More

    ರಾಮೇಶ್ವರ ಕೆಫೆ ಸ್ಫೋಟ ಪ್ರಕರಣ: ಪಶ್ಚಿಮ ಬಂಗಾಳದಲ್ಲಿ ಇಬ್ಬರು ಶಂಕಿತರ ಬಂಧನ

    ಬೆಂಗಳೂರು: ರಾಮೇಶ್ವರ ಕೆಫೆ ಸ್ಫೋಟ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಪಶ್ಚಿಮ ಬಂಗಾಳದಲ್ಲಿ ಇಬ್ಬರು ಶಂಕಿತರನ್ನು ಬಂಧನ ಮಾಡಿದೆ.

    ಬಂಧಿತರನ್ನು ಅಬ್ದುಲ್​ ಮತೀನ್​ ಮತ್ತು ಮುಸ್ಸಾವೀರ್​ ಹುಸೇನ್​ ಎಂದು ಗುರುತಿಸಲಾಗಿದೆ. ಈ ಪ್ರಕರಣದ ಪ್ರಮುಖ ಸಂಚುಕೋರರು ಎಂದು ಹೇಳಲಾಗಿದೆ. ಆದರೂ ಈ ಬಗ್ಗೆ ಎನ್​ಐಎ ಯಾವುದೇ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

    ಮಾರ್ಚ್​ 1ರಂದು ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್​ ಸ್ಫೋಟ ರಾಜ್ಯದಲ್ಲಿ ಭಾರಿ ಸಂಚಲನವನ್ನೇ ಸೃಷ್ಟಿಸಿದೆ. ಶಂಕಿತ ಬಾಂಬರ್​ ರವೆ ಇಡ್ಲಿ ತಿಂದು, ಬಾಂಬ್​ ಇಟ್ಟು ಪರಾರಿಯಾಗಿದ್ದ. ಸ್ಫೋಟದಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದರು.

    ಈ ಪ್ರಕರಣದ ಶಂಕಿತ ಬಗ್ಗೆ ಮಾಹಿತಿ ನೀಡಿದರೆ 10 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಎನ್​ಐಎ ಅಧಿಕಾರಿಗಳು ಘೋಷಣೆ ಮಾಡಿದ್ದಾರೆ. ಶಂಕಿತ ವ್ಯಕ್ತಿ ಕರ್ನಾಟಕದ ವಿವಿಧ ಬಸ್‌ಗಳಲ್ಲಿ ಪ್ರಯಾಣಿಸುವ ಹಲವಾರು ದೃಶ್ಯಗಳನ್ನು ಎನ್​ಐಎ ಬಿಡುಗಡೆ ಮಾಡಿತ್ತು.

    ಇಲ್ಲಿಯವರೆಗೆ ನಾಲ್ವರ ಬಂಧನ
    ರಾಮೇಶ್ವರ ಕೆಫೆ ಸ್ಫೋಟ ಪ್ರಕರಣದಲ್ಲಿ ಇಲ್ಲಿಯವರೆಗೆ ನಾಲ್ವರನ್ನು ಎನ್​ಐಎ ಬಂಧಿಸಿದೆ. ಈ ಹಿಂದೆ ಮಾಜ್​ ಮುನೀರ್​ ಮತ್ತು ಮುಜಾಮಿಲ್​ ಶರೀಫ್​ ಎಂಬುವರನ್ನು ಎನ್​ಐಎ ಬಂಧಿಸಿತ್ತು. ಶಂಕಿತ ಶರೀಫ್​, ಬಾಂಬರ್​ಗೆ ಲಾಜಿಸ್ಟಿಕ್​ ಬೆಂಬಲ ನೀಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಇದು ಮೊದಲ ಬಂಧನವಾಗಿದೆ. ಶರೀಫ್​ ಹೇಳಿಕೆಯನ್ನು ಆಧರಿಸಿ ಮಾಜ್​ ಮುನೀರ್​ನನ್ನು ಬಂಧಿಸಲಾಗಿದೆ. ಈತ ಶಿವಮೊಗ್ಗ ಸ್ಫೋಟ ಮತ್ತು ಮಂಗಳೂರು ಗಲಭೆ ಪ್ರಕರಣದ ಶಂಕಿತನಾಗಿದ್ದಾನೆ.

    ಲೋಕಸಮರ 2024: ಎಲ್ಲಿ ಹೋದರು ಮಾಯಾವತಿ? ಚುನಾವಣಾ ಕಣದಿಂದ ಮಿಸ್ಸಿಂಗ್​!

    ಡಿಕೆ ಆರ್ಭಟ ಕಂಡು ಕೀಟಲೆ ಮಾಡಿದ ರೋಹಿತ್! ಸ್ಟಂಪ್​ ಮೈಕ್‌ನಲ್ಲಿ ಸೆರೆಯಾದ ಮಾತುಗಳು ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts