

Himachal Pradesh: ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿದಾಗಿ 383 ರಸ್ತೆಗಳು ಮುಚ್ಚಿಹೋಗಿದ್ದು, 747ಕ್ಕೂ ಹೆಚ್ಚು ವಿದ್ಯುತ್ ಟ್ರಾನ್ಸ್ಫಾರ್ಮರ್ಗಳು ಸೇವೆಯನ್ನು ಕಡಿತಗೊಳಿಸಿವೆ. ಅಲ್ಲದೆ, 249 ನೀರು ಸರಬರಾಜು ಯೋಜನೆಗಳು ಅಸ್ತವ್ಯಸ್ತಗೊಂಡಿವೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ತಿಳಿಸಿದೆ.
ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (SDMA) ಪ್ರಕಾರ, ಮಳೆಗಾಲ ಆರಂಭವಾದಾಗಿನಿಂದ ಸಾವಿನ ಸಂಖ್ಯೆ 173ಕ್ಕೆ ಏರಿದೆ. ಈ ಪೈಕಿ 95 ಸಾವುಗಳು ಭೂಕುಸಿತ, ಹಠಾತ್ ಪ್ರವಾಹ ಮತ್ತು ಮನೆಗಳು ಕುಸಿದು ಬಿದ್ದ ಪರಿಣಾಮದಿಂದ ಸಂಭವಿಸಿದ್ದರೆ, ರಸ್ತೆ ಅಪಘಾತದಿಂದ 78 ಜನ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.
ಹಿಮಾಚಲದ ಪ್ರಮುಖ ಜಿಲ್ಲೆಗಳಾದ ಚಂಬಾ, ಕುಲ್ಲು, ಮಂಡಿ ಮತ್ತು ಉನಾಗಳಲ್ಲಿ ವ್ಯಾಪಕ ಭೂಕುಸಿತ ಸಂಭವಿಸಿದ್ದು, ಹಠಾತ್ ಪ್ರವಾಹಗಳು ಘಟಿಸಿವೆ. ಅನೇಕ ಒಳ ಮಾರ್ಗಗಳು ಪ್ರವೇಶಿಸಲಾಗದ ಕಾರಣ ದುರಸ್ತಿ ಕೆಲಸ ಮತ್ತು ರಕ್ಷಣಾ ಕಾರ್ಯಾಚರಣೆಗಳು ವಿಳಂಬವಾಗುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಮಾಚಲ ಪ್ರದೇಶದ ಪ್ರಮುಖ ಪರ್ವತ ಹೆದ್ದಾರಿಗಳಾದ NH-305, NH-505, NH-21 ಮತ್ತು NH-03 ರಸ್ತೆಗಳು ಭೂಕುಸಿತದ ಅವಶೇಷಗಳ ಅಡಿಯಲ್ಲಿ ಹೂತುಹೋಗಿವೆ. ಉನಾ ಜಿಲ್ಲೆಯಲ್ಲಿ ರಾತ್ರಿಯಿಡೀ 222 ಮಿ.ಮೀ.ಗೂ ಹೆಚ್ಚು ಮಳೆಯಾಗಿದ್ದು, ರಸ್ತೆಗಳು, ಮನೆಗಳು ಮತ್ತು ಮಾರುಕಟ್ಟೆಗಳು ಜಲಾವೃತಗೊಂಡಿವೆ. ಶಾಲೆಗಳನ್ನು ಮುಚ್ಚಲಾಗಿದ್ದು, ತುಂಬಿ ಹರಿಯುವ ನದಿಗಳಿಂದ ದೂರವಿರುವಂತೆ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ.
ಅಲ್ಲದೆ, ಹಿಮಾಚಲ ಪ್ರದೇಶದಲ್ಲಿ ಹಲವಾರು ಅಣೆಕಟ್ಟುಗಳು ಕಟ್ಟೆಚ್ಚರದಲ್ಲಿವೆ. ರಾವಿ ಜಲಾನಯನ ಪ್ರದೇಶದಲ್ಲಿರುವ ಬಜೋಲಿ ಹೋಳಿ ಮತ್ತು ಬೈರಾ ಅಣೆಕಟ್ಟುಗಳು, ಬಿಯಾಸ್ ನದಿಯ ಸೈನ್ಜ್ ಮತ್ತು ಲಾರ್ಗಿ ಬ್ಯಾರೇಜ್ಗಳು ಹೆಚ್ಚಿನ ಹೂಳು ಅಂಶದಿಂದಾಗಿ ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಉನಾ ಜಿಲ್ಲೆಯಲ್ಲಿ ರಾತ್ರಿಯಿಡೀ 222 ಮಿ.ಮೀ.ಗೂ ಹೆಚ್ಚು ಮಳೆಯಾಗಿದ್ದು, ರಸ್ತೆಗಳು, ಮನೆಗಳು ಮತ್ತು ಮಾರುಕಟ್ಟೆಗಳು ಜಲಾವೃತಗೊಂಡಿವೆ. ಶಾಲೆಗಳನ್ನು ಮುಚ್ಚಲಾಗಿದ್ದು, ತುಂಬಿ ಹರಿಯುವ ನದಿಗಳಿಂದ ದೂರವಿರುವಂತೆ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ.