

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಶೋನ ಸ್ಪರ್ಧಿಯಾಗಿದ್ದ ರಕ್ಷಕ್ ಬುಲೆಟ್ ಮನೆಯಿಂದ ಹೊರ ಬಂದ್ಮೇಲೆ ರಕ್ಷಕ್ ಸಂದರ್ಶನವೊಂದರಲ್ಲಿ ಸುದೀಪ್ ಬಗ್ಗೆ ಮಾತನಾಡಿ, ಟ್ರೋಲ್ ಕೂಡ ಆಗಿದ್ದರು. ಇದ್ಯಾವುದರ ಕುರಿತಾಗಿಯೂ ತಲೆ ಕೆಡಿಸಿಕೊಳ್ಳದ ಕಿಚ್ಚ ರಕ್ಷಕ್ ಬುಲೆಟ್ ಅವರ ಕುರಿತಾಗಿ ಪ್ರೀತಿ ತೊರಿದ್ದಾರೆ.
ರಕ್ಷಕ್ ಬುಲೆಟ್ ಮನಸ್ಸಿಗೆ ಏನು ಬರ್ತದೋ ಅದನ್ನ ಮಖದ ಮೇಲೆ ಹೇಳೋದು ಇದೆ. ಕೆಲವೊಮ್ಮೆ ಅದು ಟ್ರೋಲ್‌ಗೂ ಕಾರಣ ಆಗುತ್ತದೆ. ಆದರೆ ಕಿಚ್ಚ ಸುದೀಪ್ ಬಗ್ಗೆ ಮಾತನಾಡಿದ್ದರು. ಕಿಚ್ಚ ಫ್ಯಾನ್ಸ್ ರಕ್ಷಕ್ ವಿರುದ್ಧವಾಗಿ ಕಿಡಿಕಾರಿದ್ದರು. ಸುದೀಪ್ ಮತ್ತು ಬುಲೆಟ್ ಒಳ್ಳೆ ಸ್ನೇಹಿತರೇ ಆಗಿದ್ದರು. ತಮ್ಮ ಸ್ನೇಹದ ಕುರಿತು ಸುದೀಪ್ ಬಿಗ್ ಬಾಸ್ ಫಿನಾಲೆ ಆದ್ಮೇಲೆ ರಕ್ಷಕ್ ಬುಲೆಟ್ ಮುಂದೆ ಹೇಳಿಕೊಂಡಿದ್ದಾರೆ. ಕೊನೆಗೆ ಸಾರಿ ಕೇಳಿದ ರಕ್ಷಕ್ ಬುಲೆಟ್‌ಗೆ ಸ್ವತಃ ಸುದೀಪ್ ಒಂದಷ್ಟು ಸಲಹೆ-ಸೂಚನೆ ಕೊಟ್ಟಿದ್ದಾರೆ.
ರಕ್ಷಕ್ ಕರೆಸಿ ಒಂದು ಸ್ಪೆಷಲ್ ಬೆಲೆ ಬಾಳೋ ಬ್ಲ್ಯೂಬೆರಿ ಕನ್ನಡಕವನ್ನ ಗಿಫ್ಟ್ ಕೊಟ್ಟಿದ್ದಾರೆ. ಈ ವಿಶೇಷ ಗಿಫ್ಟ್ ಅನ್ನ ರಕ್ಷಕ್ ಬುಲೆಟ್ ತುಂಬಾನೇ ಪ್ರೀತಿಯಿಂದ ಸ್ವೀಕರಿಸಿ ಕನ್ನಡಕದ ಫೋಟೋವನ್ನ ತಮ್ಮ ಸ್ಟೇಟಸ್ನಲ್ಲಿ ಹಂಚಿಕೊಂಡಿದ್ದಾರೆ.
ರಕ್ಷಕ್ ಇನ್ಮುಂದೆ ಸಿನಿಮಾರಂಗದಲ್ಲಿ ಹೇಗೆಲ್ಲ ಇರಬೇಕು ಅನ್ನೋ ಸಲಗೆಗಳನ್ನೂ ಕೊಟ್ಟಿದ್ದಾರೆ. ಹಾಗೆ ಸುಮಾರು ಹೊತ್ತು ಸಮಯ ಕಳೆದ ರಕ್ಷಕ್ ಬುಲೆಟ್, ತಮ್ಮ ಈ ಅನುಭವವನ್ನ ತಮ್ಮ ಸ್ಟೇಟಸ್‌ನಲ್ಲೂ ಶೇರ್ ಮಾಡಿಕೊಂಡಿದ್ದಾರೆ. ಕೊನೆಗೆ ಸುದೀಪ್ ಬೆಲೆ ಕಟ್ಟಲಾಗದ ಒಂದು ಗಿಫ್ಟ್ ಕೊಟ್ಟಿರೋ ವಿಚಾರವನ್ನು ಫೋಟೋ ಸಮೇತ ಹೇಳಿಕೊಂಡಿದ್ದಾರೆ.