

ಮೆಲ್ಬೋರ್ನ್: ಪಾಕಿಸ್ತಾನ ನೀಡಿದ 138 ರನ್ಗಳ ಗುರಿ ಬೆನ್ನು ಹತ್ತಿದ ಇಂಗ್ಲೆಂಡ್ ತಂಡ, 5 ವಿಕೆಟ್ಗಳ ಜಯ ದಾಖಲಿಸುವ ಮೂಲಕ ಟಿ-20 ವಿಶ್ವಕಪ್ ಪ್ರಶಸ್ತಿ ಗೆದ್ದುಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಉತ್ತಮ ಆರಂಭ ಪಡೆಯುವ ಯೋಜನೆ ರೂಪಿಸಿಕೊಂಡಿತ್ತು. ಆದರೆ ಇದಕ್ಕೆ ಅವಕಾಶ ಮಾಡಿಕೊಡದ ಇಂಗ್ಲೆಂಡ್ ಬೌಲರ್, ಆರಂಭದಲ್ಲಿಯೇ ಮೊಹಮ್ಮದ್ ರಿಝ್ವಾನ್ ವಿಕೆಟ್ ಪಡೆಯುವಲ್ಲಿ ಯಾಶಸ್ವಿಯಾದರು. ನಂತರ ಬಂದ ಯಾವೊಬ್ಬ ಬ್ಯಾಟ್ಸ್ಮನ್ ಕೂಡ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸದಂತೆ ತಡೆಯುವಲ್ಲಿ ಇಂಗ್ಲೆಂಡ್ ಬೌಲರ್ಗಳು ಯಶಸ್ವಿಯಾದರು.
ಫೈನಲ್ ಪಂದ್ಯದಲ್ಲಿ ಪ್ರತಿಯೊಂದು ಬಾಲ್ ಹಾಗೂ ಪ್ರತಿಯೊಂದು ರನ್ ಕೂಡಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇಂಗ್ಲೆಂಡ್ ಬೌಲರ್ಗಳು ಪಾಕಿಸ್ತಾನ ಬ್ಯಾಟ್ಸ್ಮನ್ಗಳ ಮೇಲೆ ಒತ್ತಡ ಹೇರಿದರು. ಇದರಿಂದಾಗಿ ಪಾಕಿಸ್ತಾನ ಮಂದಗತಿಯ ಬ್ಯಾಟಿಂಗ್ ಮಾಡಬೇಕಾಗಿ ಬಂತು. ಇದು ಅಂತಿಮವಾಗಿ ತಂಡದ ಒಟ್ಟು ಮೊತ್ತದಲ್ಲಿ ನಿರ್ಣಾಯಕವಾಗಿ ಪರಿಣಮಿಸಿತು.
ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಬರೋಬ್ಬರಿ 48 ಡಾಟ್ ಬಾಲ್ಗಳನ್ನು ಎದುರಿಸಿದೆ. ಇದರಿಂದಾಗಿ ತಂಡ 138 ರನ್‌ಗಳಿಸಲಷ್ಟೇ ಶಕ್ತವಾಯಿತು. ಇಂಗ್ಲೆಂಡ್ ಪರವಾಗಿ ಆಲ್ರೌಂಡರ್ ಸ್ಯಾಮ್ ಕರನ್ 4 ಓವರ್ಗಳಲ್ಲಿ ಕೇವಲ 12 ರನ್ ನೀಡಿ 3 ವಿಕೆಟ್ ಪಡೆದರು. ಸ್ಯಾಮ್ ಕರ್ರನ್ ನಾಲ್ಕು ಓವರ್ನ 24 ಎಸೆತಗಳಲ್ಲಿ 15 ಬಾಲ್ಗಳನ್ನು ಡಾಟ್ ಮಾದರು. ಸ್ಪಿನ್ನರ್ ಆದಿಲ್ ರಶೀದ್ ಒಂದು ಓವರ್ ಮೇಡನ್ ಮಾಡುವಲ್ಲಿ ಯಶಸ್ವಿಯಾದರು.