ಪ್ರೇಮ ಪಾಶದಲ್ಲಿ ಮಲೈಕಾ? ಉದ್ಯಮಿ ಹರ್ಷ್ ಮೆಹ್ತಾ ಕೈ ಹಿಡಿದು ದೇವಸ್ಥಾನಕ್ಕೆ ಬಂದ ನಟಿ; ವಿಡಿಯೋ ವೈರಲ್! Malaika Arora with Harsh Mehta
ಮಲೈಕಾ ಅರೋರಾ ಮತ್ತು ಹರ್ಷ್ ಮೆಹ್ತಾ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮಲೈಕಾ ಅರೋರಾ ಡೇಟಿಂಗ್ ವದಂತಿ
ಮಲೈಕಾ ಅರೋರಾ ಹರ್ಷ್ ಮೆಹ್ತಾ ಜೊತೆ ಜೈನ ಮಂದಿರಕ್ಕೆ ಬಂದ ಜೋಡಿ
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್
ರಾಜಸ್ಥಾನ: ಬಾಲಿವುಡ್ನಲ್ಲಿ ತನ್ನ ದೇಹ ಸೌದರ್ಯ ಮತ್ತು ಡೇಟಿಂಗ್ ಮೂಲಕ ಸದಾ ಸುದ್ದಿಯಲ್ಲಿರುವ ನಟಿ ಎಂದರೆ ಅದು ಮಲೈಕಾ ಅರೋರಾ ಆಗಿದ್ದಾರೆ. ವಯಸ್ಸು ಐವತ್ತು ದಾಟಿದರೂ ಸಹ ಯುವಕರ ಮತ್ತೇರಿಸುವಂತಹ ಮೈಮಾಟದ ಮೂಲಕ ಈಗಲೂ ಬಾಲಿವುಡ್ನಲ್ಲಿ ಗಟ್ಟಿಯಾಗಿ ನಿಂತಿರುವ ಮಲೈಕಾಗೆ ಎದೆ ಎತ್ತರಕ್ಕೆ ಬೆಳೆದ ಒಬ್ಬ ಮಗ ಸಹ ಇದ್ದಾನೆ.
ಅರ್ಬಾಜ್ ಖಾನ್ನಿಂದ ವಿಚ್ಛೇದನ ಪಡೆದ ನಂತರ ಮಲೈಕಾ ಸ್ವಲ್ಪ ಕಾಲ ನಟ ಅರ್ಜುನ್ ಕಪೂರ್ ಜೊತೆಗೆ ಸಂಬಂಧ ಹೊಂದಿದ್ದರು ಎಂದು ಹೇಳಲಾಗುತ್ತಿತ್ತು. ಈಗ ಮಲೈಕಾ, ಉದ್ಯಮಿ ಹರ್ಷ್ ಮೆಹ್ತಾ (Malaika Arora with Harsh Mehta) ರನ್ನು ಡೇಟ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿರುವುದಂತು ಹೌದು.
ಹರ್ಷ್ ಜೊತೆ ಮಂದಿರಕ್ಕೆ ಬೇಟಿ ಕೊಟ್ಟ ಮಲೈಕಾ!
ಈ ಡೇಟಿಂಗ್ ವದಂತಿಗಳಿಗೆ ಪುಷ್ಠಿ ನೀಡುವಂತೆ ಮಲೈಕಾ ಅರೋರಾ ಇತ್ತೀಚೆಗೆ ಹರ್ಷ್ ಮೆಹ್ತಾ ಜೊತೆಗೆ ರಾಜಸ್ಥಾನದ ಆದಿನಾಥ ಜೈನ್ ದೇವಸ್ಥಾನ ಹೋಗಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ವೈರಲ್ ವಿಡಿಯೋನಲ್ಲಿ ಮಲೈಕಾ ಬಿಳಿ ಬಣ್ಣದ ಕುರ್ತಾ ಧರಿಸಿದ್ದು, ಹರ್ಷ್ ಅವರ ಕೈಗಳನ್ನು ಹಿಡಿದು ಕಾರಿನಿಂದ ಇಳಿದು, ದೇವಸ್ಥಾನಕ್ಕೆ ಹೋಗುತ್ತಿರುವುದನ್ನು ನೋಡಬಹುದಾಗಿದೆ.
ನನಗೆ ಈ ಡೇಟಿಂಗ್ ಎಂದರೆ ಅಲರ್ಜಿ
ಇತ್ತೀಚೆಗೆ ಯೂಟ್ಯೂಬ್ ಚಾನೆಲ್ವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಮಲೈಕಾ ಅರೋರಾ, ನನಗೆ ಈ ಡೇಟಿಂಗ್ ಎಂದರೆ ಅಲರ್ಜಿ ಮತ್ತು ನನಗೆ ಇದರಲ್ಲಿ ಯಾವುದೇ ಆಸಕ್ತಿಯಿಲ್ಲ. ನನ್ನ ಬಗ್ಗೆ ಕೇಳಿಬರುವ ವದಂತಿಗಳಿಗೆ ನಾನು ಮತ್ತು ನನ್ನ ಮಗ ಅರ್ಹಾನ್ ತಮಾಷೆ ಮಾಡಿಕೊಳ್ಳತ್ತೇವೆ ಎಂದು ಹೇಳಿದ್ದರು.
ಮಲೈಕಾ ಅರೋರಾ ಬಗ್ಗೆ
ಮಲೈಕಾ ಅರೋರಾ ಬಾಲಿವುಡ್ ಚಿತ್ರರಂಗದ ಅತ್ಯಂತ ಜನಪ್ರಿಯ ನಟಿ, ಡ್ಯಾನ್ಸರ್ ಮತ್ತು ಮಾಡೆಲ್ ಆಗಿದ್ದಾರೆ. ಅಕ್ಟೋಬರ್ 23, 1973 ರಂದು ಮಹಾರಾಷ್ಟ್ರದ ಥಾಣೆಯಲ್ಲಿ ಜನಿಸಿದ ಇವರು, ತಮ್ಮ ವಿಶಿಷ್ಟ ನೃತ್ಯ ಶೈಲಿ ಮತ್ತು ಫ್ಯಾಶನ್ ಸೆನ್ಸ್‌ನಿಂದಾಗಿ ಬಾಲಿವುಡ್‌ನ ಫಿಟ್‌ನೆಸ್ ಐಕಾನ್ ಎಂದೇ ಗುರುತಿಸಿಕೊಂಡಿದ್ದಾರೆ.
ದಿಲ್ ಸೇ ಚಿತ್ರದ "ಚೈಯಾ ಚೈಯಾ" ಮತ್ತು 'ದಬಾಂಗ್' ಚಿತ್ರದ ಮುನ್ನಿ ಬದ್ನಾಮ್ ಹುಯಿ ಹಾಡುಗಳಲ್ಲಿನ ಇವರ ನೃತ್ಯ ಇಂದಿಗೂ ಸಾರ್ವಕಾಲಿಕ ಹಿಟ್ ಎನಿಸಿಕೊಂಡಿದೆ. ಕೇವಲ ನಟಿಯಾಗಿ ಮಾತ್ರವಲ್ಲದೆ, ಇಂಡಿಯಾಸ್ ಗಾಟ್ ಟ್ಯಾಲೆಂಟ್ ಮತ್ತು ಝಲಕ್ ದಿಖ್ಲಾ ಜಾ ಅಂತಹ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕೆಲಸ ಮಾಡುವ ಮೂಲಕ ಕಿರುತೆರೆಯಲ್ಲೂ ಹೆಸರು ಮಾಡಿದ್ದಾರೆ.
ವೈಯಕ್ತಿಕ ಜೀವನದ ವಿಷಯಕ್ಕೆ ಬಂದರೆ, ಮಲೈಕಾ ಅವರು 1998 ರಲ್ಲಿ ನಟ ಅರ್ಬಾಜ್ ಖಾನ್ ಅವರನ್ನು ವಿವಾಹವಾಗಿದ್ದರು ಮತ್ತು ಈ ದಂಪತಿಗೆ ಅರ್ಹಾನ್ ಖಾನ್ ಎಂಬ ಮಗನಿದ್ದಾನೆ. ಸುಮಾರು 19 ವರ್ಷಗಳ ದಾಂಪತ್ಯದ ನಂತರ 2017 ರಲ್ಲಿ ವಿಚ್ಛೇದನ ಪಡೆದಿದ್ದಾರೆ.
ಪ್ರಸ್ತುತ ಯೋಗ, ಫಿಟ್‌ನೆಸ್ ಮತ್ತು ತಮ್ಮದೇ ಆದ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಮಲೈಕಾ, ವಯಸ್ಸಾದರೂ ತಮ್ಮ ಸೌಂದರ್ಯ ಮತ್ತು ದೈಹಿಕ ಶಕ್ತಿಯನ್ನು ಕಾಪಾಡಿಕೊಂಡಿರುವ ರೀತಿಗೆ ಕೋಟ್ಯಂತರ ಅಭಿಮಾನಿಗಳಿಗೆ ಸ್ಫೂರ್ತಿಯಾಗಿದ್ದಾರೆ,(ಏಜನ್ಸೀಸ್).