VIDEO: ಶಿಕ್ಷಕಿಗೆ 'ಐ ಲವ್​ ಯೂ' ಎಂದು ಪೀಡಿಸಿದ ವಿದ್ಯಾರ್ಥಿಗಳು; ವಿಡಿಯೋ ವೈರಲ್!

Viral Video
Published on

ಉತ್ತರಪ್ರದೇಶ: ಅದೊಂದು ಕಾಲವಿತ್ತು... ಶಿಕ್ಷಕರೆಂದರೆ ಎಲ್ಲಿಲ್ಲದ ಭಯ. ವಿದ್ಯಾರ್ಥಿಗಳು ತರಗತಿಯೊಳಗೆ ಎದ್ದು ನಿಂತು ಮಾತನಾಡಲೂ ಭಯ ಪಡುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಅಂತರದ ಮಹತ್ವ ಕುಸಿಯುತ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ ಮೂವರು ವಿದ್ಯಾರ್ಥಿಗಳು, ತರಗತಿಯೊಳಗೆ ಶಿಕ್ಷಕಿಗೆ ಪ್ರೇಮ ನಿವೇದನೆ ಮಾಡಿಕೊಂಡ ಘಟನೆ ನಡೆದಿದೆ. ಇದಷ್ಟೇ ಅಲ್ಲದೇ, ತಮ್ಮ ಈ ನೀಚ ವರ್ತನೆಯನ್ನು ವಿಡಿಯೋ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿದ್ಯಾರ್ಥಿಗಳ ಈ ಕೃತ್ಯವನ್ನು ಇದೀಗ ಎಲ್ಲರೂ ಖಂಡಿಸುತ್ತಿದ್ದಾರೆ.

ಮೀರತ್​​ನ ಶಾಲೆಯೊಂದರಲ್ಲಿ ಶಿಕ್ಷಕಿ ತರಗತಿಯೊಳಗೆ ಇದ್ದಾಗಲೇ, ವಿದ್ಯಾರ್ಥಿಗಳು ವಿಡಿಯೋ ಮಾಡಿಕೊಂಡು 'ಐ ಲವ್​ ಯೂ' ಟೀಚರ್ ಎಂದಿದ್ದಾರೆ. ಅಲ್ಲದೇ ಗ್ರೌಂಡ್​ನಲ್ಲಿ ಟೀಚರ್ ನಡೆದೆಕೊಂಡು ಹೋಗುತ್ತಿದ್ದಾಗಲೂ ಮತ್ತೆ ಮತ್ತೆ 'ಐ ಲವ್​ ಯೂ' ಎಂದು ಕೂಗಿದ್ದಾರೆ. ಈ ಘಟನೆಯಿಂದ ಮನನೊಂದ ಶಿಕ್ಷಕಿ, ವಿದ್ಯಾರ್ಥಿಗಳು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸ್ ದೂರು ದಾಖಲಿಸಿದ್ದಾರೆ.

ವರದಿಯ ಪ್ರಕಾರ ಮೀರತ್ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಮೂವರು ವಿದ್ಯಾರ್ಥಿಗಳ ವಿರುದ್ಧ ಐಟಿ ಕಾಯ್ದೆ ಮತ್ತು ಮಾನಸಿಕ ಕಿರುಕುಳದ ಸೆಕ್ಷನ್​​ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಖಂಡನೆಗಳು ವ್ಯಕ್ತವಾಗಿದೆ. ವಿದ್ಯಾರ್ಥಿಗಳು ಈ ವರ್ತನೆ ಸರಿಯಲ್ಲ. ಶಿಕ್ಷಕರನ್ನು ಗೌರವದಿಂದ ಕಾಣಬೇಕು ಎಂಬೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net