CSK ಕಳಪೆ ಪ್ರದರ್ಶನದ ಬಗ್ಗೆ ಧೋನಿ ಮಾತು: ಮುಂದಿನ ಆವೃತ್ತಿಯ ಕುರಿತು ಹೇಳಿದ್ದೇನು..?| MS Dhoni

MS Dhoni
Published on

MS Dhoni: ಕಳೆದ IPL ಸೀಸನ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ನೀಡಿದ ಕಳಪೆ ಪ್ರದರ್ಶನದ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ಮಾಡಬೇಕು ಎಂದು ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ತಿಳಿಸಿದ್ದಾರೆ.

ಚೆನ್ನೈನಲ್ಲಿ ಮ್ಯಾಕ್ಸ್‌ವಿಷನ್ ಐ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಧೋನಿ, ನಾವು ಐದು ಬಾರಿ ಐಪಿಎಲ್ ಚಾಂಪಿಯನ್‌ ಆಗಿದ್ದೇವೆ. ಆದರೆ, ಮುಂದಿನ ಆವೃತ್ತಿಗೆ ಹೊಸ ತಂಡವನ್ನು ಕಟ್ಟಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಸಿಎಸ್‌ಕೆ ತನ್ನ ಅತ್ಯಂತ ಕೆಟ್ಟ ಸೀಸನ್​ ಆನ್ನು ಎದುರಿಸಿತು. ಕಳೆದ ಐಪಿಎಲ್​ನಲ್ಲಿ ಆಡಿದ 14 ಪಂದ್ಯಗಳಲ್ಲಿ ಕೇವಲ ನಾಲ್ಕು ಗೆಲುವುಗಳೊಂದಿಗೆ ಟೇಬಲ್‌ನಲ್ಲಿ ಕೊನೆಯ ಸ್ಥಾನದಲ್ಲಿ ಉಳಿದುಕೊಂಡಿತು. ನಾಯಕ ರುತುರಾಜ್ ಗಾಯಕ್ವಾಡ್ ಗಾಯದಿಂದಾಗಿ ತಂಡದಿಂದ ಹೊರಗುಳಿದ ಕಾರಣ, ಫಿಟ್‌ನೆಸ್ ಸಮಸ್ಯೆಯಿಂದ ಬಳಲುತ್ತಿದ್ದ ಧೋನಿಯೇ ನಾಯಕನಾಗಿ ತಂಡದ ಜವಾಬ್ದಾರಿಯನ್ನು ಹೊರಬೇಕಾಯಿತು.

CSK ಕಳಪೆ ಪ್ರದರ್ಶನದ ಬಗ್ಗೆ ಧೋನಿ ಮಾತು

ಕಳೆದ ಆವೃತ್ತಿಯ ಬಗ್ಗೆ ಮಾತನಾಡಿದ ಧೋನಿ, "ನಾವು ಪರಿಹಾರ ಕಂಡುಕೊಳ್ಳಬೇಕಾದ ಕೆಲವು ಸಮಸ್ಯೆಗಳಿವೆ. ನಮ್ಮ ಬ್ಯಾಟಿಂಗ್ ಕ್ರಮಾಂಕ ಈಗ ಸಾಕಷ್ಟು ಸರಿಹೋಗಿದೆ ಎಂದು ನಾನು ಭಾವಿಸುತ್ತೇನೆ. ರುತುರಾಜ್​ ಮತ್ತೆ ಬರಲಿದ್ದಾರೆ. ಡಿಸೆಂಬರ್‌ನಲ್ಲಿ ನಡೆಯುವ ಮಿನಿ ಐಪಿಎಲ್​ ಹರಾಜಿನಲ್ಲಿ ಉತ್ತಮ ಆಟಗಾರರನ್ನು ಅಯ್ಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು. ಅಲ್ಲದೆ, ಯಾವುದೇ ತಂಡ ಕಳಪೆ ಪ್ರದರ್ಶನ ನೀಡಿದರೆ, ಆಟಗಾರನ ವೈಯಕ್ತಿಕ ಮೈಲಿಗಲ್ಲುಗಳು ಅರ್ಥಹೀನವಾಗುತ್ತದೆ ಎಂದು ಧೋನಿ ಆಭಿಪ್ರಾಯಪಟ್ಟಿದ್ದಾರೆ.

ಕ್ರೀಡೆಯ ಸೌಂದರ್ಯವನ್ನು ವಿವರಿಸಿದ ಎಂ.ಎಸ್.​ಡಿ

ಖ್ಯಾತಿಗಿಂತ ಸ್ಥಿರ ಪ್ರದರ್ಶನದ ಮಹತ್ವವನ್ನು ತಿಳಿಸಿದ ಧೋನಿ, ಕ್ರೀಡೆಯ ಸೌಂದರ್ಯವೆಂದರೆ ನೀವು ಕಾಗದದ ಮೇಲೆ ಎಷ್ಟು ಚೆನ್ನಾಗಿ ಕಾಣುತ್ತೀರಿ ಎಂಬುದು ಮುಖ್ಯವಲ್ಲ. ನೀವು ದೀರ್ಘಕಾಲದವರೆಗೆ ಸ್ಥಿರವಾಗಿ ಏನು ಮಾಡುತ್ತೀರಿ ಎಂಬುದು ಮುಖ್ಯ. ಟೂರ್ನಿಯಲ್ಲಿ ನೀವು ನಾಕೌಟ್‌ ತಲುಪಿದ ನಂತರ ಎರಡು ಅಥವಾ ಮೂರು ದೊಡ್ಡ ಪ್ರದರ್ಶನಗಳೊಂದಿಗೆ ಟ್ರೋಫಿಯನ್ನು ಗೆದ್ದುಕೊಳ್ಳುತ್ತಿರಿ ಎಂದಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಸಿಎಸ್‌ಕೆ ನೀಡಿದ ಅಸ್ಥಿರ ಪ್ರದರ್ಶನದ ಬಗ್ಗೆ ಮಾತನಾಡಿದ ಧೋನಿ,"ಕಳೆದ ಎರಡು ವರ್ಷಗಳು ನಮಗೆ ಒಳ್ಳೆಯದಾಗಿರಲಿಲ್ಲ. ನಾವು ಅಂದುಕೊಂಡ ಗುರಿ ತಲುಪಿಲ್ಲ ಎಂದು ನೀವು ಹೇಳಬಹುದು. ಆದರೆ, ಮುಖ್ಯವಾಗಿರುವುದೆನೆಂದರೇ ಮತ್ತೆ ಕಲಿಯುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net