'ಚಿನ್ನ'ದ ಹುಡುಗನಿಗೆ ಹರಿದುಬಂತು ಗಣ್ಯರಿಂದ ಶುಭಾಶಯಗಳ ಮಹಾಪೂರ; 'ಮತ್ತೊಮ್ಮೆ ಸಾಧಿಸಿದ ನೀರಜ್​ ಚೋಪ್ರಾ' ಎಂದ ರಾಜಮೌಳಿ

Untitled design (95)
Published on

ಆಂಧ್ರಪ್ರದೇಶ: ಭಾನುವಾರ (ಆಗಸ್ಟ್​ 27) ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಮತ್ತೊಮ್ಮೆ ಐತಿಹಾಸಿಕ ಸಾಧನೆಗೈದ ನೀರಜ್​ ಚೋಪ್ರಾ ಅವರಿಗೆ ದೇಶಾದ್ಯಂತ ಇದೀಗ ವ್ಯಾಪಕ ಅಭಿನಂದನೆಗಳು ಹರಿದುಬರುತ್ತಿವೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯರೊಬ್ಬರು ಚಿನ್ನದ ಪದಕ ಗೆದ್ದಿರುವುದು ಇದೇ ಮೊದಲು ಎಂಬ ಹೆಗ್ಗಳಿಕೆ ನೀರಜ್​ ಪಾತ್ರರಾಗಿದ್ದಾರೆ.

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಬೆನ್ನಲ್ಲೇ ಚಿತ್ರರಂಗದ ಹಲವು ಸ್ಟಾರ್​ ನಟ-ನಟಿಯರು ಸೇರಿದಂತೆ ಅನೇಕ ಗಣ್ಯರಿಂದ ನೀರಜ್​ಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಈ ಸಾಲಿನಲ್ಲಿ ಭಾರತದ ಸ್ಟಾರ್​ ನಿರ್ದೇಶಕ ಮತ್ತು ಟಾಲಿವುಡ್​ನ ಐಕಾನ್​ ಸ್ಟಾರ್, ಅಲ್ಲು ಅರ್ಜುನ್​​ ಟ್ವೀಟ್​ಗಳು ನೆಟ್ಟಿಗರ ಗಮನ ಸೆಳೆದಿವೆ.

ನೀರಜ್ ಚೋಪ್ರಾ ಗೆಲುವಿಗೆ ಪ್ರತಿಕ್ರಿಯಿಸಿರುವ ಎಸ್.ಎಸ್. ರಾಜಮೌಳಿ, "ಮತ್ತೊಮ್ಮೆ ನಮ್ಮ ಚಿನ್ನದ ಹುಡುಗ ಸಾಧಿಸಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಪಾತ್ರರಾದ ನೀರಜ್ ಚೋಪ್ರಾಗೆ ಅಭಿನಂದನೆಗಳು" ಎಂದು ಟ್ವೀಟ್​ ಮಾಡಿದ್ದಾರೆ.

"ಮೊದಲ ಬಾರಿಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದಕ್ಕಾಗಿ ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳು. ಇದು ಭಾರತಕ್ಕೆ ಹೆಮ್ಮೆಯ ಗೆಲುವು, ಜೈ ಹಿಂದ್" ಎಂದು ನಟ ಅಲ್ಲು ಅರ್ಜುನ್​ ಟ್ವೀಟ್​ ಮಾಡಿ ಶುಭಾಶಯ ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net