ಅವರ ಬಗ್ಗೆ ಯಾಕೆ ಗುರು..ಅವ್ರ ಫ್ಯಾನ್ಸ್​ ಸರಿ ಇಲ್ಲ ಅಂದ್ರು ಸುದೀಪ್​; ಕಿಚ್ಚನ ಮಾತಿನ ಅರ್ಥವೇನು?

sudeep
Published on

ಬೆಂಗಳೂರು: ಸ್ಯಾಂಡಲ್​ವುಡ್​​ ನಟ ಕಿಚ್ಚ ಸುದೀಪ್‌ ಬಿಗ್​ಬಾಸ್​ ಕಾರ್ಯಕ್ರಮವನ್ನು ಮುಗಿಸಿ ರಿಲ್ಯಾಕ್ಸ್​​ ಮೂಡ್​​ನಲ್ಲಿದ್ದಾರೆ. ಕಿಚ್ಚ ಸೋಶಿಯಲ್ ಮೀಡಿಯಾ ಮೂಲಕವಾಗಿ ಅಭಿಮಾನಿಗಳ ಜತೆ ಮಾತನಾಡುತ್ತಾ ಕೊಂಚ ಸಮಯ ಕಳೆಯುತ್ತಿದ್ದಾರೆ. ಈ ವೇಳೆ ಕಿಚ್ಚ ಫ್ಯಾನ್ಸ್​​ ಬಗ್ಗೆ ಮಾಡಿರುವ ಕಾಮೆಂಟ್​​ ಸಖತ್​ ಚರ್ಚೆಯಲ್ಲಿದೆ.

ಕಿಚ್ಚ ಸುದೀಪ್‌ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ Ask kichcha ಸೆಷನ್ ನಡೆಸುತ್ತಿದ್ದು, ಅದರಲ್ಲಿ ಅಭಿಮಾನಿಗಳು ಹಲವಾರು ವಿಷಯಗಳನ್ನು ಕೇಳುತ್ತಿದ್ದಾರೆ. ಕಿಚ್ಚ ಸಖತ್​ ಫನ್ನಿಯಾಗಿ ತಮಗೆ ಅನ್ನಿಸಿದ್ದನ್ನು ನೇರವಾಗಿ ಉತ್ತರ ನೀಡುತ್ತಿದ್ದಾರೆ. ಈ ವೇಳೆ ಕಿಚ್ಚ ಅವರ ಫ್ಯಾನ್ಸ್​​ ಸರಿ ಇಲ್ಲವೆಂದು ಹೇಳಿದ್ದಾರೆ. ಕಿಚ್ಚ ಯಾಕೆ? ಯಾವ ಸಂದರ್ಭದಲ್ಲಿ ಹೀಗೆ ಹೇಳಿದ್ದಾರೆ ಎನ್ನುವುದು ತಿಳಿದ್ರೆ ಖಂಡಿತಾ ನೀವು ಆಶ್ಚರ್ಯವಾಗುತ್ತೀರ.

ನಟ ಕಿಚ್ಚ ಸುದೀಪ್ ಅವರು ಕೆಲವೊಮ್ಮೆ ಆಸ್ಕ್ ಕಿಚ್ಚ ಎಂದು ಟ್ವಿಟರ್ ಸೆಷನ್ ನಡೆಸುತ್ತಾರೆ. ಈ ಹ್ಯಾಶ್​​ಟ್ಯಾಗ್ ಅಡಿಯಲ್ಲಿ ಬರುವಂತಹ ಪ್ರಶ್ನೆಗಳಿಗೆ ನಟ ಕ್ವಿಕ್ ಆಗಿ ಉತ್ತರಗಳನ್ನು ಕೊಡುತ್ತಾ ಹೋಗುತ್ತಾರೆ. ಇದೀಗ ನಟ ಜನವರಿ 29ರಂದು ಆಸ್ಕ್ ಕಿಚ್ಚ ಸೆಷನ್ ಮಾಡಿದ್ದಾರೆ. ನೆಟ್ಟಿಗರೊಬ್ಬರು ಕಿಚ್ಚ ಹಾಗೂ ದರ್ಶನ್ ಅವರ ಫೋಟೋ ಪೋಸ್ಟ್ ಮಾಡಿ ದಾಸ ದರ್ಶನ್ ಬಗ್ಗೆ ಒಂದು ಮಾತು ಹೇಳಿ ಎಂದು ಕೇಳಿದ್ದಾರೆ.   ಕಿಚ್ಚ ಸುದೀಪ್ ಅವರು ನಾನು ಯಾವಾಗಲೂ ಅವರಿಗೆ ಒಳ್ಳೆಯದನ್ನೇ ಬಯಸುತ್ತೇನೆ ಎಂದು ಬರೆದಿದ್ದಾರೆ. ಈ ಒಂದು ಟ್ವೀಟ್​ ವೈರಲ್ ಆಗಿದೆ.

ಸುದೀಪ್ - ದರ್ಶನ್ ನಡುವಿನ ವೈಮನಸ್ಸು ತುಂಬಾ ಹಳೆಯದಾಗಿದೆ. ಆದರೂ ಇಬ್ಬರ ಹಳೆಯ ಫೋಟೋಸ್ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ನಿಮ್ಮನ್ನು ಮತ್ತೆ ಹೀಗೆ ಒಟ್ಟಿಗೆ ಕಾಣಬೇಕು ಎನ್ನುತ್ತಿರುತ್ತಾರೆ. ಈ ಮಧ್ಯೆ ಸುದೀಪ್​ ಅವರಿಗೆ ಮತ್ತೊಂದು ಪ್ರಶ್ನೆ ಬಂದಿದೆ. ಇದಕ್ಕೆ ಕಿಚ್ಚನ ಉತ್ತರ ಕೂಡಾ ಅಷ್ಟೇ ಸ್ಪಷ್ಟವಾಗಿರುವುದನ್ನು ನಾವು ಗಮನಿಸಬಹುದಾಗಿದೆ.

ಸಾಗರ್​ ಎನ್ನುವ ಕಿಚ್ಚನ ಅಭಿಮಾನಿಯೊಬ್ಬರು ಆಸ್ಕ್ ಕಿಚ್ಚನ ಹ್ಯಾಶ್​​ಟ್ಯಾಗ್ ಅಡಿಯಲ್ಲಿ, ಒಂದು ವರ್ಡ್​​ನಲ್ಲಿ ಕಿಚ್ಚನ ಬಗ್ಗೆ ನೀವು ಹೇಳುವುದಾದರೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಸುದೀಪ್​ ಅವರು,  ಅವರ ಬಗ್ಗೆ ಯಾಕೆ ಗುರು.. ಅವರ ಫ್ಯಾನ್ಸ್​ ಸರಿ ಇಲ್ಲ ಎಂದಿದ್ದಾರೆ. ಕಿಚ್ಚ ಟ್ವೀಟ್​ ಮಾಡುತ್ತಿದ್ದಂತೆ ಅಭಿಮಾನಿಗಳು ಕಾಮೆಂಟ್​​ ಮಾಡುತ್ತಿದ್ದಾರೆ.

ಕಿಚ್ಚನ ಫ್ಯಾನ್ಸ್​ ರಾಕ್​​, ನೀವು ನನ್ನ ಬಗ್ಗೆ ಹೇಳ್ತಾ ಇದ್ದೀರಾ?, ಕ್ರೇಜಿ ಆನ್ಸರ್​​, ಅಣ್ಣಾ...., ಬಾಸು ಸೂಪರ್​ ರಿಪ್ಲೈ, ಬೆಂಕಿ, ಇದು ಇದು ಚೆನ್ನಾಗಿರೋದು.. ನೀವು ಚೆನ್ನಾಗಿ ಹೇಳಿದ್ರಿ ಎಂದು ಅಭಿಮಾನಿಗಳು ಖುಷಿಯಿಂದ ಕಾಮೆಂಟ್​​ ಮಾಡುತ್ತಿದ್ದಾರೆ. ಈ ಸುದ್ದಿ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​​ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net