ಮುನ್ನೂರು ರಡ್ಡಿ ಸಮಾಜ; ರಂಗೋಲಿ, ಪ್ರಬಂಧ ಸ್ಪರ್ಧೆ 27ರಂದು

PH 08
Published on

ಕಲಬುರಗಿ: ಮುನ್ನೂರು ರಡ್ಡಿ ಸಮಾಜದ ಸಂಘದ ವಾರ್ಷಿಕ ಮಹಾಸಭೆ ನಿಮಿತ್ತ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಹಿಂದಿನ ವಿಶಾಲವಾದ ಸ್ಥಳದಲ್ಲಿ ಮುನ್ನೂರು ರಡ್ಡಿ ಸಮಾಜದವರಿಗಾಗಿ ಭಾನುವಾರ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ವಾಸುದೇವ ಪಾಟೀಲ್ ತಿಳಿಸಿದ್ದಾರೆ.

25 ವರ್ಷದೊಳಗಿನ ಹಾಗೂ 25 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ರಂಗೋಲಿ, ಮ್ಯೂಸಿಕ್ ಚೇರ್ ಸ್ಪರ್ಧೆ ಆಯೋಜಿಸಲಾಗಿದೆ. ಇನ್ನು 5ರಿಂದ 10ನೇ ತರಗತಿ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗಾಗಿ ಪ್ರಬಂಧ ಹಾಗೂ ಮ್ಯೂಸಿಕಲ್ ಚೇರ್ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಭಾನುವಾರ ಮಧ್ಯಾಹ್ನ 3ರಿಂದ ಸ್ಪರ್ಧೆಗಳು ಆರಂಭವಾಗಲಿವೆ. ಪ್ರಬಂಧ ವಿಷಯ ಸ್ಥಳದಲ್ಲೇ ಘೋಷಣೆ ಮಾಡಲಾಗುತ್ತದೆ. ಮಾಹಿತಿಗಾಗಿ ಮೊ.83107 78344 ಗೆ ಸಂಪರ್ಕಿಬಹುದು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net