IPL ನೋಡಲು MS ಧೋನಿ ಪಾಲಕರು ಭಾಗಿ; ಸೂಪರ್​ ಕಿಂಗ್ಸ್​ಗೆ 'ತಲಾ' ನಿವೃತ್ತಿ! | Retires

dk - 2025-04-05T172833.477
Published on

Retires : ಮೂರು ಮ್ಯಾಚ್​ಗಳಲ್ಲಿ ಸೋಲುವ ಮೂಲಕ ಮುಖಭಂಗ ಅನುಭವಿಸುವ ಮೂಲಕ ಅಂಕಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿರುವ ಚೈನ್ನೈ ಸೂಪರ್​ ಕಿಂಗ್ಸ್​, ಇದೀಗ ನಾಲ್ಕನೇ ಪಂದ್ಯ ಡೆಲ್ಲಿ ತಂಡದ ವಿರುದ್ಧ ಆಡುತ್ತಿದೆ. ಇದರ ನಡುವೆ ಮಹೇಂದ್ರ ಸಿಂಗ್​ ಧೋನಿ ತಂದೆ ಪಾನ್​ಸಿಂಗ್​ ಧೋನಿ ಮತ್ತು ತಾಯಿ ದೇವಕಿ ದೇವಿ ಪಂದ್ಯ ನೋಡಲು ಚಿದಂಬರಂ ಕ್ರೀಡಾಂಗಣಕ್ಕೆ ಬಂದಿದ್ದಾರೆ.

ಇನ್ನು ಧೋನಿ ಪಾಲಕರು ಕ್ರಿಕೆಟ್​ ನೋಡಲು ಅಪರೂಪಕ್ಕೆ ಬಂದಿರುವುದು ಇಂಟರ್​ನೆಟ್​ನಲ್ಲಿ ಚರ್ಚೆಗೆ ಗ್ರಾಸವಾಗಿದೆ.ಈ ಹಿನ್ನೆಲೆ ಧೋನಿ ಇಂದೇ IPL ಗೆ ನಿವೃತ್ತಿ ಘೋಷಿಸಲಿದ್ದಾರೆಯೇ? ಎಂದು ಸಾಮಾಜಿಕ ಜಾಲತಾಣದಲ್ಲಿ ಎಂದು ಕೆಲ ಫೋಟೋಗಳು ವೈರಲ್​​ ಆಗುತ್ತೀವೆ.

2008ರಲ್ಲಿ ಐಪಿಎಲ್​ ಆರಂಭವಾದಗ ಧೋನಿಯ ಪಾಲಕರು ತಮ್ಮ ಮಗನ ಆಟ ನೋಡಲು ಬಂದಿದ್ದರು. ಜತೆಗೆ ಮಹೇಂದ್ರ ಸಿಂಗ್​ ಧೋನಿ ಪತ್ನಿ ಸಾಕ್ಷಿ ಮತ್ತು ಮಗಳು ಝಿವಾ ಕೂಡ ಅಂದು ಪಾಲ್ಗೊಂಡಿದ್ದರು. ಇದೀಗ ಈ ಚಿತ್ರಣ ಮತ್ತೊಮ್ಮೆ ಮರುಕಳುಹಿಸಿದ್ದು, ಧೋನಿ ನಿವೃತ್ತಿಯಾಗಲಿದ್ದಾರೆ ಎಂಬ ಪ್ರಶ್ನೆ ಮೂಡಿದೆ ಎಂದು ನೆಟ್ಟಿಗರು ಭಾವಿಸುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಫೋಟೋಗಳು ವೈರಲ್​ ಆಗಿವೆ.

ಮಾ.22ರಿಂದ ಶುರುವಾದ ಐಪಿಎಲ್ 18ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಉತ್ತಮ ಆಲ್‌ರೌಂಡ್ ಪ್ರದರ್ಶನದ ಮೂಲಕ ಪ್ರಸ್ತುತ ಐಪಿಎಲ್ ಅಂಕಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಮಿಂಚುತ್ತಿದೆ. ಈ ಮಧ್ಯೆ ಐದು ಬಾರಿ ಚಾಂಪಿಯನ್ಸ್ ತಂಡ ಎಂದೇ ಗುರುತಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್, ಆಡಿದ ಮೂರು ಪಂದ್ಯಗಳಲ್ಲಿ ಕೇವಲ ಒಂದೇ ಒಂದು ಮ್ಯಾಚ್‌ನಲ್ಲಿ ಗೆಲುವು ಸಾಧಿಸಿದೆ. ನಾಯಕ ರುತುರಾಜ್​ ಗಾಯಕ್ವಾಡ್​ ಆನ್​ಫಿಟ್​ ನಡುವೆ ಕ್ಯಾಪ್ಟನ್​ ಆಗಿ ಮುಂದುವರೆದಿದ್ದಾರೆ.

ಇಂದು (ಏ.05) ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕ್ರಿಕೆಟ್ ದಂತಕಥೆ, ಮಹೇಂದ್ರ ಸಿಂಗ್ ಧೋನಿ ಮತ್ತೆ ಸಿಎಸ್‌ ತಂಡದ ಕ್ಯಾಪ್ಟನ್ ಆಗಿ ವಾಪಾಸ್ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿತ್ತು. ಗಾಯದಿಂದ ಬಳಲುತ್ತಿರುವ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ ಮುಂಬರುವ ಪಂದ್ಯಗಳಲ್ಲಿ ತಂಡದಲ್ಲಿ ಅಲಭ್ಯವಿರುವ ಹಿನ್ನೆಲೆ ಧೋನಿ ಅವರೇ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ ಎಂಬ ವದಂತಿ ಕೂಡ ಮುಂದುವರದಿತ್ತು. ಆದರೆ, ಗಾಯಕ್ವಾಡ್​ ಫಿಟ್ನೆಸ್​ ಬಗ್ಗೆ ಗೊಂದಲಗಳಿದ್ದರೂ ನಾಯಕನಾಗಿ ಆಟವಾಡುತ್ತಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net