

ನವದೆಹಲಿ: ಈಚೆಗೆ ಮುಕ್ತಾಯಗೊಂಡ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಸೋಲುಂಡಿದ್ದು, ಕೋಚ್ ಗೌತಮ್ ಗಂಭೀರ್ (Gautam Gambhir) ಕಾರ್ಯವೈಖರಿಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗುತ್ತಿದೆ. ಗಂಭೀರ್ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ತಂಡ ಸೋಲುಗಳಿಗೆ ಕೊರಳೊಡ್ಡಿದ್ದು, ಬೇಡದ ದದಾಖಲೆಗಳಿಗೆ ಕೊರಳೊಡ್ಡಿದೆ. ಇದೀಗ ಚಾಂಪಿಯನ್ಸ್ ಟ್ರೋಫಿ ಗೌತಮ್ ಗಂಭೀರ್ ಪಾಲಿಗೆ ಮಹತ್ವವಾಗಿದ್ದು, ಒಂದು ವೇಳೆ ಇಲ್ಲಿ ಏನಾದರೂ ಭಾರತ ತಂಡ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲವೆಂದರೆ ಕೋಚ್ ಬದಲಾವಣೆಯಾಗುವುದಂತು ಪಕ್ಕಾ ಎಂದು ಹೇಳಲಾಗಿದೆ.
17ನೇ ಆವೃತ್ತಿಯಲ್ಲಿ ಕೆಕೆಆರ್ ತಂಡದ ಮೆಂಟರ್ ಆಗಿ ಐಪಿಎಲ್ ಪ್ರಶಸ್ತಿ ಗೆದ್ದುಕೊಟ್ಟ ಬೆನ್ನಲ್ಲೇ ಗೌತಮ್ ಗಂಭೀರ್ (Gautam Gambhir) ಭಾರಿ ಹೈಪ್‌ನೊಂದಿಗೆ ರಾಹುಲ್ ದ್ರಾವಿಡ್ ಉತ್ತರಾಧಿಕಾರಿಯಾಗಿ ಭಾರತ ತಂಡದ ಕೋಚ್ ಜವಾಬ್ದಾರಿ ವಹಿಸಿಕೊಂಡಿದ್ದರು. ಬಿಸಿಸಿಐ ಅವರು ಕೇಳಿದ ದುಬಾರಿ ವೇತನ, ಇಬ್ಬರು ಸಹಾಯಕ ಕೋಚ್ ಮತ್ತು ಬೌಲಿಂಗ್ ಕೋಚ್‌ಗಳನ್ನೇ ನೀಡಿ ಪೂರ್ಣಬೆಂಬಲ ಒದಗಿಸಿತ್ತು. ಇದರಿಂದ ಕ್ರಿಕೆಟ್ ಪ್ರೇಮಿಗಳು ಟೀಮ್ ಇಂಡಿಯಾ ಮೇಲೆ ಭಾರಿ ನಿರೀಕ್ಷೆಗಳನ್ನು ಇಟ್ಟಿದ್ದರು. ಆದರೆ, ನಿರೀಕ್ಷೆಗಳೆಲ್ಲವೂ ಹುಸಿಯಾಗಿದ್ದು, ಗೌತಮ್ ಗಂಭೀರ್ ಕೋಚಿಂಗ್ ಅವಧಿಯಲ್ಲೇ ಕಳಪೆ ಪ್ರದರ್ಶನ ನೀಡುತ್ತಿದೆ.
ಇನ್ನೂ ಗೌತಮ್ ಗಂಭೀರ್ (Gautam Gambhir) ಕಾರ್ಯವೈಖರಿ ಕುರಿತು ಮಾತನಾಡಿರುವ ಟೀಮ್ ಇಂಡಿಯಾ ಮಾಜಿ ಆಟಗಾರ ಮನೋಜ್ ತಿವಾರಿ, ಗೌತಮ್ ಗಂಭೀರ್ ಒಬ್ಬ ಕಪಟದಾರಿ. ಆತ ಹೇಳಿದಂತೆ ನಡೆದುಕೊಳ್ಳುವುದಿಲ್ಲ. ರೋಹಿತ್ ಹಾಗೂ ಅಬಿಷೇಕ್ ನಾಯಕರ್ ಇಬ್ಬರು ಮುಂಬೈನವರಾಗಿದ್ದು, ಜಲಜ್ ಸಕ್ಸೇನಾ ಪರ ಮಾತನಾಡಲು ಯಾರೂ ಇಲ್ಲ. ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಆದರೆ ಮೌನವಾಗಿರುತ್ತಾರೆ.
ಹೊರಗಡೆಯಿಂದ ಬೌಲಿಂಗ್ ಕೋಚ್ಅನ್ನು ಕರೆಸಿಕೊಳ್ಳುವ ಅವಶ್ಯಕತೆಯಾದರೂ ಏನಿತ್ತು. ಮಾರ್ನ್ ಮಾರ್ಕೆಲ್ ಲಖನೌನಿಂದ ಬಂದಿದ್ದು, ಅಭಿಷೇಕ್ ನಾಯರ್ ಕೆಕೆಆರ್ನಿಂದ ಬಂದಿದ್ದಾರೆ. ಇವರಿಬ್ಬರು ಗಂಭೀರ್ (Gautam Gambhir) ಸೂಚನೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ. ಅಂದು ಗಂಭೀರ್ ಒಬ್ಬರೇ ಕೆಕೆಆರ್ ತಂಡವನ್ನು ಗೆಲ್ಲಿಸಲಿಲ್ಲ. ಅದರಲ್ಲಿ ನಮ್ಮ ಪರಿಶ್ರಮವೂ ಇದೆ. ವಿಶ್ವಕಪ್ ವಿಜೇತ ತಂಡದ ನಾಯಕ ಐಪಿಎಲ್ನಲ್ಲಿ ಕ್ಯಾಪ್ಟನ್ಸಿ ಹೊಂದಿದ್ದವರ ಜೊತೆ ಹೇಗೆ ಆಟವಾಡುತ್ತಾರೆ ಎಂಬುದು ನಮಗೆ ಗೊತ್ತಿಲ್ಲ. ಆದರೆ, ಗಂಭೀರ್ ಕ್ರೆಡಿಟ್ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಮನೋಜ್ ತಿವಾರಿ ವಾಗ್ದಾಳಿ ನಡೆಸಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಒಂದು ವೇಳೆ ಭಾರತ ತಂಡ ಸೋತಿದ್ದು, ಮುಂಬರುವ ಚಾಂಪಿಯನ್ಸ್ ಟ್ರೋಫಿ ಗಂಭೀರ್ ಪಾಲಿಗೆ ಕೊನೆಯಾಗಲಿದೆ. ಟೆಸ್ಟ್ ಸರಣಿ ಬಳಿಕ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಆಡಬೇಕಾಗಿದ್ದು, ಒಂದು ವೇಳೆ ತಂಡದ ಪ್ರದರ್ಶನ ಸುಧಾರಿಸದಿದ್ದಲ್ಲಿ ಗಂಭೀರ್ ಅವರ ಸ್ಥಾನಕ್ಕೆ ಕುತ್ತು ಬರುವುದು ನಿಶ್ಚಿತ ಎಂದು ಹೇಳಲಾಗಿದೆ. ಅಂದರೆ ಮುಂದಿನ 60 ದಿನಗಳ ಕಾಲ ಗಂಭೀರ್ (Gautam Gambhir) ಪಾಲಿಗೆ ಮಹತ್ವದಾಗಿದ್ದು, ಏನಾಗಲಿದೆ ಎಂದು ಕಾದು ನೋಡಬೇಕಿದೆ.