ಇವರಿಲ್ಲದೆ ಆಡೋದು ಸಿಎಸ್​ಕೆಗೆ ಬಹಳ ಕಷ್ಟವಾಗ್ತಿದೆ! ಪ್ಲೇಆಫ್​ಗೆ ಹೋದ್ರೆ​ ಬಹುಶಃ…

WhatsApp Image 2024-05-12 at 6.31.06 PM
Published on

ಚೆನ್ನೈ: ಐಪಿಎಲ್ 17ನೇ ಆವೃತ್ತಿಯಲ್ಲಿ ಮೊದಲ ಪಂದ್ಯದಿಂದ ಉತ್ತಮ ಪ್ರದರ್ಶನ ನೀಡುತ್ತ ಬಂದಿರುವ ರುತುರಾಜ್ ಗಾಯಕ್ವಾಡ್​ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇಂದು ತಮ್ಮ ತವರಿನಲ್ಲಿ ರಾಜಸ್ಥಾನ ರಾಯಲ್ಸ್​ ವಿರುದ್ಧ ಪ್ಲೇಆಫ್​ಗಾಗಿ ಸೆಣಸಾಡುತ್ತಿದೆ. ಲೀಗ್​ನಲ್ಲಿರುವ 10 ಬಲಿಷ್ಠ ತಂಡಗಳ ಪೈಕಿ ಅತ್ಯುತ್ತಮ ಆಟಗಾರರನ್ನು ಹೊಂದಿರುವ ಸಿಎಸ್​ಕೆ ಟೀಮ್​ ಕುರಿತು ಇದೀಗ ನ್ಯೂಜಿಲೆಂಡ್​ನ ಮಾಜಿ ಕ್ರಿಕೆಟಿಗರೊಬ್ಬರು ನೀಡಿದ ಹೇಳಿಕೆ ಸದ್ಯ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ.

ಕಳೆದ ಪಂದ್ಯದಲ್ಲಿ ಗುಜರಾತ್​ ಟೈಟನ್ಸ್​ ವಿರುದ್ಧ ಸಿಎಸ್​ಕೆ ಕಂಡ ಹೀನಾಯ ಸೋಲಿಗೆ ತಂಡದಲ್ಲಿದ್ದ ಸ್ಟಾರ್​ ವೇಗಿಗಳಾದ ಮತೀಶಾ ಪತಿರಾಣ ಮತ್ತು ಮೊಹಮ್ಮದ್​ ಮುಸ್ತುಫಿಜರ್​ ಅನುಪಸ್ಥಿತಿಯೇ ಮುಖ್ಯ ಕಾರಣ ಎಂದು ನ್ಯೂಜಿಲೆಂಡ್​ ಮಾಜಿ ಸ್ಟಾರ್ ಬೌಲರ್​ ಆದ ಮಿಚೆಲ್ ಮೆಕ್‌ಕ್ಲೆನಾಘನ್ ಅಭಿಪ್ರಾಯಿಸಿದ್ದಾರೆ. ಇವರಿಬ್ಬರ ಅನುಪಸ್ಥಿತಿಯನ್ನು ಸಿಎಸ್​ಕೆ ತಂಡ ಬಹಳ ಮಿಸ್​ ಮಾಡಿಕೊಳ್ಳುತ್ತಿದೆ. ಎದುರಾಳಿಗಳ ವಿರುದ್ಧ ಅತ್ಯುತ್ತಮ ಬೌಲಿಂಗ್ ಅಸ್ತ್ರವಾಗಿದ್ದ ಪತಿರಾಣ ಮತ್ತು ಮುಸ್ತುಫಿಜರ್ ಸದ್ಯ ಟೀಮ್​ನಲ್ಲಿ​ ಇಲ್ಲದೆ ಇರುವುದು ಮುಂದಿನ ಪಂದ್ಯಗಳಲ್ಲಿ ದೊಡ್ಡ ಹೊಡೆತವಾಗಬಹುದು ಎಂದು ಹೇಳಿದ್ದಾರೆ.

ಮೊದಲ ಓವರ್​ ಮೂಲಕ ಪಂದ್ಯ ಆರಂಭಿಸುತ್ತಿದ್ದ ಪತಿರಾಣ ಅವರ ಪರಿಣಾಮಕಾರಿ ಬೌಲಿಂಗ್​ ಶೀಘ್ರ ವಿಕೆಟ್​ ತಂದುಕೊಡುವಲ್ಲಿ ಸಹಾಯ ಮಾಡಿದ್ರೆ, ಮಧ್ಯೆ ಮತ್ತು ಕಡೆಯ ಓವರ್​ಗಳಲ್ಲಿ ಮುಸ್ತುಫಿಜರ್ ಹೆಚ್ಚುವರಿ​ ವಿಕೆಟ್​ಗಳನ್ನು ಕಬಳಿಸುವ ಸಾಮರ್ಥ್ಯ ಹೊಂದಿದ್ದರು. ಆದರೆ, ಈಗ ಈ ಇಬ್ಬರು ಸ್ಟಾರ್​ ವೇಗಿಗಳಿಲ್ಲದೆ ಸಿಎಸ್​ಕೆ ಮುಂದಿನ ಪಂದ್ಯಗಳನ್ನು ಸುಲಭವಾಗಿ ಗೆಲ್ಲುವುದು ಕೊಂಚ ಕಷ್ಟವಿದೆ ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net