

Chahal : ಇಂಡಿಯನ್ ಪ್ರೀಮಿಯರ್ ಲೀಗ್ 2025ರ 18ನೇ ಆವೃತ್ತಿ ಆರಂಭವಾಗಿದ್ದು, ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುತ್ತಿದೆ. ಅದರಲ್ಲೂ ಮಾ.22ರಿಂದ ಶುರುವಾದ ಐಪಿಎಲ್ 18ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಉತ್ತಮ ಆಲ್‌ರೌಂಡ್ ಪ್ರದರ್ಶನದ ಮೂಲಕ ಪ್ರಸ್ತುತ ಐಪಿಎಲ್ ಅಂಕಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಮಿಂಚುತ್ತಿದೆ.
ಆದರೆ, ಖ್ಯಾತ ಆಟಗಾರರಿಗೆ ಕೋಟಿ, ಕೋಟಿ ರೂ. ಸುರಿದರೂ ಸಹ ಕೆಲ ಆಟಗಾರರು ಮಾತ್ರ ಈ ಬಾರಿಯ ಐಪಿಎಲ್ನಲ್ಲಿ ಮಿಂಚುತ್ತಿಲ್ಲ. ಇದು ಪ್ರಾಂಚೈಸಿಗಳಿ ಮಾತ್ರವಲ್ಲ ಅಭಿಮಾನಿಗಳಲ್ಲಿ ಕೂಡ ಭಾರೀ ನಿರಾಸೆ ಮೂಡಿಸಿದೆ. ಅದರಲ್ಲೂ ಪಂಜಾಬ್ ತಂಡ ಆಟಗಾರ ಯಜುವೇಂದ್ರ ಚಾಹಲ್ ತಮ್ಮ ಬೌಲಿಂಗ್ ಕೈಚಳಕ ತೋರುತ್ತಿಲ್ಲ. ಇದಕ್ಕಾಗಿ ಅವರು ಹಲವು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಇದೀಗ ಈ ಬಗ್ಗೆ ಸ್ವತ ಚಾಹಲ್ ಅವರೇ ಮಾತನಾಡಿದ್ದಾರೆ.
ಹೌದು, ಪಂಜಾಬ್ ಪರ ಚಾಹಲ್ ಮೂರು ಪಂದ್ಯಗಳನ್ನು ಆಡಿದ್ದು, ಕೇವಲ ಒಂದು ವಿಕೆಟ್ ಮಾತ್ರ ಕಬಳಿಸಿದ್ದಾರೆ. ಹೀಗಾಗಿ, 18 ಕೋಟಿ ರೂ.ಗೆ ಖರೀದಿದ ಕಾರಣ ಚಾಹಲ್ ಬಗ್ಗೆ ತಜ್ಞರು ಮತ್ತು ಅಭಿಮಾನಿಗಳು ಬೇಸರ ಹೊರ ಹಾಕಿದ್ದಾರೆ.
''ನಾವು ಇಲ್ಲಿಯವರೆಗೆ ಕೇವಲ ಮೂರು ಪಂದ್ಯಗಳನ್ನು ಮಾತ್ರ ಆಡಿದ್ದೇವೆ. ಇನ್ನೂ ಬಹಳ ದೂರ ಸಾಗಬೇಕಾಗಿದೆ. ತಂಡವು ಎರಡು ಪಂದ್ಯಗಳನ್ನು ಗೆದ್ದಿದೆ ಮತ್ತು ನನ್ನ ಗಮನ ತಂಡವನ್ನು ಗೆಲ್ಲಿಸುವತ್ತ ಇದೆ. ಅಷ್ಟೆ" ಎಂದು ಚಾಹಲ್ ಹೇಳಿದ್ದಾರೆ.
"ನಾನು ಈ ಬೆಲೆಗೆ ಅರ್ಹ. ನೀವು ಆಡುವಾಗ, ಹರಾಜಿನಲ್ಲಿ ನೀವು ಯಾವ ಬೆಲೆಗೆ ಪಡೆದಿದ್ದೀರಿ ಎಂಬುದರ ಬಗ್ಗೆ ನೀವು ಯೋಚಿಸುವುದಿಲ್ಲ. ನೀವು 6 ಕೋಟಿ ಅಥವಾ 18 ಕೋಟಿ ರೂ.ಗೆ ಹೋದರೂ, ಅದು ಒಂದೇ ಮನಸ್ಥಿತಿ ಮತ್ತು ನೀವು ತಂಡವನ್ನು ಗೆಲ್ಲಿಸಲು ಬಯಸುತ್ತೀರಿ" ಎಂದು ಹೇಳಿದ್ದಾರೆ.(ಏಜೆನ್ಸೀಸ್)