ಕ್ರಿಕೆಟಿಗ ಮಯಾಂಕ್​ ಅಗರ್ವಾಲ್​ ಅಸ್ವಸ್ಥ; ಐಸಿಯುನಲ್ಲಿ ಚಿಕಿತ್ಸೆ

Mayank Agarwal
Published on

ನವದೆಹಲಿ: ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಅವರು ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದಾಗ ನೀರು ಕುಡಿದು ಅಸ್ವಸ್ಥಗೊಂಡಿದ್ದಾರೆ. ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.

ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ದೇಶೀ ಲೀಗ್ ರಣಜಿ ಟ್ರೋಫಿ ಸೀಸನ್​ನಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸುತ್ತಿರುವ ಮಯಾಂಕ್ ಅಗರ್ವಾಲ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಮಯಾಂಕ್ ಅವರನ್ನು ಕೂಡಲೇ ​ತ್ರಿಪುರಾದ ಅಗರ್​ಥಾಲ​ ಎಎಲ್​ಎಸ್ ಆಸ್ಪತ್ರೆಗೆ ದಾಖಲು ಮಾಡಿದ್ದು, ತೀವ್ರ ನಿಘ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

ಮಯಾಂಕ್ ಅನುರಾಗ್ ಅಗರ್ವಾಲ್ ಅವರು ೧೬ ಫೆಬ್ರವರಿ ೧೯೯೧ರಲ್ಲಿ ಜನಿಸಿದರು. ಇವರು ಕರ್ನಾಟಕದವರಾಗಿದ್ದು ಬಲಗೈ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಆಡುವ ಭಾರತದ ಅಂತಾರಾಷ್ಟ್ರೀಯ ಕ್ರಿಕೆಟಿಗ. ಅವರು ೨೬ ಡಿಸೆಂಬರ್ ೨೦೧೮ ರಂದು ಆಸ್ಟ್ರೇಲಿಯಾ ವಿರುದ್ಧ ಭಾರತದ ಪರವಾಗಿ ಅಂತಾರಾಷ್ಟ್ರೀಯ ಪಂದ್ಯಾವಳಿಗೆ ಪಾದಾರ್ಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net