ಜಿಲ್ಲೆಯ ಕಾಂಥಿ ಎಂಬಲ್ಲಿ ಶುಕ್ರವಾರ ಬೆಳಗ್ಗೆ ಎನ್​ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರನ್ನು ಅಬ್ದುಲ್​ ಮತೀನ್​ ತಹಾ ಮತ್ತು ಮುಸ್ಸಾವೀರ್​ ಹುಸೇನ್ ಶಾಝೇಬ್​​ ಎಂದು ಗುರುತಿಸಲಾಗಿದೆ. ಪಶ್ಚಿಮ ಬಂಗಾಳ, ಕರ್ನಾಟಕ, ತೆಲಂಗಾಣ ಮತ್ತು ಕೇರಳ ಪೊಲೀಸ್​ ಮತ್ತು ಎನ್​ಐಎ ಅಧಿಕಾರಿಗಳ ಜಂಟಿ ಕಾರ್ಯಾಚರಣೆ ವೇಳೆ ಶಂಕಿತರನ್ನು ಬಂಧಿಸಲಾಗಿದೆ.

    ಲಭ್ಯವಿರುವ ಪುರಾವೆಗಳ ಪ್ರಕಾರ ಆರೋಪಿ ಶಾಝೇಬ್ ಸ್ಫೋಟಕ ಸಾಧನವನ್ನು ಬ್ಯಾಗ್​ನಲ್ಲಿ ಇಟ್ಟು ಜನಪ್ರಿಯ ಉಪಾಹಾರ ಮಂದಿರ ರಾಮೇಶ್ವರ ಕೆಫೆಯಲ್ಲಿ ಇರಿಸಿದ್ದ ಎಂದು ತಿಳಿದುಬಂದಿದೆ. ದಾಳಿಯ ಯೋಜನೆ ಮತ್ತು ಬಾಂಬರ್​ ನಾಪತ್ತೆಯಾಗಲು ಮತ್ತೊಬ್ಬ ಆರೋಪಿ ಮತೀನ್​ ತಹಾ ಕಾರಣ ಎಂಬುದು ಗೊತ್ತಾಗಿದೆ. ಈ ಪ್ರಕರಣದಲ್ಲಿ ಮೂರು ಮತ್ತು ನಾಲ್ಕನೇ ಬಂಧನವಾಗಿದೆ. ಈ ಹಿಂದೆ ಮಾಜ್​ ಮುನೀರ್​ ಮತ್ತು ಮುಜಾಮಿಲ್​ ಶರೀಫ್​ ಎಂಬುವರನ್ನು ಎನ್​ಐಎ ಬಂಧಿಸಿದೆ.

    Bengaluru cafe blast,

    ಶಂಕಿತ ಶರೀಫ್​, ಬಾಂಬರ್​ಗೆ ಲಾಜಿಸ್ಟಿಕ್​ ಬೆಂಬಲ ನೀಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಇದು ಮೊದಲ ಬಂಧನವಾಗಿದೆ. ಶರೀಫ್​ ಹೇಳಿಕೆಯನ್ನು ಆಧರಿಸಿ ಮಾಜ್​ ಮುನೀರ್​ನನ್ನು ಬಂಧಿಸಲಾಗಿದೆ. ಈತ ಶಿವಮೊಗ್ಗ ಸ್ಫೋಟ ಮತ್ತು ಮಂಗಳೂರು ಗಲಭೆ ಪ್ರಕರಣದ ಶಂಕಿತನಾಗಿದ್ದಾನೆ. ಇದೀಗ ಇಬ್ಬರು ಶಂಕಿತರನ್ನು ಬಂಧಿಸಲಾಗಿದ್ದು, ಒಟ್ಟು ಈ ಪ್ರಕರಣದಲ್ಲಿ ನಾಲ್ವರ ಬಂಧನವಾಗಿದೆ.

    ಕರ್ನಾಟಕ, ತಮಿಳುನಾಡು ಮತ್ತು ಉತ್ತರಪ್ರದೇಶದಾದ್ಯಂತ 18 ಸ್ಥಳಗಳಲ್ಲಿ ಅಧಿಕಾರಿಗಳು ಶೋಧ ನಡೆಸಿದ ನಂತರ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ನಿವಾಸಿಗಳಾದ ಶಾಜೇಬ್ ಮತ್ತು ತಾಹಾನನ್ನು ಪಶ್ಚಿಮ ಬಂಗಾಳದ ಕಂಠಿಯಲ್ಲಿ ಸೆರೆಹಿಡಿದಿದ್ದಾರೆ.

    ಮಾರ್ಚ್​ 1ರಂದು ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್​ ಸ್ಫೋಟ ರಾಜ್ಯದಲ್ಲಿ ಭಾರಿ ಸಂಚಲನವನ್ನೇ ಸೃಷ್ಟಿಸಿದೆ. ಶಂಕಿತ ಬಾಂಬರ್​ ರವೆ ಇಡ್ಲಿ ತಿಂದು, ಬಾಂಬ್​ ಇಟ್ಟು ಪರಾರಿಯಾಗಿದ್ದ. ಸ್ಫೋಟದಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದರು. ಇದರಲ್ಲಿ ಕೆಫೆ ಸಿಬ್ಬಂದಿ ಮತ್ತು ಗ್ರಾಹಕರೂ ಸೇರಿದ್ದಾರೆ. ಅದೃಷ್ಟವಶಾತ್​​ ಯಾವುದೇ ಪ್ರಾಣ ಹಾಣಿ ಸಂಭವಿಸಿರಲಿಲ್ಲ.

    ದಾಳಿಯ ಬಳಿಕ ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಎನ್​ಐಎ ಶಂಕಿತರಿಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳನ್ನು ಬಿಡುಗಡೆ ಮಾಡಿತ್ತು. ಬಾಂಬರ್​ ಚಲಾವಲನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಬಾಂಬರ್​ ಮುಖಕ್ಕೆ ಮಾಸ್ಕ್​ ಹಾಕಿಕೊಂಡೇ ಓಡಾಡಿದ್ದ. ಶಂಕಿತರ ಬಗ್ಗೆ ಮಾಹಿತಿ ನೀಡಿದರೆ 10 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಎನ್​ಐಎ ಅಧಿಕಾರಿಗಳು ಘೋಷಣೆ ಮಾಡಿದ್ದರು. ಕೊನೆಗೂ ಸ್ಫೋಟ ಪ್ರಕರಣದ ಮಾಸ್ಟರ್​ ಮೈಂಡ್​ ಮತ್ತು ಬಾಂಬರ್​ ಇಬ್ಬರು ಸಿಕ್ಕಿಬಿದ್ದಿದ್ದಾರೆ. (ಏಜೆನ್ಸೀಸ್​)

    ರಾಮೇಶ್ವರ ಕೆಫೆ ಸ್ಫೋಟ ಪ್ರಕರಣ: ಪಶ್ಚಿಮ ಬಂಗಾಳದಲ್ಲಿ ಇಬ್ಬರು ಶಂಕಿತರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts