ಪೃಥ್ವಿ ಷಾ-ಶಿಖರ್ ಧವನ್ ಅಬ್ಬರ; ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸಿಎಸ್‌ಕೆ ಎದುರು 7 ವಿಕೆಟ್ ಜಯ

csk and delhi capitals for web
Published on

ಮುಂಬೈ: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಮರ್ಥ ನಿರ್ವಹಣೆ ತೋರಿದ ಹಾಲಿ ರನ್ನರ್‌ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್-14ರಲ್ಲಿ ಶುಭಾರಂಭ ಕಂಡಿತು. ಯುವ ಬ್ಯಾಟ್ಸ್‌ಮನ್ ಪೃಥ್ವಿ ಷಾ (72ರನ್, 38 ಎಸೆತ, 9 ಬೌಂಡರಿ, 3 ಸಿಕ್ಸರ್) ಹಾಗೂ ಅನುಭವಿ ಶಿಖರ್ ಧವನ್ (85ರನ್, 54 ಎಸೆತ, 10 ಬೌಂಡರಿ, 2 ಸಿಕ್ಸರ್) ಜೋಡಿಯ ಸ್ಫೋಟಕ ಬ್ಯಾಟಿಂಗ್ ಫಲವಾಗಿ ಯುವ ನಾಯಕ ರಿಷಭ್ ಪಂತ್ ಸಾರಥ್ಯದ ಡೆಲ್ಲಿ ತಂಡ 3 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ರಿಷಭ್ ಪಂತ್ ಐಪಿಎಲ್‌ನಲ್ಲಿ ನಾಯಕರಾಗಿ ಆಡಿದ ಮೊದಲ ಪಂದ್ಯದಲ್ಲೇ ಭರ್ಜರಿ ಯಶ ಕಂಡರು.

ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ರಿಷಭ್ ಪಂತ್, ಸಿಎಸ್‌ಕೆ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ (54 ರನ್, 36 ಎಸೆತ, 3 ಬೌಂಡರಿ, 4 ಸಿಕ್ಸರ್) ಆಕರ್ಷಕ ಅರ್ಧಶತಕ, ಡೆತ್ ಓವರ್‌ಗಳಲ್ಲಿ ರವೀಂದ್ರ ಜಡೇಜಾ-ಸ್ಯಾಮ್ ಕರ‌್ರನ್ ಜೋಡಿಯ ಅಬ್ಬರದ ಫಲವಾಗಿ ಸಿಎಸ್‌ಕೆ ತಂಡ 7 ವಿಕೆಟ್‌ಗೆ 188 ರನ್ ಕಲೆಹಾಕಿತು. ಪ್ರತಿಯಾಗಿ ಈ ಬೃಹತ್ ಮೊತ್ತ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 18.4 ಓವರ್‌ಗಳಲ್ಲಿ 3 ವಿಕೆಟ್‌ಗೆ 190 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

ಸಿಎಸ್‌ಕೆ: 7 ವಿಕೆಟ್‌ಗೆ 188 (ಮೊಯಿನ್ ಅಲಿ 36, ಸುರೇಶ್ ರೈನಾ 54, ಅಂಬಟಿ ರಾಯುಡು 23, ರವೀಂದ್ರ ಜಡೇಜಾ 26*, ಸ್ಯಾಮ್ ಕರ‌್ರನ್ 34, ಕ್ರಿಸ್ ವೋಕ್ಸ್ 18ಕ್ಕೆ 2, ಆವೇಶ್ ಖಾನ್ 23ಕ್ಕೆ 2). ಡೆಲ್ಲಿ ಕ್ಯಾಪಿಟಲ್ಸ್ : 18.4 ಓವರ್‌ಗಳಲ್ಲಿ 3 ವಿಕೆಟ್‌ಗೆ 190 (ಪೃಥ್ವಿ ಷಾ 72, ಶಿಖರ್ ಧವನ್ 85, ರಿಷಭ್ ಪಂತ್ 15*, ಮಾರ್ಕಸ್ ಸ್ಟೋಯಿನಿಸ್ 14, ಶಾರ್ದೂಲ್ 53ಕ್ಕೆ 2, ಡ್ವೇನ್ ಬ್ರಾವೊ 28ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net