

ಸಿಡ್ನಿ: ಭಾರತದಲ್ಲಿ ಕೋವಿಡ್-19 ಎಂಬ ಮಹಾಮಾರಿ ಅಬ್ಬರಿಸುತ್ತಿದೆ. ಇಂಥ ಸನ್ನಿವೇಶದಲ್ಲಿ ಮುಂದಿನ ಅಕ್ಟೋಬರ್-ನವೆಂಬರ್ನಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ಟೂರ್ನಿ ಆಯೋಜಿಸುವುದು ಕಷ್ಟಕರ ಎಂದು ಆಸ್ಟ್ರೆಲಿಯಾದ ಮಾಜಿ ಕ್ರಿಕೆಟಿಗ ಮೈಕೆಲ್ ಹಸ್ಸೆ ಅಭಿಪ್ರಾಯಪಟ್ಟಿದ್ದಾರೆ. ಆಟಗಾರರು ಭಾರತಕ್ಕೆ ಹೋಗಲು ಹಿಂದೇಟು ಹಾಕಬಹುದು ಎಂದು ಎಂದು ಹೇಳಿದ್ದಾರೆ. ಐಪಿಎಲ್ ಫ್ರಾಂಚೈಸಿ ಸಿಎಸ್ಕೆ ತಂಡದ ಬ್ಯಾಟಿಂಗ್ ಕೋಚ್ ಆಗಿರುವ ಹಸ್ಸೆಗೂ ಲೀಗ್ ವೇಳೆ ಪಾಸಿಟಿವ್ ಕಾಣಿಸಿಕೊಂಡಿತ್ತು. ಆಸೀಸ್ ಆಟಗಾರರೊಂದಿಗೆ ತವರಿಗೆ ತೆರಳದೆ ಹಸ್ಸೆ ಪ್ರತ್ಯೇಕವಾಗಿ ತವರಿಗೆ ತೆರಳಿದ್ದರು.
ಇದನ್ನೂ ಓದಿ: ಭಾರತ ತಂಡಕ್ಕೆ ಕೋಚ್ ಆಗಲಿದ್ದಾರೆಯೇ ಕನ್ನಡಿಗ ರಾಹುಲ್?,
ಟಿ20 ವಿಶ್ವಕಪ್ ಆಯೋಜನೆ ಕುರಿತು ಬಿಸಿಸಿಐ ಮೇ 29 ರಂದು ವಿಶೇಷ ಸಾಮಾನ್ಯ ಸಭೆ ಕರೆದಿದೆ. ಅಲ್ಲದೆ, ಜೂನ್ 1 ರಂದು ಐಸಿಸಿ ಸಭೆಯೂ ನಡೆಯಲಿದೆ. ಈ ಎರಡು ಸಭೆಗಳಲ್ಲಿ ಟೂರ್ನಿ ಭವಿಷ್ಯ ನಿರ್ಧಾರವಾಗುವ ಸಾಧ್ಯತೆಗಳಿವೆ. ಒಂದು ವೇಳೆ ಭಾರತದಲ್ಲಿ ಟಿ20 ವಿಶ್ವಕಪ್ ಆಯೋಜಿಸಲು ಹಿಂದೇಟು ಹಾಕಿದರೂ ಯುಎಇಯನ್ನು ಬದಲಿ ತಾಣವಾಗುವ ಸಾಧ್ಯತೆಗಳಿವೆ.