ಡ್ರಾ ಪಂದ್ಯದಲ್ಲಿ ಬೆಂಗಳೂರು ಎಫ್ ಸಿ

bfc match for web
Published on

ಮಾರ್ಗೋವಾ: ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿದ್ದ ಬೆಂಗಳೂರು ಎಫ್ ಸಿ ತಂಡ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಮಂಗಳವಾರ ಸಮಾಧಾನಕರ ಡ್ರಾ ಸಾಧಿಸಿತು. ತಿಲಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬಿಎಫ್ ಸಿ ತಂಡ 1-1 ಗೋಲುಗಳಿಂದ ನಾರ್ಥ್‌ಈಸ್ಟ್ ಯುನೈಟೆಡ್ ತಂಡದ ಎದುರು ಸಮಬಲ ಸಾಧಿಸಿತು. ಹಿಂದಿನ 4 ಪಂದ್ಯಗಳಲ್ಲಿ ಸೋಲನುಭವಿಸಿ ನಿರಾಸೆ ಕಂಡಿದ್ದ ಸುನೀಲ್ ಛೇಟ್ರಿ ಪಡೆ ಡ್ರಾ ಸಾಧಿಸಲು ಯಶಸ್ವಿಯಾಯಿತು.

ಪಂದ್ಯದ 27ನೇ ನಿಮಿಷದಲ್ಲೇ ಗೋಲು ಬಿಟ್ಟುಕೊಡುವ ಮೂಲಕ ಮೊದಲಾರ್ಧದಲ್ಲಿ 0 -1 ರಿಂದ ಹಿನ್ನಡೆ ಅನುಭವಿಸಿತು. ದ್ವಿತೀಯಾರ್ಧದ ಆರಂಭದಲ್ಲೇ ರಾಹುಲ್ ಬೇಕೆ (49) ಗೋಲು ಬಾರಿಸುವ ಮೂಲಕ ತಿರುಗೇಟು ನೀಡಿತು. ಬಳಿಕ ಉಭಯ ತಂಡಗಳು ಪ್ರಬಲ ಪೈಪೋಟಿ ನೀಡಿದ ಫಲವಾಗಿ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿತು. ಬಿಎಫ್ ಸಿ ಲೀಗ್‌ನಲ್ಲಿ ಇದುವರೆಗೂ ಆಡಿರುವ 11 ಪಂದ್ಯಗಳಲ್ಲಿ ತಲಾ 3 ಗೆಲುವು ಸಾಧಿಸಿದರೆ, ತಲಾ 4 ಪಂದ್ಯಗಳಲ್ಲಿ ಸೋಲು ಹಾಗೂ ಡ್ರಾ ಸಾಧಿಸಿ 13 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲೆ ಉಳಿಯಿತು.

ಮುಂದಿನ ಎದುರಾಳಿ: ಕೇರಳ ಬ್ಲಾಸ್ಟರ್ಸ್‌

ಯಾವಾಗ : ಜನವರಿ 20

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net