ಮೈದಾನದಲ್ಲಿ MI vs KKR ಫೈಟ್: ಗ್ಯಾಲರಿಯಲ್ಲಿ ಕೆಕೆಆರ್ ಹುಡುಗಿಗೆ ಮುಂಬೈ ಹುಡುಗನ ಪ್ರಪೋಸ್​; ವಿಡಿಯೋ ವೈರಲ್​! MI Boy proposes KKR Girl

ಕೆಕೆಆರ್ ತಂಡದ ಅಭಿಮಾನಿ ಹುಡುಗಿಗೆ ಪ್ರಪೋಸ್ ಮಾಡಿದ ಮುಂಬೈ ಇಂಡಿಯನ್ಸ್ ಹುಡುಗ
ಕೆಕೆಆರ್ ತಂಡದ ಅಭಿಮಾನಿ ಹುಡುಗಿಗೆ ಪ್ರಪೋಸ್ ಮಾಡಿದ ಮುಂಬೈ ಇಂಡಿಯನ್ಸ್ ಹುಡುಗ
Published on

ಪ್ರಮುಖ ಮುಖ್ಯಾಂಶಗಳು

  • ವಾಂಖಡೆಯಲ್ಲಿ ನಡೆದ MI vs KKR ಪಂದ್ಯ
  • ಕೆಕೆಆರ್ ತಂಡದ ಅಭಿಮಾನಿ ಹುಡುಗಿಗೆ ಪ್ರಪೋಸ್ ಮಾಡಿದ ಮುಂಬೈ ಇಂಡಿಯನ್ಸ್ ಹುಡುಗ
  • ರೋಮ್ಯಾಂಟಿಕ್ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್
ಮುಂಬೈ: ಮಾರ್ಚ್​ 28 ರಿಂದ ಭಾರತದ ಕ್ರಿಕೆಟ್​ ಉತ್ಸವವಾದ ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ಆರಂಭವಾಗಿದ್ದು, ಜನರು ಈ ಕ್ರಿಕೆಟ್​ ಹಬ್ಬವನ್ನು ಆನಂದಿಸುತ್ತಿದ್ದಾರೆ.
ನಿನ್ನೆ (ಮಾರ್ಚ್​ 29) ಭಾನುವಾರ ಮುಂಬೈನ ವಾಂಖಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್​ ಮತ್ತು ಕಲ್ಕತ್ತಾ ನೈಟ್ ರೈಡರ್ಸ್​ ತಂಡಗಳ ನಡುವಿನ ಪಂದ್ಯದಲ್ಲಿ ನಡೆದ ಘಟನೆವೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗುತ್ತಿದೆ.

ಕೆಕೆಆರ್​ ಹುಡುಗಿಗೆ ಎಮ್​ಐ ಹುಡುಗನ ಪ್ರಪೋಸ್​!

ಮೈದಾನದಲ್ಲಿ ಒಂದೆಡೆ ಹಾರ್ದಿಕ್​ ಪಾಂಡ್ಯಾ ನೇತೃತ್ವದ ಮುಂಬೈ ಇಂಡಿಯನ್ಸ್​ ತಂಡ ಅಂಜಿಹ್ಯಾ ರಹಾನೆ ಮುಂದಾಳತ್ವದ ಕಲ್ಕತ್ತಾ ನೈಟ್ ರೈಡರ್ಸ್​ ತಂಡವನ್ನು ಎದುರಿಸುತ್ತಿದ್ದರೆ, ಮ್ಯಾಚ್​ ನೋಡಲು ಬಂದಿದ್ದ ಹುಡುಗನೊಬ್ಬ (MI Boy proposes KKR Girl) ಕ್ಯಾಚ್​ ಹಾಕಿಕೊಳ್ಳುವಲ್ಲಿ ಬ್ಯುಸಿ ಆಗಿದ್ದ.
ಪಂದ್ಯ ನಡೆಯುತ್ತಿದ್ದಾಗ, ಎದ್ದುನಿಂತ ಮುಂಬೈ ತಂಡದ ಜರ್ಸಿ ಧರಿಸಿದ್ದ ಹುಡುಗ ಆತನ ಪಕ್ಕದಲ್ಲಿ ಕುಳಿತಿದ್ದ ಕೆಕೆಆರ್ ಹುಡುಗಿಗೆ ಪ್ರಪೋಸ್ ಮಾಡಿದ್ದಾನೆ.

ಉಂಗುರ ಬಿದ್ದರೂ ಪ್ರೀತಿ ಗೆದ್ದಿತು

ಹುಡುಗಿಯ ಮುಂದೆ ಮಂಡಿಯೂರಿದ ಹುಡುಗ ತಾನು ತಂದಿರುವ ಉಂಗುರವನ್ನು ಆಕೆಯ ಕೈ ಬೆರಳಿಗೆ ತೊಡಿಸುವಾಗ ಉಂಗುರವನ್ನು ಬೀಳಿಸಿಕೊಂಡ ಘಟನೆ ಸಹ ನಡೆಯಿತು.
ಕೆಲಕಾಲ ಅಲ್ಲಿ-ಇಲ್ಲಿ ಹುಡುಕಿದ ಬಳಿಕ ಆಕೆಗೆ ಉಂಗುರವನ್ನು ತೊಡಿಸಿ ಇಬ್ಬರು ಪರಸ್ಪರರನ್ನು ತಬ್ಬಿಕೊಂಡಿರುವ ವಿಡಿಯೋ ಫುಲ್​ ವೈರಲ್​ ಆಗುತ್ತಿದೆ. ಈ ಪ್ರಪೋಸ್​ ವಿಡಿಯೋವನ್ನು ಖುದ್ದು ಕೆಕೆಆರ್​ ತಂಡ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಅಕೌಂಟ್​ನಲ್ಲಿ ಹಂಚಿಕೊಂಡಿದೆ.

ಪಂದ್ಯದ ಫಲಿತಾಂಶ

ಇಂಡಿಯನ್ ಪ್ರೀಮಿಯರ್ ಲೀಗ್​ನ (IPL) ಆರಂಭಿಕ ಪಂದ್ಯಗಳಲ್ಲಿ ಸತತ 13 ವರ್ಷಗಳಿಂದ ಸೋತಿದ್ದ ಮುಂಬೈ ಇಂಡಿಯನ್ಸ್​ ತಂಡವು, ಭಾನುವಾರ(ಮಾ. 29) ಕೆಕೆಆರ್ ವಿರುದ್ಧ ರೋಹಿತ್ ಶರ್ಮಾ ಅವರ ಭರ್ಜರಿ ಬ್ಯಾಟಿಂಗ್ ಮತ್ತು ಆರು ವಿಕೆಟ್​ಗಳಿಂದ ಭರ್ಜರಿ ಗೆಲುವು ಸಾಧಿಸುವ ಮೂಲಕ ತಮ್ಮ ಮೊದಲ ಪಂದ್ಯದ ಸೋಲಿಗೆ ಬ್ರೇಕ್​ ಹಾಕಿದೆ.
ಆರಂಭಿಕ ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ ಅಜಿಂಕ್ಯ ರಹಾನೆ (67) ಮತ್ತು ಅಂಗ್‌ಕ್ರಿಶ್ ರಘುವಂಶಿ (51) ಅವರ ಅರ್ಧಶತಕಗಳ ನೆರವಿನಿಂದ ಕೆಕೆಆರ್ ತಂಡ 220/4 ಮೊತ್ತವನ್ನು ಕಲೆಹಾಕಿತ್ತು. ಸೆಕೆಂಡ್ ಬ್ಯಾಟಿಂಗ್ ಮೂಲಕ ರೋಹಿತ್ ಶರ್ಮಾ(78) ಮತ್ತು ರಯಾನ್ ರಿಕಲ್ಟನ್(81) ಅವರೊಂದಿಗೆ 148 ರನ್‌ಗಳ ಜೊತೆಯಾಟದಿಂದ ಮುಂಬೈ ಇಂಡಿಯನ್ಸ್ 19.2 ಓವರ್‌ಗಳಲ್ಲಿ 224/4 ಗಳಿಸಿ ಭರ್ಜರಿ ಗೆಲುವು ಸಾಧಿಸಿತು,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net