VIDEO: ಒಂದೇ ಓವರ್​ನಲ್ಲಿ 7 ಸಿಕ್ಸರ್! ಸ್ಫೋಟಕ ದ್ವಿಶತಕದಲ್ಲಿ 16 ಸಿಕ್ಸರ್, 10 ಬೌಂಡರಿ…!

Ruturaj Gaikwad
Published on

ನವದೆಹಲಿ: ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶ ಕ್ರಿಕೆಟ್ ತಂಡಗಳು ವಿಜಯ್ ಹಜಾರೆ ಟ್ರೋಫಿಯ ಕ್ವಾಟರ್ರ್​ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ವಿಶ್ವದಾಖಲೆಯೊಂದ ಸೃಷ್ಟಿಯಾಗಿದೆ. ಮಹಾರಾಷ್ಟ್ರದ ಬ್ಯಾಟ್ಸ್​ಮನ್ ಋತುರಾಜ್ ಗಾಯಕ್ವಾಡ್ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. 159 ಎಸೆತಗಳಲ್ಲಿ ಅಜೇಯ 220 ರನ್ ಸಿಡಿಸಿದ್ದಾರೆ.

ಅದರಲ್ಲೂ ಇನ್ನಿಂಗ್ಸ್​ನ 49ನೇ ಓವರ್​ನಲ್ಲಿ ಒಂದರ ಹಿಂದೆ ಒಂದರಂತೆ 7 ಸಿಕ್ಸರ್​ ಸಿಡಿಸಿ ಮಿಂಚಿದರು. ನೋ ಬಾಲ್ ಎಸೆತದಲ್ಲೂ ಸಿಕ್ಸರ್ ಸಿಡಿಸಿ, ಒಂದೇ ಓವರ್​ನಲ್ಲಿ 43 ರನ್​ ಗಳಿಸಿದರು. ಉತ್ತರ ಪ್ರದೇಶದ ವೇಗಿ ಶಿವಂ ಸಿಂಗ್ ಅವರ ಓವರ್​ನಲ್ಲಿ ಋತುರಾಜ್ ಗಾಯಕ್ವಾಡ್ 7 ಸಿಕ್ಸರ್ ಸಿಡಿಸುವ ಮೂಲಕ ಮಿಂಚಿದರು. ಈ ಮೂಲಕ ಒಂದೇ ಓವರ್​ನಲ್ಲಿ 7 ಸಿಕ್ಸರ್​ ಸಿಡಿಸಿದ ದಾಖಲೆಯನ್ನು ಋತುರಾಜ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಅಹಮದಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮಹಾರಾಷ್ಟ್ರ ತಂಡ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 330 ರನ್​ಗಳ ಬೃಹತ್ ಟಾರ್ಗೆಟ್ ನೀಡಿದೆ. ಗಾಯಕ್ವಾಡ್ ಇನ್ನಿಂಗ್ಸ್​​ನಲ್ಲಿ ಒಟ್ಟು 10 ಬೌಂಡರಿ ಹಾಗೂ 16 ಸಿಕ್ಸರ್ ಸಿಡಿಸಿದರು. ಈ ಮೂಲಕ ಋತುರಾಜ್ ತಮ್ಮ ದ್ವಿಶತಕದ ಆಟದಲ್ಲಿ 136 ರನ್​ಗಳನ್ನು ಬೌಂಡರಿ, ಸಿಕ್ಸರ್ ಮೂಲಕ ಕಲೆ ಹಾಕಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net