ಪಂಜಾಬ್ ತಂಡದ ಎದುರು ಕರ್ನಾಟಕ ತಂಡಕ್ಕೆ ಹೀನಾಯ ಸೋಲು

syed mushtaq ali trophy for web
Published on

ವಿಜಯವಾಣಿ ಸುದ್ದಿಜಾಲ, ಬೆಂಗಳೂರು

ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ವೈಫಲ್ಯ ಅನುಭವಿಸಿದ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ಪಂಜಾಬ್ ಎದುರು ಮುಗ್ಗರಿಸಿದೆ. ನಗರದ ಹೊರವಲಯದಲ್ಲಿರುವ ಆಲೂರು ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಕರುಣ್ ನಾಯರ್ ಪಡೆ 9 ವಿಕೆಟ್‌ಗಳಿಂದ ಶರಣಾಯಿತು. ಮೊದಲ ಪಂದ್ಯದಲ್ಲಿ ಜಮ್ಮುಕಾಶ್ಮೀರ ತಂಡದ ಎದುರು ಜಯ ದಾಖಲಿಸಿತ್ತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ 8 ವಿಕೆಟ್‌ಗೆ 125 ರನ್ ಪೇರಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಪಂಜಾಬ್ ತಂಡ ಸಿಮ್ರಾನ್ ಸಿಂಗ್ (89*ರನ್, 52 ಎಸೆತ, 9 ಬೌಂಡರಿ, 5 ಸಿಕ್ಸರ್) ಹಾಗೂ ಅಭಿಷೇಕ್ ಶರ್ಮ (30ರನ್, 30 ಎಸೆತ, 2 ಬೌಂಡರಿ, 1 ಸಿಕ್ಸರ್) ಜೋಡಿಯ ಅಬ್ಬರದಿಂದಾಗಿ 14.4 ಓವರ್‌ಗಳಲ್ಲಿ 127 ರನ್‌ಗಳಿಸಿ ಜಯದ ನಗೆ ಬೀರಿತು. ಕರ್ನಾಟಕ ತಂಡ ಮೊದಲ ಪಂದ್ಯದಲ್ಲಿ ಜಮ್ಮುಕಾಶ್ಮೀರ ಎದುರು ಜಯ ದಾಖಲಿಸಿತ್ತು.

ಮುಂದಿನ ಎದುರಾಳಿ: ತ್ರಿಪುರ, ಯಾವಾಗ : ಗುರುವಾರ

ಕರ್ನಾಟಕ: 8 ವಿಕೆಟ್‌ಗೆ 125 (ರೋಹನ್ ಕದಂ 32, ದೇವದತ್ ಪಡಿಕಲ್ 19, ಪವನ್ ದೇಶಪಾಂಡೆ 16, ಕರುಣ್ ನಾಯರ್ 13, ಕೆ.ಗೌತಮ್ 13, ಸಿದ್ದಾರ್ಥ್ 26ಕ್ಕೆ 4, ಅರ್ಷ್‌ದೀಪ್ ಸಿಂಗ್ 18ಕ್ಕೆ 2), ಪಂಜಾಬ್: 14.4 ಓವರ್‌ಗಳಲ್ಲಿ 1 ವಿಕೆಟ್‌ಗೆ 127 (ಅಭಿಷೇಕ್ ಶರ್ಮ 30, ಸಿಮ್ರಾನ್ ಸಿಂಗ್ 89*, ಕೆ.ಗೌತಮ್ 28ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net