More

    ಉ.ಕದಲ್ಲಿಯೇ ರಡ್ಡಿ ಸಮುದಾಯದ ಬೃಹತ್ ಸಮಾವೇಶ ಆಯೋಜನೆ

    ಸಿಂಧನೂರು: ರಡ್ಡಿ ಸಮುದಾಯವನ್ನು ಒಗ್ಗೂಡಿಸಿ, ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿಯೇ ಬೃಹತ್ ರಡ್ಡಿ ಸಮುದಾಯದ ಸಮಾವೇಶ ಆಯೋಜಿಸಲು ಉದ್ದೇಶಿಸಲಾಗಿದೆಂದು ಸಾರಿಗೆ ಸಚಿವ ರಾಮಲಿಂಗರಡ್ಡಿ ಹೇಳಿದರು.

    ಇದನ್ನೂ ಓದಿ: ಮುನ್ನೂರು ರಡ್ಡಿ ಸಮಾಜ; ರಂಗೋಲಿ, ಪ್ರಬಂಧ ಸ್ಪರ್ಧೆ 27ರಂದು

    ನಗರದ ಶ್ರೀ ಅನ್ನದಾನೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ರಡ್ಡಿ ಸಂಕ್ಷೇಮ ಸಂಘದಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

    ರಡ್ಡಿ ಸಮುದಾಯ ಇನ್ನೊಬ್ಬರಿಗೆ ಕೇಡು ಬಯಸದೆ ಬೇರೆ ಸಮಾಜದ ಜನರನ್ನು ಮೇಲೆತ್ತುವ ವಿಚಾರ ಹೊಂದಿರುವುದು ಬಹಳ ದೊಡ್ಡ ಗುಣ. ಬಹುತೇಕರು ಕೃಷಿ ಆಧರಿಸಿ ಜೀವನ ನಡೆಸುತ್ತಿದ್ದಾರೆ.

    ರಡ್ಡಿ ಸಮಾಜಕ್ಕೆ ಮಲ್ಲಮ್ಮ ಬಂಗಾರದ ಕಡ್ಡಿಯಾಗಿದ್ದಾರೆ. ರಾಜ್ಯದಲ್ಲಿ ಮಾತ್ರವಲ್ಲದೇ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ಇತರೆ ರಾಜ್ಯಗಳಲ್ಲಿ ಇದ್ದಾರೆ. ಸಮಾಜದಲ್ಲಿ ಮಹಿಳೆಯರು ಹೆಚ್ಚಾಗಿ ಶಿಕ್ಷಣವಂತರಾಗಬೇಕು.

    ಸಮಾಜದ ಆಚಾರ-ವಿಚಾರಗಳನ್ನು ಮುಂದಿನ ಪೀಳಿಗೆಗೆ ತಿಳಿಸಬೇಕೆಂದರು. ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಶತಮಾನದ ಬಳಿಕ ಸಮಾಜದಲ್ಲಿ ಅನೇಕ ಬದಲಾವಣೆಗಳಾದವು. ಶರಣರು ಸಮಾಜದ ಅಂಕು-ಡೊಂಕು ತಿದ್ದುವ ಕೆಲಸ ಮಾಡಿದ್ದಾರೆ.

    ಅಂಥವರಲ್ಲಿ ಹೇಮರಡ್ಡಿ ಮಲ್ಲಮ್ಮ ಪ್ರಮುಖರಾಗಿದ್ದಾರೆ. ರಡ್ಡಿ ಸಮುದಾಯ ಎಲ್ಲ ಸಮಾಜಕ್ಕೆ ಹಿರಿಯ ಇದ್ದಂತೆ, ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಶಕ್ತಿ ಇದೆ. ರಡ್ಡಿ ಸಮುದಾಯಕ್ಕೆ ದಾನ-ಧರ್ಮ ರಕ್ತಗತವಾಗಿ ಬಂದಿದ್ದು ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕೆಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts