More

    ನೊಂದವರಿಗೆ ಪ್ರಾಮಾಣಿಕ ಸ್ಪಂದನೆ

    ಸಾಗರ: ದಲಿತ ಸಂಘರ್ಷ ಸಮಿತಿ ನೊಂದವರ ಕಣ್ಣೀರು ಒರೆಸುವ ಕೆಲಸವನ್ನು ಪ್ರಾಮಾಣಿಕವಾಗಿ ಸ್ಪಂದಿಸುತ್ತಿದೆ. ಸಮಿತಿಯಲ್ಲಿ ಹಲವು ಬಣಗಳಿರಬಹುದು. ಆದರೆ ಪ್ರಾಮಾಣಿಕವಾಗಿ ಕೆಲಸ ಮಾಡುವ ಸಂಘಟನೆಯನ್ನು ಜನರು ಗಮನಿಸುತ್ತಾರೆ ಎಂದು ಸಮಿತಿ ಜಿಲ್ಲಾ ಸಂಚಾಲಕ ದುರ್ಗಾ ಭೋವಿ ಹೇಳಿದರು.
    ಬುಧವಾರ ಸಾಗರದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ(ಡಾ. ಡಿ.ಜಿ.ಸಾಗರ್ ಬಣ)ದಿಂದ ಹಮ್ಮಿಕೊಂಡಿದ್ದ ನೂತನ ಪದಾಽಕಾರಿಗಳ ಆಯ್ಕೆ ಕಾರ್ಯಕ್ರಮವನ್ನು ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
    ದಲಿತ ಸಂಘರ್ಷ ಸಮಿತಿ ಹೆಸರು ದುರ್ಬಳಕೆ ಮಾಡಿಕೊಂಡು ಹಣ ಎತ್ತುವವರ ಸಂಖ್ಯೆ ಹೆಚ್ಚುತ್ತಿದೆ. ಸಮಿತಿಯಿಂದ ಮಾಡಲು ಬಹಳಷ್ಟು ಕೆಲಸಗಳಿವೆ. ಡಾ.ಡಿ.ಜಿ. ಸಾಗರ್ ಬಣ ರಾಜ್ಯದಲ್ಲಿ ಉತ್ತಮ ಕೆಲಸ ಮಾಡಿ ಜನರ ಮನಸ್ಸಲ್ಲಿ ಉಳಿದುಕೊಂಡಿದೆ. ಸಮುದಾಯದ ನಡುವೆ ಹೋಗಿ ನೊಂದವರಿಗೆ ಸಾಮಾಜಿಕ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
    ಸಮಿತಿಯ ತಾಲೂಕು ಸಂಚಾಲಕ ನಟರಾಜ ಗೇರುಬೀಸ್ ಮಾತನಾಡಿ, ಸಮಾಜ ಸೇವೆ ಮಾಡುವವರಿಗೆ ಡಿಎಸ್‌ಎಸ್ ಉತ್ತಮ ವೇದಿಕೆ. ಸಂಚಾಲಕನಾದ ಮೇಲೆ ಸಮಿತಿಯನ್ನು ಸದೃಢಗೊಳಿಸುವ ಕೆಲಸ ಮಾಡಿದ್ದೇನೆ. ನನ್ನ ಮೇಲೆ ವಿಶ್ವಾಸ ಇರಿಸಿ ಮತ್ತೊಂದು ಅವಽಗೆ ಅವಕಾಶ ನೀಡಿದ್ದು, ಹಿರಿಯರ ನಂಬಿಕೆ ಉಳಿಸಿಕೊಳ್ಳುವುದಾಗಿ ತಿಳಿಸಿದರು.
    ಜಿಪಂ ಮಾಜಿ ಸದಸ್ಯ ಗೋಪಾಲ್, ಪ್ರಮುಖರಾದ ಗಣಪತಿ ಇರುವಕ್ಕಿ, ಮಹೇಶ್ ಆವಿನಹಳ್ಳಿ, ಅಣ್ಣಪ್ಪ ಜೆ.ಪಿ.ನಗರ, ನೂರ್ ಅಹ್ಮದ್, ದರ್ಶನ್, ಪುಟ್ಟಪ್ಪ ಇರುವಕ್ಕಿ, ಹರೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts