

ಬೆಂಗಳೂರು: ಕಿಣಿ ಆರ್‌ಆರ್ ಸ್ಪೋರ್ಟ್ಸ್ ತಂಡ, ಫಾಲ್ಕನ್ ಸ್ಪೋರ್ಟ್ಸ್ ಕ್ಲಬ್ ಗೋಲ್ಡನ್ ಜುಬಿಲಿ ಮಹಿಳಾ ಟಿ20 ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿತು. ಥಣಿಸಂದ್ರದಲ್ಲಿರುವ ಸಂಪ್ರಸಿದ್ಧಿ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಕಿಣಿ ಆರ್‌ಆರ್ ಸ್ಪೋರ್ಟ್ಸ್ ತಂಡ 40 ರನ್‌ಗಳಿಂದ ಹೆರಾನ್ಸ್ ತಂಡವನ್ನು ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಕಿಣಿ ಆರ್‌ಆರ್ ಸ್ಪೋರ್ಟ್ಸ್ ತಂಡ, ವನಿತಾ ವಿಆರ್ (77ರನ್, 49 ಎಸೆತ, 11 ಬೌಂಡರಿ, 3 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 8 ವಿಕೆಟ್‌ಗೆ 132 ರನ್ ಪೇರಿಸಿತು. ಪ್ರತಿಯಾಗಿ ಹೆರಾನ್ಸ್ ತಂಡ 19.4 ಓವರ್‌ಗಳಲ್ಲಿ 92 ರನ್‌ಗಳಿಗೆ ಆಲೌಟ್ ಆಯಿತು.
ಇದನ್ನೂ ಓದಿ: ಡ್ರಾ ಪಂದ್ಯದಲ್ಲಿ ಬೆಂಗಳೂರು ಎಫ್ ಸಿ
ಇದಕ್ಕೂ ಮೊದಲು 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ವೇದಾ ಕೃಷ್ಣಮೂರ್ತಿ ಸಾರಥ್ಯದ ಅಮೆಯಾ ಸ್ಪೋರ್ಟ್ಸ್ ತಂಡ, ಶೀನ್ ಸ್ಪೋರ್ಟ್ಸ್ ತಂಡವನ್ನು ಸೋಲಿಸಿತು. ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸದಸ್ಯೆ ಶಾಂತಾ ರಂಗಸ್ವಾಮಿ, ಭಾರತ ತಂಡದ ನಾಯಕಿ ಮಿಥಾಲಿ ರಾಜ್, ಮಾಜಿ ಕ್ರಿಕೆಟಿಗ ಮೊಹಮದ್ ಅಜರುದ್ದೀನ್ ಬಹುಮಾನ ವಿತರಿಸಿದರು.
ಇದನ್ನೂ ಓದಿ: ಪಂಜಾಬ್ ತಂಡದ ಎದುರು ಕರ್ನಾಟಕ ತಂಡಕ್ಕೆ ಹೀನಾಯ ಸೋಲು
ಕಿಣಿ ಆರ್‌ಆರ್ ಸ್ಪೋರ್ಟ್ಸ್: 8 ವಿಕೆಟ್‌ಗೆ 132 (ವನಿತಾ ವಿಆರ್ 77, ಪುಷ್ಪಾ ಕಿರೆಸೂರ್ 20ಕ್ಕೆ 3, ಅನಘಾ ಮುರಳಿ 14ಕ್ಕೆ2, ಅಶಾ ಜಾಯ್ 16ಕ್ಕೆ 2), ಹೆರಾನ್ಸ್ ಸ್ಪೋರ್ಟ್ಸ್: 19.4 ಓವರ್‌ಗಳಲ್ಲಿ 92 (ದಿವ್ಯಾ ಜಿ 37, ರಾಧಾ ಯಾದವ್ 13ಕ್ಕೆ 3, ದೆಬಾಸ್ಮಿತಾ ದತ್ತಾ 14ಕ್ಕೆ 3).