More

    ಥಾಯ್ಲೆಂಡ್ ಓಪನ್‌ನಲ್ಲಿ ಮೊದಲ ಸುತ್ತಿನಲ್ಲೇ ನಿರಾಸೆ ಕಂಡ ವಿಶ್ವ ಚಾಂಪಿಯನ್ ಪಿವಿ ಸಿಂಧು

    ಬ್ಯಾಂಕಾಕ್: 10 ತಿಂಗಳ ಬಳಿಕ ಆಡಿದ ಮೊದಲ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲೇ ವಿಶ್ವ ಚಾಂಪಿಯನ್ ಪಿವಿ ಸಿಂಧು ನಿರಾಸೆ ಅನುಭವಿಸಿದ್ದಾರೆ. ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಪಿವಿ ಸಿಂಧು 21-16, 24-26, 13-21 ಗೇಮ್‌ಗಳಿಂದ ವಿಶ್ವ ನಂ.18 ಡೆನ್ಮಾರ್ಕ್‌ನ ಮಿಯಾ ಬ್ಲಿಚ್ ಫೆಲ್‌ಡ್ಟ್ ಎದುರು 74 ನಿಮಿಷಗಳ ಹೋರಾಟದಲ್ಲಿ ಸೋಲನುಭವಿಸಿದರು. ಕರೊನಾ ಕಾಲದಲ್ಲಿ ಚೊಚ್ಚಲ ಗೆಲುವಿನ ನಿರೀಕ್ಷೆಯಲ್ಲಿದ್ದ ಹೈದರಾಬಾದ್ ಆಟಗಾರ್ತಿ ನಿರಾಸೆ ಅನುಭವಿಸಿದರು. ಸಿಂಧು ಸೋಲಿನೊಂದಿಗೆ ಟೂರ್ನಿಯಲ್ಲಿ ಭಾರತ ಮಹಿಳೆಯರ ಹೋರಾಟ ಕೂಡ ಅಂತ್ಯಗೊಂಡಿದೆ.

    ಇದನ್ನೂ ಓದಿ: ಪಂಜಾಬ್ ತಂಡದ ಎದುರು ಕರ್ನಾಟಕ ತಂಡಕ್ಕೆ ಹೀನಾಯ ಸೋಲು

    ಲಂಡನ್ ಒಲಿಂಪಿಕ್ಸ್ ಪದಕ ವಿಜೇತ ಸೈನಾ ನೆಹ್ವಾಲ್ ಕರೊನಾ ವೈರಸ್ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕಣದಿಂದ ಹಿಂದೆ ಸರಿದಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸಾಯಿ ಪ್ರಣೀತ್ ಮೊದಲ ಸುತ್ತಿನಲ್ಲೇ ಆಘಾತ ಎದುರಿಸಿದರು. ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವ ತವಕದಲ್ಲಿರುವ ಪ್ರಣೀತ್ 16-21, 10-21 ನೇರ ಗೇಮ್‌ಗಳಿಂದ ವಿಶ್ವ ನಂ.15 ಥಾಯ್ಲೆಂಡ್‌ನ ಕಂಟಾಫೋನ್ ವಾಂಗ್‌ಚರೊಯಿನ್ ಎದುರು ಸೋಲು ಕಂಡರು. ಸೈನಾ, ಪ್ರಣಯ್‌ಗೆ ಕೋವಿಡ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾರತದ ಕೋಚ್‌ಗಳು, ಮ್ಯಾನೇಜರ್‌ಗಳು, ವೈಯಕ್ತಿಕ ಕೋಚ್‌ಗಳಿಗೆ ಪ್ರವಾಸ ನಿರಾಕರಿಸಲಾಗಿತ್ತು. ಅಲ್ಲದೆ, ಸೈನಾ ಪತಿ ಪಿ.ಕಶ್ಯಪ್ ಕೂಡ ಕಣದಿಂದ ಹಿಂದೆ ಸರಿದಿದ್ದಾರೆ.

    ಇದನ್ನೂ ಓದಿ: ‘ದಿ ವಾಲ್’ ಬರ್ತ್ ಡೇಗೆ ಟೀಮ್ ಇಂಡಿಯಾ ಭರ್ಜರಿ ಗಿಫ್ಟ್…!

    * ಅಶ್ವಿನಿ ಜೋಡಿ ಶುಭಾರಂಭ
    ಕನ್ನಡತಿ ಅಶ್ವಿನಿ ಪೊನ್ನಪ್ಪ-ಸಾತ್ವಿಕ್ ಸಾಯಿರಾಜ್ ರೆಡ್ಡಿ ಜೋಡಿ ಮಿಶ್ರ ಡಬಲ್ಸ್ ವಿಭಾಗದಲ್ಲಿ ಶುಭಾರಂಭ ಕಂಡಿತು. ಅಶ್ವಿನಿ-ಸಾತ್ವಿಕ್ ಜೋಡಿ 21-11, 27-29, 21-16 ರಿಂದ ಇಂಡೋನೇಷ್ಯಾದ ಹಫೀಜ್ ಫೈಜಲ್ ಹಾಗೂ ಗ್ಲೋರಿಯಾ ವಿದಜಾಜಾ ಜೋಡಿಯನ್ನು ಸೋಲಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts