ಚಿರತೆ & ಅದರ ಮರಿಗಳಿಗೆ ನೀರು ಕೊಟ್ಟ ವ್ಯಕ್ತಿ; Viral Video ನೋಡಿ ಮಾನವೀಯತೆಯ ನೋಟ ಎಂದ ನೆಟ್ಟಿಗರು

Untitled design - 2025-04-06T185808.151
Published on

ಭೋಪಾಲ್​: ಕುನೊ ರಾಷ್ಟ್ರೀಯ ಉದ್ಯಾನವನದಿಂದ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಚಿರತೆ ಮತ್ತು ಅದರ ನಾಲ್ಕು ಮರಿಗಳಿಗೆ ಕುಡಿಯಲು ನೀರು ನೀಡುತ್ತಿರುವುದನ್ನು ಕಾಣಬಹುದು. ಕುತೂಹಲಕಾರಿಯಾಗಿ ಇವು ಕೆಲವು ದಿನಗಳ ಹಿಂದೆ ದನಗಳನ್ನು ಕೊಂದ ಆರೋಪದ ಮೇಲೆ ಸ್ಥಳೀಯ ಗ್ರಾಮಸ್ಥರು ಕಲ್ಲು ತೂರಾಟ ನಡೆಸಿದ್ದ ಚಿರತೆಗಳಾಗಿದ್ದವು.

ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ಹಳದಿ ಪ್ಲಾಸ್ಟಿಕ್ ಬಟಲ್​ನಲ್ಲಿ ನೀರನ್ನು ಕಬ್ಬಿಣದ ತಟ್ಟೆಗೆ ಸುರಿಯುವುದನ್ನು ಕಾಣಬಹುದು. ಆತ ವಿಡಿಯೋ ಮಾಡಿ ಎಂದು ಹೇಳುವುದನ್ನು ಕೇಳಬಹುದು. ಕೆಲವು ಸೆಕೆಂಡುಗಳ ನಂತರ ಜ್ವಾಲಾ ಎಂಬ ಹೆಣ್ಣು ಚಿರತೆ ಮತ್ತು ಅದರ ನಾಲ್ಕು ಮರಿಗಳು ನಿಧಾನವಾಗಿ ತಟ್ಟೆಯ ಕಡೆಗೆ ಚಲಿಸುತ್ತವೆ ಮತ್ತು ಶಾಂತವಾಗಿ ನೀರನ್ನು ಕುಡಿಯುತ್ತವೆ.

ಸಾಮಾಜಿಕ ಜಾಲತಾಣದಲ್ಲಿ ಹಲವಾರು ವಿಡಿಯೋಗಳು ಕಾಣಿಸಿಕೊಂಡವು. ಅದರಲ್ಲಿ ಗ್ರಾಮಸ್ಥರು ಚಿರತೆಗಳ ಮೇಲೆ ಕಲ್ಲು ತೂರಾಟ ನಡೆಸುತ್ತಿರುವುದನ್ನು ಮತ್ತು ಕೋಲುಗಳಿಂದ ಅವುಗಳನ್ನು ಓಡಿಸಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು. ಮಾನವರು ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಅಪಾಯಕಾರಿ ತಿರುವು ಪಡೆಯಬಹುದು ಎಂದು ವನ್ಯಜೀವಿ ತಜ್ಞರು ಎಚ್ಚರಿಸಿದ್ದರು. ಆದರೆ ಈಗ ಇದೇ ಚಿರತೆಗಳು ಮನುಷ್ಯರ ಸಮ್ಮುಖದಲ್ಲಿ ಯಾವುದೇ ಭಯವಿಲ್ಲದೆ ನೀರು ಕುಡಿಯುತ್ತಿರುವುದು ಕಂಡುಬಂದಿದೆ. ಅನೇಕ ಬಳಕೆದಾರರು ಇದನ್ನು "ನಂಬಿಕೆಯ ಮರಳುವಿಕೆ" ಮತ್ತು "ಮಾನವೀಯತೆಯ ನೋಟ" ಎಂದು ಹೇಳುತ್ತಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net