ಕೂಪರ್​​​ ಕನೋಲಿ ಹಿಡಿದ ಅದ್ಭುತ ಕ್ಯಾಚ್​ಗೆ ತಲೆಬಾಗಿದ ಕ್ರೀಡಾಜಗತ್ತು: ಈ ವಿಡಿಯೋ ನೋಡಿದ್ರೆ ವಾವ್​​​ ಎನ್ನದೇ ಇರಲಾರರಿ! Cooper Connolly

ಪಂದ್ಯದ ಮೊದಲ ಓವರ್‌ನಲ್ಲೇ ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್‌ಮನ್ ಐಡೆನ್ ಮಾರ್ಕ್ರಾಮ್ ಅವರ ವಿಕೆಟ್ ಪಡೆಯುವಲ್ಲಿ ಕನೋಲಿ ಹಿಡಿದ ಆ ರೋಚಕ ಕ್ಯಾಚ್ ನಿರ್ಣಾಯಕ ಪಾತ್ರ ವಹಿಸಿತು.
Cooper Connolly
ಆಸ್ಟ್ರೇಲಿಯಾದ ಯುವ ಕ್ರಿಕೆಟಿಗ ಕೂಪರ್ ಕನೋಲಿ
Published on: 

ಜೊಹಾನ್ಸ್‌ಬರ್ಗ್‌ (ದಕ್ಷಿಣ ಆಫ್ರಿಕಾ): ಇಲ್ಲಿನ ವಾಂಡರರ್ಸ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ವಿಶೇಷ ಪಿಂಕ್ ಏಕದಿನ (Pink ODI) ಪಂದ್ಯದಲ್ಲಿ ಆಸ್ಟ್ರೇಲಿಯಾದ ಯುವ ಆಟಗಾರ ಕೂಪರ್ ಕನೋಲಿ (Cooper Connolly) ತಮ್ಮ ಅದ್ಭುತ ಫೀಲ್ಡಿಂಗ್​ ಮೂಲಕ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದಾರೆ.

ಪಂದ್ಯದ ಮೊದಲ ಓವರ್‌ನಲ್ಲೇ ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್‌ಮನ್ ಐಡೆನ್ ಮಾರ್ಕ್ರಾಮ್ ಅವರ ವಿಕೆಟ್ ಪಡೆಯುವಲ್ಲಿ ಕನೋಲಿ ಹಿಡಿದ ಆ ರೋಚಕ ಕ್ಯಾಚ್ ನಿರ್ಣಾಯಕ ಪಾತ್ರ ವಹಿಸಿತು. ಮಿಚೆಲ್ ಸ್ಟಾರ್ಕ್ ಅನುಪಸ್ಥಿತಿಯಲ್ಲಿ ಹೊಸ ಬಾಲಿನ ಜವಾಬ್ದಾರಿ ಹೊತ್ತಿದ್ದ ಅನುಭವಿ ವೇಗಿ ಜೋಶ್ ಹ್ಯಾಜಲ್‌ವುಡ್ ಎಸೆದ ಮೊದಲ ಓವರ್‌ನಲ್ಲೇ ಈ ಅಚ್ಚರಿಯ ಘಟನೆ ನಡೆಯಿತು.

Also Read
ಈ ದಶಕದಲ್ಲೇ ಅದ್ಭುತ ಕ್ಯಾಚ್​ ಹಿಡಿದ ಮಾರ್ಕೋ ಜಾನ್ಸೆನ್! ಬೌಂಡರಿ ಗೆರೆ ಬಳಿ ಸಾಹಸ ಮೆರೆದ ಆಲ್​ರೌಂಡರ್​, ವಿಡಿಯೋ ವೈರಲ್​...Marco Jansen
Cooper Connolly

ಇನ್ನಿಂಗ್ಸ್​ ಆರಂಭಿಸಲು ಕ್ರೀಸ್‌ಗಿಳಿದಿದ್ದ ಐಡೆನ್ ಮಾರ್ಕ್ರಾಮ್​ಗೆ ಹ್ಯಾಸಲ್‌ವುಡ್ ಆಫ್-ಸ್ಟಂಪ್ ಹೊರಭಾಗದಲ್ಲಿ ಒಂದು ಶಾರ್ಟ್ ಎಸೆತವನ್ನು ಹಾಕಿದರು. ಈ ಎಸೆತದಲ್ಲಿ ಬೌಂಡರಿಗಿಳಿಸುವ ಉದ್ದೇಶದಿಂದ ಮಾರ್ಕ್ರಾಮ್ ಬ್ಯಾಟ್ ಬೀಸಿದರಾದರೂ, ಆ ಹೊಡೆತ ಸಂಪೂರ್ಣವಾಗಿ ಉಲ್ಟಾ ಹೊಡೆಯಿತು. ಬ್ಯಾಟ್ ತಾಗಿದ ವೇಗದಲ್ಲಿ ಚೆಂಡು ನೇರವಾಗಿ ಕವರ್ ಪಾಯಿಂಟ್ ದಿಕ್ಕಿಗೆ ಸಾಗಿತು. ಅಲ್ಲಿಯೇ ಅತ್ಯಂತ ಚುರುಕಾಗಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ಕೂಪರ್ ಕನೋಲಿ, ಚೆಂಡು ತನ್ನ ಕೈಯಿಂದ ದೂರ ಸಾಗುತ್ತಿದೆ ಎಂದು ಅರಿತ ಕ್ಷಣದಲ್ಲೇ ಗಾಳಿಯಲ್ಲಿ ಅದ್ಭುತವಾಗಿ ಜಿಗಿದು, ಸಂಪೂರ್ಣ ಮೈಯನ್ನು ಚಾಚಿ ಒಂದೇ ಕೈಯಿಂದ ಆ ಅದ್ಭುತ ಕ್ಯಾಚ್ ಅನ್ನು ತಮ್ಮ ವಶಕ್ಕೆ ಪಡೆದುಕೊಂಡರು.

ಸಾಧಾರಣವಾಗಿ ಕೈಯಿಂದ ಜಾರುವ ಅಥವಾ ಕಷ್ಟಕರವಾದ ಆ ಕ್ಯಾಚ್ ಅನ್ನು ಕನೋಲಿ ತಮ್ಮ ಚುರುಕಾದ ಅಥ್ಲೆಟಿಕ್ ಸಾಮರ್ಥ್ಯದ ಮೂಲಕ ಅದ್ಭುತ ವಿಕೆಟ್ ಆಗಿ ಪರಿವರ್ತಿಸಿದರು. ಪರಿಣಾಮವಾಗಿ, ಕ್ರೀಸ್‌ಗೆ ಬಂದ ತಕ್ಷಣವೇ ಖಾತೆ ತೆರೆಯದೆ ಮಾರ್ಕ್ರಾಮ್ ಪೆವಿಲಿಯನ್ ಸೇರಬೇಕಾಯಿತು. ಕೇವಲ ಆಸ್ಟ್ರೇಲಿಯಾ ತಂಡಕ್ಕೆ ಮಾತ್ರವಲ್ಲದೆ ಇಡೀ ಸ್ಟೇಡಿಯಂಗೆ ರೋಚಕತೆ ತಂದುಕೊಟ್ಟ ಈ ಅದ್ಭುತ ಕ್ಯಾಚ್ ಪಂದ್ಯದ ಮುಖ್ಯ ಆಕರ್ಷಣೆಯಾಯಿತು. ಸದ್ಯ ಈ ಅದ್ಭುತ ಕ್ಯಾಚ್‌ನ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಕನೋಲಿಯ ಫೀಲ್ಡಿಂಗ್ ಕೌಶಲವನ್ನು ಕ್ರೀಡಾಭಿಮಾನಿಗಳು ಮುಕ್ತಕಂಠದಿಂದ ಪ್ರಶಂಸಿಸುತ್ತಿದ್ದಾರೆ.

Also Read
CSK ಕೋಚ್ ಹುದ್ದೆ ಒಪ್ಪಿಕೊಂಡಿದ್ದು ಹೇಗೆ? ಧೋನಿ, ಫ್ಲೆಮಿಂಗ್ ಬಗ್ಗೆ ಜಹೀರ್ ಖಾನ್ ಹೇಳಿದ್ದೇನು? Zaheer Khan
Cooper Connolly

ಮಾರ್ಕ್ರಾಮ್ ಪಾಲಿಗೆ ಈ ಪಂದ್ಯ ಕೇವಲ ಒಂದು ಸೋಲಿನ ಆರಂಭ ಮಾತ್ರವಲ್ಲದೆ ದೊಡ್ಡ ನಿರಾಶೆಯನ್ನೂ ತಂದಿತ್ತಿತು. ಟೋನಿ ಡಿ ಜಾರ್ಜಿ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಅವರು, ತಮ್ಮ ಕಂಬ್ಯಾಕ್ ಪಂದ್ಯದ ಮೊದಲ ಎಸೆತದಲ್ಲೇ ಡೌಕ್ ಔಟ್ ಆಗಿ ನಿರಾಸೆ ಅನುಭವಿಸಿದರು. ಮತ್ತೊಂದೆಡೆ, ಸ್ಟಾರ್ಕ್ ಅನುಪಸ್ಥಿತಿಯಲ್ಲಿ ಬೌಲಿಂಗ್ ಮುನ್ನಡೆಸಿದ ಹ್ಯಾಸಲ್‌ವುಡ್ ಎದುರಾಳಿ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಅನ್ನು ಆರಂಭದಲ್ಲೇ ಔಟ್ ಮಾಡುವ ಮೂಲಕ ಆಸೀಸ್‌ಗೆ ಭರ್ಜರಿ ಆರಂಭ ಒದಗಿಸಿಕೊಟ್ಟರು. ಒಟ್ಟಾರೆಯಾಗಿ, ಪಿಂಕ್ ಒಡಿಐ ಪಂದ್ಯದ ವಿಶೇಷ ವಾತಾವರಣದ ನಡುವೆ ಕೂಪರ್ ಕೊನೆಲ್ಲಿ ಹಿಡಿದ ಈ ಮೈಮರೆಸುವ ಕ್ಯಾಚ್ ಕ್ರಿಕೆಟ್ ಇತಿಹಾಸದಲ್ಲಿ ದೀರ್ಘಕಾಲ ನೆನಪಿನಲ್ಲಿ ಉಳಿಯುವಂತಹ ರೋಚಕ ಕ್ಷಣವಾಗಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net