ಕೊನೆಗೂ ವದಂತಿಗಳೇ ನಿಜವಾಯ್ತು! ಹಾರ್ದಿಕ್​ನ ತಂಡದಿಂದ ಕೈಬಿಟ್ಟು ಅರ್ಷದೀಪ್​ಗೆ ಮಣೆ ಹಾಕಿದ ಮುಂಬೈ ಇಂಡಿಯನ್ಸ್​​ ​| Hardik Pandya

Hardik Pandya
ಕೊನೆಗೂ ವದಂತಿಗಳೇ ನಿಜವಾಯ್ತು! ಹಾರ್ದಿಕ್​ನ ತಂಡದಿಂದ ಕೈಬಿಟ್ಟು ಅರ್ಷದೀಪ್ ಮಣೆ ಹಾಕಿದ ಮುಂಬೈ ಇಂಡಿಯನ್ಸ್​​ ​
Published on: 

Hardik Pandya: ಐಪಿಎಲ್ 20ನೇ ಆವೃತ್ತಿಯ ಭಾಗವಾಗಿ ನಡೆಯಲಿರುವ ಮಿನಿ ಹರಾಜಿಗೂ ಮುನ್ನ ಒಂದು ಪ್ರಮುಖ ಬೆಳವಣಿಗೆ ನಡೆದಿದ್ದು, 19ನೇ ಆವೃತ್ತಿಯ ಐಪಿಎಲ್​ನಲ್ಲಿ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ಯುವಲ್ಲಿ ಮುಗ್ಗರಿಸಿದ್ದಲ್ಲದೇ, ಸತತ ಎರಡೂ ಸೀಸನ್​ನಲ್ಲಿಯೂ ಚಾಂಪಿಯನ್ಸ್​ ಟೀಮ್​ ಅನ್ನು ಪ್ಲೇಆಫ್​ ಸುತ್ತಿಗೂ ಮೊದಲೇ ಎಕ್ಸಿಟ್​ ಆಗುವಂತೆ ಮಾಡಿದ ಹಾರ್ದಿಕ್ ಪಾಂಡ್ಯರನ್ನು ಕೊನೆಗೂ ಮುಂಬೈ ಇಂಡಿಯನ್ಸ್ ತಂಡದಿಂದ ಹೊರಗಟ್ಟಿದೆ.

ಕಳಿಸುವ ಪ್ಲ್ಯಾನ್​ ಮೊದಲೇ ಇತ್ತು!

ಕ್ಯಾಪ್ಟನ್​ ಆಗಿ ತಂಡವನ್ನು ಸೋಲಿನ ಹಾದಿಗೆ ತಳ್ಳಿದ್ದು ಹಾರ್ದಿಕ್​ ಎಂಬ ಸಿಟ್ಟು ಮುಂಬೈ ಇಂಡಿಯನ್ಸ್​ ಒಳಗೆ ಕಾಡ್ಗಿಚ್ಚಿನಂತೆ ಹಬ್ಬಿಕೊಂಡಿತ್ತು. ಐಪಿಎಲ್​ ಮುಗಿಯುತ್ತಿದ್ದಂತೆ ಇದು ಕ್ರಿಕೆಟ್​ ಅಭಿಮಾನಿಗಳಿಗೂ ಸ್ಪಷ್ಟವಾಗಿ ಗೊತ್ತಾಗಿತ್ತು. ಮುಂದಿನ ವರ್ಷ ಖಂಡಿತ ಪಾಂಡ್ಯರನ್ನು ನಾಯಕನ ಸ್ಥಾನದಿಂದ ಮಾತ್ರವಲ್ಲ, ತಂಡದಿಂದಲೇ ಕಿತ್ತುಬಿಸಾಡಲಿದೆ ಎಂಐ ಎಂಬುದು ಬಹುತೇಕ ಮಂದಿಗೆ ಅದಾಗಲೇ ಗೊತ್ತಾಗಿತ್ತು. ಅಂದುಕೊಂಡಂತೆಯೇ ಇದೀಗ ಆ ಸೇಡನ್ನು ತೀರಿಸಿಕೊಳ್ಳುವಲ್ಲಿ ಮುಂಬೈ ಇಂಡಿಯನ್ಸ್ ಯಶಸ್ವಿಯಾಗಿದೆ.

ಐಪಿಎಲ್ 2027ರ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ಹಾರ್ದಿಕ್​ ಆಡಲಿದ್ದಾರೆ ಎಂದಿರುವ ಎಂಐ, ಅವರ ಸ್ಥಾನಕ್ಕೆ ಪಂಜಾಬ್​ ಕಿಂಗ್ಸ್​ನ ಅರ್ಷ್‌ದೀಪ್ ಸಿಂಗ್​ರನ್ನು ಟ್ರೇಡಿಂಗ್ ಮೂಲಕ ಕರೆದುಕೊಂಡಿದ್ದೇವೆ ಎಂದು ಅಧಿಕೃತ ಪೋಸ್ಟ್​ ಹಾಕಿ, ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದೆ. ಈ ಒಪ್ಪಂದದ ಭಾಗವಾಗಿ ಹಾರ್ದಿಕ್ ಪಾಂಡ್ಯ ಅವರ ಸಂಭಾವನೆಯು 16.35 ಕೋಟಿ ರೂ.ನಿಂದ 18 ಕೋಟಿ ರೂ.ಗೆ ಏರಿಕೆಯಾಗಿದೆ. ಅಲ್ಲಿಗೆ, ಪಂಜಾಬ್ ಕಿಂಗ್ಸ್​ ಫ್ರಾಂಚೈಸಿಯಿಂದ ಅವರಿಗೆ 18 ಕೋಟಿ ರೂ. ಸಂಭಾವನೆ ಸಿಗಲಿದೆ.

18 ಕೋಟಿ ರೂ. ಸಂಭಾವನೆ

ಇತ್ತ ಅರ್ಷ್‌ದೀಪ್ ಸಿಂಗ್ 18 ಕೋಟಿ ರೂ.ಗೆ ಮುಂಬೈ ತಂಡವನ್ನು ಸೇರಿಕೊಂಡಿದ್ದಾರೆ. ಒಂದು ದಿನದ ಹಿಂದೆಯೇ, ಅರ್ಷ್‌ದೀಪ್ ಅವರ ತಂದೆ ದರ್ಶನ್ ಸಿಂಗ್ ಈ ಟ್ರೇಡಿಂಗ್​ ಬಗ್ಗೆ ಮಾತನಾಡಿದ್ದರು. ಈ ಎಕ್ಸ್​ಚೆಂಚ್​ ಕುರಿತು ತಮಗೆ ಈಗಾಗಲೇ ಅಧಿಕೃತ ಮಾಹಿತಿ ಸಿಕ್ಕಿತ್ತು ಎಂದು ಬಹಿರಂಗಪಡಿಸಿದರು. ಇದೇ ವೇಳೆ, ತಮ್ಮ ಪುತ್ರ ರೋಹಿತ್​ ಶರ್ಮ, ಸೂರ್ಯಕುಮಾರ್​ ಯಾದವ್​ ಸೇರಿದಂತೆ ಇನ್ನಿತರ ಉತ್ತಮ ಆಟಗಾರರಿರುವ ತಂಡವನ್ನು ಸೇರಿಕೊಂಡಿದ್ದು ತುಂಬ ಖುಷಿಯಿದೆ ಎಂದರು.

Also Read
ತುಟಿ ದೊಡ್ಡದಾದಷ್ಟೂ ವರದಕ್ಷಿಣೆ ಹೆಚ್ಚು! ಈ ಬುಡಕಟ್ಟಿನ ಸಂಪ್ರದಾಯದ ಹಿಂದಿರುವ ವಿಚಿತ್ರ ಕಥೆ ಕೇಳಿದ್ರೆ ನಿಮ್ಮ ಹುಬ್ಬೇರುತ್ತೆ | Lip Plate Tradition
Hardik Pandya

ಮತ್ತೊಂದೆಡೆ, ಕಳೆದ 8 ವರ್ಷಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿರುವ ಅರ್ಷದೀಪ್​, 2019ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಪಂಜಾಬ್ ಪರ 96 ಪಂದ್ಯಗಳನ್ನು ಆಡಿರುವ ಅವರು, ಇಲ್ಲಿಯವರೆಗೆ 111 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪಂಜಾಬ್ ತಂಡಕ್ಕಾಗಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್ ಎಂಬ ದಾಖಲೆಯೂ ಸಿಂಗ್​ರ ಹೆಸರಿನಲ್ಲಿದೆ,(ಏಜೆನ್ಸೀಸ್).