ಕೆರಿಬಿಯನ್ ಪ್ರೀಮಿಯರ್ ಲೀಗ್ ಟಿ20 ದಿನಾಂಕ ನಿಗದಿ, ಐಪಿಎಲ್​​ಗೆ ಮತ್ತೊಂದು ತಲೆನೋವು!

cpl web
Published on

ಕಿಂಗ್‌ಸ್ಟನ್: ಈ ವರ್ಷದ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಟಿ20 ಟೂರ್ನಿಯ ದಿನಾಂಕ ನಿಗದಿಯಾಗಿದೆ. ಆಗಸ್ಟ್ 28ರಂದು ಟೂರ್ನಿ ಶುರುವಾಗಲಿದ್ದು, ಸೆಪ್ಟೆಂಬರ್ 19ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ. ಸೆಪ್ಟೆಂಬರ್‌ನಲ್ಲಿ ಐಪಿಎಲ್ ಮರುನಿಗದಿಗೊಳಿಸಲು ಮುಂದಾಗಿರುವ ಬಿಸಿಸಿಐಗೆ ಇದು ದೊಡ್ಡ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ. ಯಾಕೆಂದರೆ ವೆಸ್ಟ್ ಇಂಡೀಸ್‌ನ ಪ್ರಮುಖ ಆಟಗಾರರು ಸಿಪಿಎಲ್ ಮತ್ತು ಐಪಿಎಲ್ ಪೈಕಿ ಒಂದನ್ನು ಆಯ್ದುಕೊಳ್ಳಬೇಕಾಗುತ್ತದೆ. ಕ್ವಾರಂಟೈನ್ ನಿಯಮಗಳು ಕೂಡ ಎರಡೂ ಟೂರ್ನಿಯಲ್ಲಿ ಆಡುವ ಅವಕಾಶಕ್ಕೆ ಅಡ್ಡಿಯಾಗಿದೆ.

2020ರ ಸಿಪಿಎಲ್‌ನಂತೆ ಈ ಸಲವೂ ಬಯೋಬಬಲ್ ವಾತಾವರಣದಲ್ಲೇ ಟೂರ್ನಿ ನಡೆಯಲಿದೆ. ಕಳೆದ ವರ್ಷ ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ ಎಲ್ಲ ಪಂದ್ಯಗಳು ನಡೆದಿದ್ದರೆ, ಈ ಬಾರಿ ಎಲ್ಲ ಪಂದ್ಯಗಳು ಸೇಂಟ್ ಕಿಟ್ಸ್ ಮತ್ತು ನೆವಿಸ್ ದ್ವೀಪರಾಷ್ಟ್ರದ ವಾರ್ನರ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯಲಿವೆ.

ಕಳೆದ ವರ್ಷ ಸಿಪಿಎಲ್ ಟೂರ್ನಿಯ ವೀಕ್ಷಕರ ಸಂಖ್ಯೆ 2019ರ ಆವೃತ್ತಿಗಿಂತ ಶೇ. 67 ಹೆಚ್ಚಾಗಿತ್ತು. ಈ ವರ್ಷದ ಸಿಪಿಎಲ್‌ಗೆ ಮುನ್ನ ವೆಸ್ಟ್ ಇಂಡೀಸ್ ತಂಡ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 2 ಟೆಸ್ಟ್, 5 ಟಿ20, ಆಸ್ಟ್ರೇಲಿಯಾ ವಿರುದ್ಧ 5 ಟಿ20, 3 ಏಕದಿನ ಮತ್ತು ಪಾಕಿಸ್ತಾನ ವಿರುದ್ಧ 5 ಟಿ20, 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net