ಪಂಜಾಬ್​ ಪಾಲಾದ ಹಾರ್ದಿಕ್​ ಪಾಂಡ್ಯ: ಈ ನಾಲ್ವರಲ್ಲಿ ಮುಂಬೈ ಇಂಡಿಯನ್ಸ್​ ತಂಡದ ಮುಂದಿನ ಸಾರಥಿ ಯಾರು? Mumbai Indians

ಹಾರ್ದಿಕ್ ನಿರ್ಗಮನದ ಬೆನ್ನಲ್ಲೇ, ಮುಂಬೈ ಇಂಡಿಯನ್ಸ್‌ಗೆ ಸಾಲು ಸಾಲು ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ಯಶಸ್ವಿ ನಾಯಕ ರೋಹಿತ್ ಶರ್ಮಾ ಮತ್ತೆ ನಾಯಕತ್ವದ ಚುಕ್ಕಾಣಿ ಹಿಡಿಯಲಿದ್ದಾರೆಯೇ ಎಂಬುದು ಸದ್ಯ ಕೋಟ್ಯಂತರ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
Mumbai Indians
ಕ್ರಿಕೆಟಿಗರಾದ ರೋಹಿತ್​ ಶರ್ಮಾ ಮತ್ತು ಹಾರ್ದಿಕ್​ ಪಾಂಡ್ಯ
Published on: 

ಮುಂಬೈ: ಐಪಿಎಲ್ 2027ರ ಆವೃತ್ತಿಗೂ ಮುನ್ನವೇ ಮುಂಬೈ ಇಂಡಿಯನ್ಸ್ ( Mumbai Indians ) ತಂಡದಲ್ಲಿ ಭಾರಿ ಬದಲಾವಣೆ ಆಗಿದೆ. ಕಳೆದ ಸೀಸನ್​ನಲ್ಲಿ ತಂಡವನ್ನು ಮುನ್ನಡೆಸಿದ್ದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಪಂಜಾಬ್ ಕಿಂಗ್ಸ್ ತಂಡ ಸೇರ್ಪಡೆಯಾಗುತ್ತಿದ್ದಂತೆ, ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪಡೆಗೆ ಮುಂದಿನ ನಾಯಕ ಯಾರು ಎಂಬ ಚರ್ಚೆ ಕ್ರಿಕೆಟ್ ವಲಯದಲ್ಲಿ ಕಾವು ಪಡೆದುಕೊಂಡಿದೆ. 18 ಕೋಟಿ ರೂಪಾಯಿಗಳ ಬೃಹತ್ ಟ್ರೇಡ್​ ಒಪ್ಪಂದದ (Trade) ಮೂಲಕ ಹಾರ್ದಿಕ್ ಬದಲಿಗೆ ಭಾರತದ ಸ್ಟಾರ್ ವೇಗಿ ಅರ್ಷದೀಪ್ ಸಿಂಗ್ ಮುಂಬೈ ಬಳಗಕ್ಕೆ ಕಾಲಿಟ್ಟಿದ್ದು, ಇದೀಗ ತಂಡದ ನಾಯಕತ್ವದ ರೇಸ್‌ನಲ್ಲಿ ಪ್ರಮುಖ ನಾಲ್ಕು ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರುತ್ತಿವೆ.

ಹಾರ್ದಿಕ್ ನಿರ್ಗಮನದ ಬೆನ್ನಲ್ಲೇ, ಮುಂಬೈ ಇಂಡಿಯನ್ಸ್‌ಗೆ ಸಾಲು ಸಾಲು ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ಯಶಸ್ವಿ ನಾಯಕ ರೋಹಿತ್ ಶರ್ಮಾ ಮತ್ತೆ ನಾಯಕತ್ವದ ಚುಕ್ಕಾಣಿ ಹಿಡಿಯಲಿದ್ದಾರೆಯೇ ಎಂಬುದು ಸದ್ಯ ಕೋಟ್ಯಂತರ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ರೋಹಿತ್ ಜತೆಗೆ ಸೂರ್ಯಕುಮಾರ್ ಯಾದವ್, ಜಸ್‌ಪ್ರೀತ್ ಬುಮ್ರಾ ಮತ್ತು ಉದಯೋನ್ಮುಖ ಯುವ ಬ್ಯಾಟರ್ ತಿಲಕ್ ವರ್ಮಾ ಅವರ ಹೆಸರುಗಳನ್ನು ಸಹ ನಾಯಕತ್ವದ ರೇಸ್‌ಗೆ ಪರಿಗಣಿಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

Also Read
ನೀನು ಸಿಕ್ಕಿರುವುದೇ ನನ್ನ ಪುಣ್ಯ...ಟೀಮ್​ ಇಂಡಿಯಾ ಆಟಗಾರನ ಲವ್​ ಪ್ರಪೋಸ್​ಗೆ ಅಸ್ತು ಎಂದ ಬಾಲಿವುಡ್​ ಬ್ಯೂಟಿ! Samreen Kaur
Mumbai Indians

ಆದಾಗ್ಯೂ, ಹೊಸ ನಾಯಕನ ಆಯ್ಕೆಯ ವಿಷಯದಲ್ಲಿ ಯಾವುದೇ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್ ಸ್ಪಷ್ಟಪಡಿಸಿದೆ. ನಾಯಕತ್ವಕ್ಕೆ ಲಭ್ಯವಿರುವ ಎಲ್ಲ ಅರ್ಹತೆಗಳು ಹಾಗೂ ಅನುಭವಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಮತ್ತು ಸೂಕ್ತ ಸಮಯದಲ್ಲಿ ಹೊಸ ನಾಯಕ ಯಾರು ಎಂಬುದನ್ನು ಅಧಿಕೃತವಾಗಿ ಘೋಷಿಸುವುದಾಗಿ ಫ್ರಾಂಚೈಸಿ ತಿಳಿಸಿದೆ.

ಇತ್ತೀಚೆಗಷ್ಟೇ ತಂಡ ಸೇರಿದ ಅರ್ಷದೀಪ್ ಸಿಂಗ್ ಅವರ ಆಗಮನದಿಂದ ಮುಂಬೈನ ವೇಗದ ಬೌಲಿಂಗ್ ವಿಭಾಗ ಮತ್ತಷ್ಟು ಬಲಗೊಳ್ಳಲಿದೆ ಎಂಬ ಭರವಸೆಯನ್ನು ಮ್ಯಾನೇಜ್‌ಮೆಂಟ್ ವ್ಯಕ್ತಪಡಿಸಿದೆ.

ಮತ್ತೊಂದೆಡೆ, ಮುಂಬೈ ಇಂಡಿಯನ್ಸ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ನೀಡಿದ ಸುದೀರ್ಘ ಕೊಡುಗೆ ಹಾಗೂ ಸೇವೆಗೆ ಫ್ರಾಂಚೈಸಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದೆ. ಪಂಜಾಬ್ ಕಿಂಗ್ಸ್‌ ತಂಡಕ್ಕೆ ಪ್ರಯಾಣ ಬೆಳೆಸುತ್ತಿರುವ ಅವರ ಮುಂದಿನ ಕ್ರಿಕೆಟ್ ಜೀವನಕ್ಕೆ ಮುಂಬೈ ಫ್ರಾಂಚೈಸಿ ಶುಭ ಹಾರೈಸಿದೆ. ಒಟ್ಟಿನಲ್ಲಿ, ಅರ್ಷದೀಪ್ ಸೇರ್ಪಡೆಯಿಂದ ಬೌಲಿಂಗ್‌ಗೆ ಶಕ್ತಿ ಬಂದಿದ್ದರೂ, ಮುಂಬೈ ಕಿರೀಟ ಯಾರ ಹೆಗಲೇರಲಿದೆ ಎಂಬ ಕೌತುಕ ಮಾತ್ರ ಐಪಿಎಲ್ ಪ್ರಿಯರಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, (ಏಜೆನ್ಸೀಸ್​).

Also Read
ಕೊನೆಗೂ ವದಂತಿಗಳೇ ನಿಜವಾಯ್ತು! ಹಾರ್ದಿಕ್​ನ ತಂಡದಿಂದ ಕೈಬಿಟ್ಟು ಅರ್ಷದೀಪ್​ಗೆ ಮಣೆ ಹಾಕಿದ ಮುಂಬೈ ಇಂಡಿಯನ್ಸ್​​ ​| Hardik Pandya
Mumbai Indians