More

    ಆಸ್ಪತ್ರೆಗಳಿಗೆ ಗುಣಮಟ್ಟದ ಔಷಧ ಪೂರೈಸಿ

    ಕೋಲಾರ: ಗುಣಮಟ್ಟದ ಔಷಧಗಳನ್ನು ಆಸ್ಪತ್ರೆಗಳಿಗೆ ಪೂರೈಕೆ ಮಾಡಬೇಕು. ಈ ಜವಾಬ್ದಾರಿ ಔಷಧ ಮಾರಾಟಗಾರರ ಮೇಲಿದೆ ಎಂದು ಜಿಲ್ಲಾ ಐಎಂಎ ಅಧ್ಯಕ್ಷ ಡಾ.ಎಂ.ನಾರಾಯಣಸ್ವಾಮಿ ತಿಳಿಸಿದರು.

    ನಗರದ ಕೆಇಬಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘದ 27ನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಯಾವುದೇ ಕ್ಷೇತ್ರದಲ್ಲಿ ಗುರಿ ಸಾಧನೆ ಮಾಡಲು ಪೈಪೋಟಿ ಹೆಚ್ಚಿದೆ. ಛಲಬಿಡದೆ ಗುಣಮಟ್ಟದ ಸೇವೆ ಜನತೆಗೆ ತಲುಪಿಸಿದಾಗ ಸಾಧನೆ ಸಾಧ್ಯ ಎಂದರು. ಕೋಟ್ಯಂತರ ರೂ. ಬಂಡವಾಳ ಹೂಡಿರುವಂತ ಕಂಪನಿಗಳು ಪರಿಣಾಮಕಾರಿ ಔಷಧಗಳನ್ನು ಉತ್ಪಾದಿಸಬೇಕು ಎಂದರು.
    ನಗರದ ಲೀಲಾವತಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಎನ್​.ಅರವಿಂದ್​ ಮಾತನಾಡಿ, ಬಹುತೇಕ ಮಂದಿ ಕೆಲಸದ ಒತ್ತಡದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವುದನ್ನು ಕಾಣುತ್ತಿದ್ದೇವೆ. ಆರೋಗ್ಯದ ಕಡೆಗಮನ ಹರಿಸಬೇಕು. ಮಾನಸಿಕ ಹಾಗೂ ದೈಹಿಕವಾಗಿ ಸದೃಢತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಪ್ರತಿದಿನ ಕನಿಷ್ಠ 30 ನಿಮಿಷಗಳಾದರೂ ವ್ಯಾಯಾಮ ಮಾಡಬೇಕು. ದ್ವಿಚಕ್ರ ವಾಹನಗಳನ್ನು ಓಡಿಸುವವರು ಪ್ರತಿ ದಿನ ಕಡ್ಡಾಯವಾಗಿ ಹೆಲ್ಮೆಟ್​ ಧರಿಸಬೇಕು. ಆ ಮೂಲಕ ಪ್ರಾಣ ರಕ್ಷಣೆಗೆ ಒತ್ತು ನೀಡಬೇಕು ಎಂದು ಹೇಳಿದರು.
    ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎಂ.ನಾರಾಯಣ ಮಾತನಾಡಿ, ಡ್ರಗ್ಸ್​ಮುಕ್ತ ಭಾರತ ನಿಮಾರ್ಣ ಮಾಡಲು ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ. ಆಸೆ, ಆಮಿಷೆಗಳಿಗೆ ಬಲಿಯಾಗದೆ ನಶೆಮುಕ್ತ ಭಾರತದ ಅಭಿಯಾನ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳ ಬೇಕು ಎಂದು ಹೇಳಿದರು.

    ಮೆಡಿಕಲ್​ ಶಾಪ್​ಗಳ ಮೇಲೆ ದಾಳಿ ಮಾಡಿ ಪ್ರಕರಣ ದಾಖಲು ಮಾಡಿ ಬೀಗ ಮುದ್ರೆ ಹಾಕಲಾಗಿದೆ. ಡ್ರಗ್ಸ್​ ವಿರುದ್ಧ ಯುದ್ಧದ ಮಾದರಿಯಲ್ಲಿ ಸಮರ ಸಾರುವಂತಾಗಬೇಕು. ಬಂಡವಾಳಶಾಹಿಗಳಿಗೆ ಹಣವೇ ಪ್ರಧಾನವಾಗಿರುತ್ತದೆ. ಆದರೆ ಭಾರತದಲ್ಲಿ ಅರೋಗ್ಯಕರ ಸಮಾಜ ನಿಮಾರ್ಣಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದರು.

    ಸಂಘದ ಅಧ್ಯಕ್ಷ ಜಾನ್​ ವೆಸ್ಲೆ, ಪ್ರಧಾನ ಕಾರ್ಯದರ್ಶಿ ಪ್ರವಿಣ್​ಕುಮಾರ್​, ಸದಸ್ಯರಾದ ಚಂದ್ರಕುಮಾರ್​, ಬಿಬಿಆರ್​ಎಂ ಮೆಡಿಕಲ್​ ಏಜೆನ್ಸಿಸ್​ ಮಾಲೀಕ ಬಿ.ಜಗದೀಶ್​, ಕೆ.ಸಿ.ಡಿ.ಅಧ್ಯಕ್ಷ ಗಣೇಶ್​, ಆಶಾ, ವಿಜಯಕೃಷ್ಣ, ಭೀಮರಾಜ್​, ಸತ್ಯ, ಪ್ರವಿಣ್​ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts