ಮೈದಾನಕ್ಕೆ ಇಳಿದ್ರೆ ಬೌಲರ್‌ಗಳಿಗೆ ಸಿಂಹಸ್ವಪ್ನ ಹೊರಗೆ ಮಾತ್ರ...ವಂಡರ್​ ಕಿಡ್​ ವೈಭವ್ ಬಗ್ಗೆ ಅಯ್ಯರ್ ಅಚ್ಚರಿ ಹೇಳಿಕೆ! Vaibhav Suryavanshi

ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟಿ20 ಸರಣಿಗೂ ಮುನ್ನ ಮಾತನಾಡಿದ ಶ್ರೇಯಸ್ ಅಯ್ಯರ್, ವೈಭವ್ ಸೂರ್ಯವಂಶಿಯೊಂದಿಗೆ ಕ್ರಿಕೆಟ್ ಹೊರತಾದ ವಿಚಾರಗಳ ಬಗ್ಗೆಯೂ ತಾನು ಮಾತನಾಡುವುದಾಗಿ ಹೇಳಿದ್ದಾರೆ.
 Vaibhav Suryavanshi
ಟೀಮ್​ ಇಂಡಿಯಾದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಹಾಗೂ ಭಾರತದ ಟಿ20 ತಂಡದ ನಾಯಕ ಶ್ರೇಯಸ್ ಅಯ್ಯರ್
Published on: 

ನವದೆಹಲಿ: ಟೀಮ್​ ಇಂಡಿಯಾದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ( Vaibhav Suryavanshi ) ಇದೀಗ ವಿಶ್ವ ಕ್ರಿಕೆಟ್​ನಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವ ಆಟಗಾರ. ಈಗಾಗಲೇ ವೈಭವ್​ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಇದೀಗ, ಭಾರತದ ಟಿ20 ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರು ವೈಭವ್​ ವ್ಯಕ್ತಿತ್ವ ಹಾಗೂ ಸಾಮರ್ಥ್ಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟಿ20 ಸರಣಿಗೂ ಮುನ್ನ ಮಾತನಾಡಿದ ಶ್ರೇಯಸ್ ಅಯ್ಯರ್, ವೈಭವ್ ಸೂರ್ಯವಂಶಿಯೊಂದಿಗೆ ಕ್ರಿಕೆಟ್ ಹೊರತಾದ ವಿಚಾರಗಳ ಬಗ್ಗೆಯೂ ತಾನು ಮಾತನಾಡುವುದಾಗಿ ಹೇಳಿದ್ದಾರೆ. ಎಲ್ಲರೂ ಸಾಮಾನ್ಯವಾಗಿ ಆತನೊಂದಿಗೆ ಕ್ರಿಕೆಟ್ ಬಗ್ಗೆಯೇ ಚರ್ಚಿಸುತ್ತಾರೆ. ಆದರೆ, ಆತನ ಕುಟುಂಬ, ಜೀವನಶೈಲಿ, ಆಸಕ್ತಿಗಳು ಮತ್ತು ಕ್ರಿಕೆಟ್ ಹೊರಗಿನ ವಿಚಾರಗಳ ಬಗ್ಗೆ ಮಾತನಾಡುವುದರಿಂದ ಆತ ಇನ್ನಷ್ಟು ಮುಕ್ತವಾಗಿ ಇರಲು ಸಾಧ್ಯವಾಗುತ್ತದೆ ಎಂದು ಅಯ್ಯರ್ ಹೇಳಿದ್ದಾರೆ.

Also Read
ಎಸ್​. ವಿಶ್ವನಾಥ್​, ಟಿ.ಟಿ.ವಿ ನಂಬೂರಿ...ಏಷ್ಯನ್ ಗೇಮ್ಸ್ ಕ್ರಿಕೆಟ್ ಸ್ಕೋರ್‌ಕಾರ್ಡ್‌ನಲ್ಲಿ ಭಾರತದ ಆಟಗಾರರ ಅಸಲಿ ಹೆಸರುಗಳು ವೈರಲ್! Team India
 Vaibhav Suryavanshi

ವೈಭವ್ ಸ್ವಭಾವತಃ ಹೆಚ್ಚು ಮಾತನಾಡದ, ಶಾಂತ ವ್ಯಕ್ತಿ. ಆದರೆ, ಮೈದಾನಕ್ಕೆ ಇಳಿದಾಗ ಅವರ ಬ್ಯಾಟಿಂಗ್ ಸಂಪೂರ್ಣ ವಿಭಿನ್ನವಾಗಿರುತ್ತದೆ. ಎದುರಾಳಿ ಬೌಲರ್‌ಗಳ ಮೇಲೆ ಆಕ್ರಮಣಕಾರಿ ಆಟವಾಡುವ ಸಾಮರ್ಥ್ಯ ಅವರಲ್ಲಿದೆ. ಇದೇ ಕಾರಣಕ್ಕೆ ಮೈದಾನದ ಹೊರಗಿನ ವೈಭವ್ ಮತ್ತು ಮೈದಾನದ ಮೇಲಿನ ವೈಭವ್ ನಡುವೆ ದೊಡ್ಡ ವ್ಯತ್ಯಾಸ ಕಾಣಿಸುತ್ತದೆ ಎಂದು ಅಯ್ಯರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ, ಇತ್ತೀಚಿನ ವರ್ಷಗಳಲ್ಲಿ ವೈಭವ್ ಸೂರ್ಯವಂಶಿ, ಕಿರಿಯ ವಯಸ್ಸಿನಲ್ಲೇ ಗಮನಾರ್ಹ ಸಾಧನೆ ಮಾಡಿದ್ದಾರೆ. ಐಪಿಎಲ್ 2025ರ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಅವರನ್ನು 1.1 ಕೋಟಿ ರೂ.ಗೆ ಖರೀದಿಸಿತ್ತು. ಬಳಿಕ ಐಪಿಎಲ್ ಮಾತ್ರವಲ್ಲದೆ ಭಾರತ ಅಂಡರ್ 19 ಹಾಗೂ ಎ ತಂಡಗಳ ಪರವೂ ವೈಭವ್​ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ತೋರಿಸಿದ್ದಾರೆ. ಕಳೆದ ಐಪಿಎಲ್​ನಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಆಟಗಾರನೆಂಬ ಹೆಗ್ಗಳಿಕೆಗೂ ವೈಭವ್ ಪಾತ್ರರಾದರು. ​

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನ ಆರಂಭಿಕ ಪಂದ್ಯಗಳಲ್ಲಿ ಇಂಗ್ಲೆಂಡ್ ವಿರುದ್ಧ 14, 13 ಮತ್ತು 15 ರನ್ ಗಳಿಸಿದ್ದ ವೈಭವ್, ನಂತರ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಸರಣಿಶ್ರೇಷ್ಠ ಪ್ರಶಸ್ತಿಯನ್ನೂ ಪಡೆದಿದ್ದರು. ಸದ್ಯ ಭಾರತ ತಂಡದಲ್ಲಿ ಅನುಭವ ಹೊಂದಿರುವ ಆರಂಭಿಕ ಆಟಗಾರರಿಗೆ ಆದ್ಯತೆ ಸಿಗುತ್ತಿರುವುದರಿಂದ ವೈಭವ್‌ಗೆ ನಿರೀಕ್ಷಿತ ಸ್ಥಾನ ಸಿಗದೇ ಇರಬಹುದು. ಆದರೆ ಇದನ್ನೇ ತಮ್ಮ ಸಾಮರ್ಥ್ಯದ ಮೇಲಿನ ನಂಬಿಕೆಯ ಕೊರತೆ ಎಂದು ಪರಿಗಣಿಸಬಾರದು ಎಂಬುದು ಶ್ರೇಯಸ್ ಅವರ ಅಭಿಪ್ರಾಯ.

Also Read
ಅದೇ ಸೀನ್​ ರಿಪೀಟ್​... ಸಾಂಬಾರಿನಲ್ಲಿ ಕರಿಬೇವು ಎಲೆಯನ್ನು ತೆಗೆದುಹಾಕಿದಂತೆ ಪಾಕ್​ ತಂಡಕ್ಕೆ ಕ್ಯಾರೆ ಎನ್ನದ ಟೀಮ್​ ಇಂಡಿಯಾ! India vs Pakistan
 Vaibhav Suryavanshi

ಏಷ್ಯನ್ ಗೇಮ್ಸ್ 2026ರಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದಲ್ಲಿ ಭಾಗವಾಗಿದ್ದ ವೈಭವ್, ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲೂ ತಂಡದೊಂದಿಗೆ ಇದ್ದರು. ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ತಂಡ ಫೈನಲ್‌ನಲ್ಲಿ ಪಾಕಿಸ್ತಾನವನ್ನು 19 ರನ್‌ಗಳಿಂದ ಮಣಿಸಿ ಸತತವಾಗಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಮುಂದಿನ ದಿನಗಳಲ್ಲಿ ವೈಭವ್‌ಗೆ ತಂಡದಲ್ಲಿ ಹೆಚ್ಚಿನ ಅವಕಾಶ ಸಿಕ್ಕರೆ ಭಾರತೀಯ ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸುವ ಸಾಮರ್ಥ್ಯ ಅವರಲ್ಲಿದೆ ಎಂದು ಅಯ್ಯರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈಗ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯತ್ತ ಎಲ್ಲರ ಗಮನ ನೆಟ್ಟಿದ್ದು, ಈ ಸರಣಿಯಲ್ಲಿ ಯುವ ಆಟಗಾರನಿಗೆ ಅವಕಾಶ ಸಿಗುತ್ತದೆಯೇ ಎಂಬ ಕುತೂಹಲವೂ ಹೆಚ್ಚಾಗಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net