ಶ್ರದ್ಧಾ ಕೊಲೆ ರೀತಿಯಲ್ಲೇ ಮತ್ತೊಂದು ಹತ್ಯೆ; ತಂದೆಯನ್ನೇ ತುಂಡರಿಸಿ ಫ್ರಿಜ್‌ನಲ್ಲಿಟ್ಟ ಮಗ!

Delhi
Published on

ನವದೆಹಲಿ: ಶ್ರದ್ಧಾ ಎಂಬ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿ, ಫ್ರಿಡ್ಜ್​ನೊಳಗಿಟ್ಟಿದ್ದ ಪ್ರಕರಣ ಸುದ್ದಿ ಕೇಳಿ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಈ ಪ್ರಕರಣ ಮಾಸಿ ಹೋಗುವ ಮುನ್ನವೇ ಇಂತದ್ದೇ ಮತ್ತೊಂದು ಪ್ರಕರಣ ದೆಹಲಿಯಲ್ಲಿ ಬೆಳಕಿಗೆ ಬಂದಿದೆ.

ಲಭ್ಯವಾಗಿರುವ ಮಾಹಿತಿಯ ದೆಹಲಿಯ ಪಾಂಡವನಗರದಲ್ಲಿ ಮಗನೊಬ್ಬ, ತಾಯಿಯೊಂದಿಗೆ ಸೇರಿಕೊಂಡು ತನ್ನ ತಂದೆಯನ್ನೇ ಬರ್ಭರವಾಗಿ ಹತ್ಯೆ ಮಾಡಿದ್ದಾಳೆ. ನಂತರ ಮೃತದೇಹವನ್ನು ತುಂಡುಗಳನ್ನಾಗಿ ಮಾಡಿ ಚಾಂದ್​ ಚಿತ್ರಮಂದಿರದ ಮುಂಭಾಗದ ಮೈದಾನದಲ್ಲಿ ಎಸೆದು ಬಂದಿದ್ದಾರೆ. ಮೃತದೇಹವನ್ನು ಎಸೆಯುತ್ತಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ, ತಂದೆಗೆ ಬೇರೊಂದು ಅಕ್ರಮ ಸಂಬಂಧವಿತ್ತು. ಹೀಗಾಗಿ ತಾಯಿಯೊಂದಿಗೆ ಸೇರಿ ತಂದೆಯನ್ನು ಕೊಲೆ ಮಾಡಿದ್ದೇನೆ. ನಂತರ ಮೃತದೇಹವನ್ನು ಫ್ರಿಡ್ಜ್​ನಲ್ಲಿಟ್ಟಿದ್ದೆವು. ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ರಾತ್ರಿ ವೇಳೆ ಮೃತದೇಹವನ್ನು ಎಸೆದು ಬಂದಿದ್ದೇವೆ ಎಂದು ಮಗ ಹೇಳಿರುವುದು ತಿಳಿದು ಬಂದಿದೆ.

ಬಂಧನವಾಗಿರುವ ಮಹಿಳೆಯ ಹೆಸರು ಪೂನಂ ಮತ್ತು ಮಗನ ಹೆಸರು ದೀಪಕ್. ಮೃತರ ಹೆಸರು ಅಂಜನ್​ ದಾಸ್ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ದೆಹಲಿ ಪೊಲೀಸರು ಸದ್ಯ ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net