ಅದರ ಬಗ್ಗೆ ದಯವಿಟ್ಟು ಮಾತನಾಡಬೇಡಿ! ರಾಹುಲ್​ ದ್ರಾವಿಡ್​ಗೆ ಸಲಹೆ ಕೊಟ್ಟ ಮಾಜಿ ಕ್ರಿಕೆಟಿಗರು

Untitled-design-24
Published on

ನವದೆಹಲಿ: ಜೂನ್ 01ರಿಂದ ಪ್ರಾರಂಭವಾದ ಟಿ20 ವಿಶ್ವಕಪ್ ಟೂರ್ನಿ ಇದೀಗ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯುತ್ತಿದ್ದು, ಜೂ.09ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಕ್ಕೆ ದಿನಗಣನೆ ಆರಂಭವಾಗಿದೆ. ಈ ರೋಚಕ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದ ಆಟಗಾರರ ಬಗ್ಗೆ ಸಾಕಷ್ಟು ಮಾತುಕತೆಗಳು, ಅಭಿಪ್ರಾಯಗಳನ್ನು ಹೊರಹಾಕಿರುವ ಮಾಜಿ ಕ್ರಿಕೆಟಿಗರ ಪೈಕಿ ಇರ್ಫಾನ್ ಪಠಾಣ್ ಧ್ವನಿ ಎತ್ತಿದ್ದು, ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಹೆಸರುಗಳನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದ್ದಾರೆ.

ಇತ್ತೀಚೆಗಷ್ಟೇ ಯಶಸ್ವಿಯಾಗಿ ಅಂತ್ಯಗೊಂಡ ಐಪಿಎಲ್ 17ನೇ ಸೀಸನ್​ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ಕೊಟ್ಟ ಮುಂಬೈ ಇಂಡಿಯನ್ಸ್​ ಅಂಕಪಟ್ಟಿಯಲ್ಲಿ 10ನೇ ಸ್ಥಾನ ಗಳಿಸಿ, ಲೀಗ್​ನಿಂದ ಹೊರಗುಳಿಯಿತು. ಇನ್ನು ಇಡೀ ಆವೃತ್ತಿಯಲ್ಲಿ ಕ್ರಿಕೆಟ್ ಅಭಿಮಾನಿಗಳಿಂದ ತೀವ್ರ ಟೀಕೆಗಳಿಗೆ ತುತ್ತಾದ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್​ ಪಾಂಡ್ಯ, ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಹಾಗೂ ಉತ್ತಮ ಫಾರ್ಮ್​ ಹೊಂದುವಲ್ಲಿ ವಿಫಲರಾದರು. ತಂಡದಲ್ಲಿ ರೋಹಿತ್ ಶರ್ಮಾರಿಂದ ನಾಯಕತ್ವ ಕಸಿದುಕೊಂಡ ಹಾರ್ದಿಕ್​ಗೆ ಈ ವರ್ಷದ ಆರಂಭದಿಂದಲೂ ಯಾವುದು ಸರಿಯಿಲ್ಲ.

ಲೀಗ್​ನಲ್ಲಿ ಆಡಿದ ಅಷ್ಟು ಪಂದ್ಯಗಳಲ್ಲಿ ಒಂದಡೆ ರೋಹಿತ್ ಪರ ಘೋಷಣೆ ಕೂಗಿ, ಕಿರಾಚಾಡಿ ಬೆಂಬಲಿಸಿದ ಫ್ಯಾನ್ಸ್, ಮತ್ತೊಂದೆಡೆ ಹಾರ್ದಿಕ್​ಗೆ ಅವಾಚ್ಯ ಪಂದಗಳಿಂದ ಛೀಮಾರಿ ಹಾಕಿದ್ದರು. ಅಂದಿನಿಂದಲೂ ಹಾರ್ದಿಕ್​-ರೋಹಿತ್​ ವಿಚಾರ ಕ್ರಿಕೆಟ್ ಅಭಿಮಾನಿಗಳಲ್ಲಿ ಅಳಿಸಲಾಗದ ವಿಷಯವಾಗಿ ಕುಳಿತಿದೆ. ಇದನ್ನೇ ಮುಂದಿಟ್ಟು ಮಾತನಾಡಿದ ಇರ್ಫಾನ್ ಪಠಾಣ್ ಮತ್ತು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮಾಥ್ಯೂವ್​ ಹೆಡನ್​, ಪ್ರಸ್ತುತ ಭಾರತ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್​ಗೆ ಬಹುಮುಖ್ಯ ಸಲಹೆಯೊಂದನ್ನು ನೀಡಿದ್ದಾರೆ. ​

"ಇಲ್ಲಿ ನಾನು ರೋಹಿತ್ ಮತ್ತು ಪಾಂಡ್ಯ ನಡುವಿನ ವಿಷಯದ ಬಗ್ಗೆ ಚರ್ಚೆ ಮಾಡಲು ಇಷ್ಟಪಡುವುದಿಲ್ಲ. ಏನು ಸಂಭವಿಸಿತೋ ಅದು ಆಗೋಗಿದೆ. ನನಗೆ ನಿಮ್ಮಿಂದ ಇರುವ ನಿರೀಕ್ಷೆ ಇಷ್ಟೇ, ಭಾರತಕ್ಕೆ ಪಂದ್ಯಗಳನ್ನು ಗೆಲ್ಲಿಸಿಕೊಡಿ. ಇದೇ ಚಾಂಪಿಯನ್​ ಪಟ್ಟಕ್ಕೆ ಬಹುಮುಖ್ಯ ಮಾರ್ಗದಾರಿ. ತಂಡಕ್ಕೆ ನೀವು ಮುಖ್ಯ ಭಾಗವಾಗಿದ್ದೀರಾ. ಆಲ್​ರೌಂಡರ್ ಆಗಿ ಖಂಡಿತ ಹಾರ್ದಿಕ್​ ಒಳ್ಳೆಯ ಪ್ರದರ್ಶನ ನೀಡ್ತಾರೆ. ಐಪಿಎಲ್​ನಲ್ಲಿ ಏನಾಯಿತು, ಅದು ಇಲ್ಲಿ ಮುಂದುವರೆಯುವುದು ಬೇಡ" ಎಂದು ಪಠಾಣ್ ಕೋಚ್ ರಾಹುಲ್ ದ್ರಾವಿಡ್​ಗೆ ಸಲಹೆ ನೀಡಿದರು. ಇದಕ್ಕೆ ಹೆಡನ್ ಕೂಡ ತಲೆದೂಗಿಸಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net